WATCH: ಹಿಜಾಬ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಬಂಧಿಸಿ ಜೈಲಿಗಟ್ಟಿದ ಇರಾನ್!

Published : Aug 08, 2024, 01:43 PM ISTUpdated : Aug 08, 2024, 01:45 PM IST
WATCH: ಹಿಜಾಬ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಬಂಧಿಸಿ ಜೈಲಿಗಟ್ಟಿದ ಇರಾನ್!

ಸಾರಾಂಶ

ಹಿಜಾಬ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಇರಾನ್ ಯುವತಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.

ಇರಾನ್ (ಆ.8) ಹಿಜಾಬ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಇರಾನ್ ಯುವತಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.

ಇರಾನ್‌ನಲ್ಲಿ ಹಿಜಾಬ್ ಕಡ್ಡಾಯಗೊಳಿಸಲಾಗಿದೆ. ಮೆಟ್ರೋ, ಪಾರ್ಕ್, ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲದೇ ಓಡಾಡುವಂತಿಲ್ಲ. ಅಲ್ಲದೆ ಇರಾನ್ ಮಹಿಳೆಯರು ಸಾರ್ವಜನಿಕವಾಗಿ ಹಾಡುವುದು, ನೃತ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಹಿಜಾಬ್ ಧರಿಸದೇ ಸಾರ್ವಜನಿಕವಾಗಿ ಹಾಡನ್ನು ಹಾಡುವುದು ಪ್ರದರ್ಶನ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಸಿಂಗರ್ ಝರಾ ಎಸ್ಮೈಲಿ(Zara Esmaeili). ಇದು ಆಕೆಯ ಇಸ್ಲಾಮಿಕ್ ರಿಪಬ್ಲಿಕ್ ದಬ್ಬಾಳಿಕೆಯ ಕಾನೂನುಗಳ ವಿರುದ್ಧ ಪ್ರತಿಭಟನೆಯ ಒಂದು ರೂಪವಾಗಿದೆ ಎಂದು ಹೇಳಲಾಗುತ್ತಿದೆ.

ರಾತ್ರಿ ಬ್ರಾ ಹಾಕ್ಬೇಕಾ ಬೇಡ್ವಾ? ಕನ್ಫ್ಯೂಸ್‌‌ನಲ್ಲಿದ್ದಾರೆ ಇಸ್ರೇಲಿ ಮಹಿಳೆಯರು!

 ಹಿಜಾಬ್ ಇಲ್ಲದೆ ಸ್ವಾತಂತ್ರ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವ ಝರಾ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದಿದ್ದಾಳೆ. ಜೊತೆಗೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಝರಾ. ಇತ್ತೀಚೆಗೆ  ಆಮಿ ವೈನ್‌ಹೌಸ್‌ನ 'ಬ್ಯಾಕ್ ಟು ಬ್ಲ್ಯಾಕ್'(Amy Winehouses song 'Back to Black') ಹಾಡನ್ನು ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಹಾಡಿದ್ದು ಸೋಷಿಯಲ್ ಮಿಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಅನೇಕ ಕಟ್ಟರ್ ಮುಸ್ಲಿಮರು ತೀವ್ರವಾಗಿ ಖಂಡಿಸಿದ್ದರು.  ಎಲ್ಲೆಡೆ ಆಕ್ರೋಶ ಕೇಳಿಬಂದ ಹಿನ್ನೆಲೆ ಆಕೆಯನ್ನ ಬಂಧಿಸಿ ಜೈಲಿಗಟ್ಟಿದ ಪೊಲೀಸರು. ಆ ಬಳಿಕ ಆಕೆಯ ಇರುವಿಕೆ ಬಗ್ಗೆ ಸುಳಿವಿಲ್ಲ. ಕುಟುಂಬಸ್ಥರಿಗೆ ಸಹ ಬಂಧನ ಬಳಿಕ ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಎಲ್ಲಿದ್ದಾಳೆ, ಹೇಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಸಿಗದಿದ್ದಕ್ಕೆ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ

ಗಾಯಕಿ ಬಂಧನ ಖಂಡಿಸಿದ ಇರಾನ್ ಗಾಯಕ:

ಸಾರ್ವಜನಿಕವಾಗಿ ಹಿಜಾಬ್ ಇಲ್ಲದೆ ಹಾಡಿದ ಕಾರಣಕ್ಕೆ ಝರಾ ಇಸ್ಮೈಯಿಲಿ ಬಂಧನ ಮಾಡಿರುವುದನ್ನ ಇರಾನಿನ ಗಾಯಕ ಮತ್ತು ಬರ್ಲಿನ್ ಮೂಲದ ರೈಟ್ ಟು ಸಿಂಗ್ ಅಭಿಯಾನದ ಸಂಸ್ಥಾಪಕ ಫರ್ವೇಜ್ ಫರ್ವರ್ಡಿಸ್ ಖಂಡಿಸಿದ್ದಾರೆ. 

ಜಾರಾ, ಇರಾನಿನ ಮಹಿಳಾ ಗಾಯಕಿಯಾಗಿದ್ದು, ಸಾರ್ವಜನಿಕವಾಗಿ ಹಿಜಾಬ್ ಇಲ್ಲದೆ ಹಾಡಿದ ಅಪರಾಧಕ್ಕಾಗಿ ಟೆಹ್ರಾನ್ ಸೆಂಟ್ರಲ್ ಡಿಟೆನ್ಶನ್ ಸೆಂಟರ್ (ಫಶಾಫೌಹ್) ನಲ್ಲಿ ಸೆರೆಮನೆಯಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಸೆಪ್ಟಂಬರ್‌ನಲ್ಲಿ 22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿ ಬಂಧಿಸಲಾಗಿತ್ತು. ಬಂಧನದಲ್ಲಿದ್ದಾಗ ಸಾವನ್ನಪ್ಪಿದ್ದ ಮಹಿಳೆ. ಈ ಘಟನೆ ಬಳಿಕ ಇರಾನ್ ವಿರುದ್ಧ ರಾಷ್ಟ್ರವ್ಯಾಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಇದೀಗ ಮತ್ತೆ ಇರಾನಿನ ಗಾಯಕಿಯನ್ನ ಬಂಧಿಸಿರುವುದು ಆಕ್ರೋಶಕ್ಕೂ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!