ನಟಿಯಂತೆ ಕಾಣಲು ಸರ್ಜರಿ, ಕೊರೋನಾ ವಕ್ಕರಿಸಿ ಜೀವನ್ಮರಣ ಹೋರಾಟದಲ್ಲಿ ಸುಂದರಿ!

By Suvarna NewsFirst Published Apr 17, 2020, 8:55 PM IST
Highlights

ಜೀವನದ ಹೆಜ್ಜೆಯಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಉದ್ದೇಶಕಪೂರ್ವಕ ತಪ್ಪುಗಳಿಂದ ಜೀವನವೇ ದುಸ್ತರವಾಗಿರುವ ಅನೇಕ  ಊದಾಹರಣೆಗಳಿವೆ. ಹೀಗಿ ಸುಂದರಿಯೊಬ್ಬಳು ಮಾಡಿದ ಕೆಲ ತಪ್ಪುಗಳು ಇದೀಗ ಆಕೆಯನ್ನು ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಈ ಸುಂದರಿಯ ಕಹಾನಿ ಇಲ್ಲಿದೆ.

ಇರಾನ್(ಏ.17): ಅಂದಕ್ಕಾಗಿ, ದೇಹ ಸೌಂದರ್ಯಕ್ಕಾಗಿ ಸರ್ಜರಿ ಮಾಡಿಸಿಕೊಂಡರೆ ಒಂದಲ್ಲ ಒಂದು ಅಡ್ಡ ಪರಿಣಾಮ ಕಾಡದೇ ಇರದು. ಸಣ್ಣ ಪುಟ್ಟ ಸರ್ಜರಿಗಳಾದರೆ ಒಕೆ, ಸಂಪೂರ್ಣ ಮುಖವನ್ನೇ ಬದಲಾಯಿಸಲು ಹೊರಟರೆ ಅಪಾಯ ತಪ್ಪಿದ್ದಲ್ಲ. ಹೀಗೆ ಇರಾನ್‌ನ ಇನ್ಸ್‌ಸ್ಟಾಗ್ರಾಂ ಸ್ಟಾರ್ ಸಹರ್ ತಬರ್ ತನ್ನ ಸಹಜ ಸೌಂದರ್ಯ ಆಕೆಗೆ ತೃಪ್ತಿ ನೀಡುತ್ತಿರಲಿಲ್ಲ. ಇದಕ್ಕಾಗಿ ಅಮೆರಿಕದ ಖ್ಯಾತ ನಟಿ ಆ್ಯಂಜಲಿನಾ ಜೋಲಿಯಂತಾಗಲು ಹೋಗಿ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಸಹರ್ ತಬರ್ ಮಾಡಿದ ಅತೀ ದೊಡ್ಡ ತಪ್ಪು ತನ್ನ ಸೌಂದರ್ಯವನ್ನು ಬದಲಾಯಿಸಿದ್ದು. ಸಹರ್ ತಬರ್‌ಗೆ ಅಮೆರಿಕ ನಟಿ ಆ್ಯಂಜಲಿನಾ ಜೋಲಿ ರೀತಿ ಕಾಣಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಜ್ಯೂನಿಯರ್ ಆ್ಯಂಜಲಿನಾ ಜೋಲಿ ಎಂದು ಕರೆಯಿಸಿಕೊಳ್ಳಬೇಕು. ಇಷ್ಟೇ ಅಲ್ಲ ಸಿನಿ ತಾರೆಯರ ಜೊತೆ ಡೇಟಿಂಗ ನಡೆಸಬೇಕು ಅನ್ನೋದು ಈಕೆ ಲೆಕ್ಕಾಚಾರವಾಗಿತ್ತು. ಆದರೆ ಆಗಿದ್ದೆಲ್ಲವೂ ಉಲ್ಟಾ.

ಆ್ಯಂಜಲಿನಾ ಜೋಲಿ ರೀತಿ ಕಾಣಸಿಕೊಳ್ಳಲು ತನ್ನ ಸಹಜ ಸೌಂದರ್ಯಕ್ಕೆ ಕಡೆಗಣಿಸಿ ಸರ್ಜರಿ ಮಾಡಿಸಿದ್ದಾಳೆ. ಈ ಸರ್ಜರಿ ಬಳಿಕ ಸಹರ್ ತಬರ್ ಸೌಂದರ್ಯವೂ ಹಾಳಾಯ್ತು, ಅತ್ತ ಆ್ಯಂಜಲಿನಾ ಜೋಲಿಯಂತೆ ಕೂಡ ಕಾಣಿಸಲಿಲ್ಲ. ಸರ್ಜರಿ ಬಳಿಕ ಸಹರ್ ತಬರ್ ಮಾನಸಿಕವಾಗಿ ಕುಗ್ಗಿ ಹೋಗಿದಳು. ಇದರ ನಡುವೆ ಈಕೆ ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಮಾಡಿದ ಆರೋಪದಲ್ಲಿ ಜೈಲು ಸೇರಿದಳು. ಕಾರಣ ಇರಾನ್‌ನಲ್ಲಿ ಧರ್ಮನಿಂದನೆ ಅತೀ ದೊಡ್ಡ ಅಪರಾಧವಾಗಿದೆ.

ಹೀಗಾಗಿ ಕಳೆದ ಅಕ್ಟೋಬರ್‌ನಿಂದ ಜೈಲುಪಾಲಾಗಿದ್ದಾಳೆ. ಒಂದೆಡೆ ಸಹರ್ ತಬರ್ ಮುಖ ನೋಡಲಾಗುತ್ತಿಲ್ಲ. ಇಷ್ಟೇ ಆಗಿದ್ದರೆ ಜೀವನವೇನೋ ಸಾಗುತ್ತಿತ್ತು. ಆದರೆ ಜೈಲಿನಲ್ಲಿ ಮಾರ್ಚ್ ತಿಂಗಳ ಆರಂಭದಲ್ಲಿ ಕೊರೋನಾ ಸೋಂಕು ತಗುಲಿದೆ. ಮೊದಲೆ ಆರೋಗ್ಯ ಹದಗೆಟ್ಟಿತ್ತು. ಇದರ ನಡುವೆ ಕೊರೋನಾ ಕೂಡ ವಕ್ಕಿರಿಸಿದೆ. ಇತ್ತ ಕೊರೋನಾ ಸೋಂಕಿನಿಂದ ಸಹರ್ ತಬರ್ ಅಸ್ವಸ್ಥಗೊಂಡಿದ್ದಾಳೆ. ಆದರೆ ಇರಾನ್ ಕೋರ್ಟ್ ಈಕೆಗೆ ಬೇಲ್ ನೀಡಲು ನಿರಾಕರಿಸಿದೆ. ಹೀಗಾಗಿ ಸಾವು ಬದುಕಿನ ನಡುವೆ ಜೈಲಿನಲ್ಲೇ ಹೋರಾಡುತ್ತಿದ್ದಳು. ಮಾನವ ಹಕ್ಕುಗಳ ಸತತ ಹೋರಾಟದಿಂದ ಇದೀಗ ಸಹರ್ ತಬರ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಉಸಿರಾಡುತ್ತಿದ್ದಾಳೆ. 

click me!