ಕೊರೋನಾ ವೈರಸ್ ಚೀನಾದಿಂದ ಇತರ ದೇಶಗಳಿಗೆ ಹರಡುತ್ತಿದ್ದಂತೆ ಚೀನಾ ಮೇಲೆ ಗಂಭೀರ ಆರೋಪಗಳು ಕೇಳಿ ಬಂತು. ಚೀನಾ ವೈರಸ್, ವುಹಾನ್ ವೈರಸ್ ಅನ್ನೋ ಮಾತುಗಳು ಹರಿದಾಡಿತ್ತು. ಬಳಿಕ ಚೀನಾದ ಪ್ರಯೋಗಾಲಯದಿಂದಲೇ ವೈರಸ್ ಹರಡಿದೆ ಅನ್ನೋ ಅಧ್ಯಯನ ವರದಿಗಳು ಚೀನಾವನ್ನು ಮತ್ತಷ್ಟು ಕೆರಳಿಸಿದೆ. ಇದೀಗ ಚೀನಾ ಸೃಷ್ಟಿಸಿದ ವೈರಸ್ ಅನ್ನೋ ಆರೋಪಕ್ಕೆ ಚೀನಾ ವಿದೇಶಾಂಗ ಸಚಿವ ಸ್ಪಷ್ಟನೆ ನೀಡಿದ್ದಾರೆ.
ಬೀಜಿಂಗ್(ಏ.17): ಕೊರೋನಾ ವೈರಸ್ ಚೀನಾದ ಪ್ರಯೋಗಾಲಯದಿಂದ ಹರಡಿದೆ. ವುಹಾನ್ ಪ್ರಯೋಗಾಲಯದಲ್ಲಿ ಬಾವಲಿಗಳ ಮೇಲಿನ ಅಧ್ಯಯನದಿಂದಲೇ ವೈರಸ್ ಹರಡಿದೆ ಅನ್ನೋ ಕೆಲ ಸಂಶೋಧನಾ ವರದಿಗಳು ಬಾರಿ ಸಂಚಲನ ಮೂಡಿಸಿತ್ತು. ಇಷ್ಟೇ ಅಲ್ಲ ಚೀನಾ ಉದ್ದೇಶಕಪೂರ್ವಕವಾಗಿ ವೈರಸ್ ಹರಡಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಸತತ ಆರೋಪಗಳಿಂದ ಬಸವಳಿದಿರುವ ಚೀನಾ ತಿರುಗೇಟು ನೀಡಿದೆ. ಇಷ್ಟೇ ಅಲ್ಲ ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿಕೆಯನ್ನು ಉಲ್ಲೇಖಿಸಿ ಆರೋಪಕ್ಕೆ ಉತ್ತರ ನೀಡಿದೆ.
'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!..
ಚೀನಾ ವಿದೇಶಾಂಗ ಸಚಿವ ಝಾಹ ಲಿಜಾನ್ ಇದೀಗ ಕೊರೋನಾ ವೈರಸ್ ಚೀನಾ ಸೃಷ್ಟಿ ಅನ್ನೋ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಚೀನಾ ಲ್ಯಾಬ್‌ನಿಂದ ವೈರಸ್ ಹರಡಿದೆ ಅನ್ನೋದಕ್ಕೆ ಯಾವುದೇ ಪುರಾವೆಗಳು, ಆಧಾರಗಳಿಲ್ಲ. ಚೀನಾ, ವೈರಸ್, ವುಹಾನ್ ವೈರಸ್ ಅಥವಾ ಚೀನಾ ಸೃಷ್ಟಿ ಎಂದು ಉಲ್ಲೇಖಿಸುವುದು ತಪ್ಪು ಎಂದು ಆರೋಗ್ಯ ಸಂಸ್ಥೆ ಹೇಳಿತ್ತು. ಇದೀಗ ಇದೇ ಮಾತನ್ನು ಝಾಹ ಲಿಜಾನ್ ಪುನರುಚ್ಚರಿಸಿದ್ದಾರೆ.
ಚೀನಾದ ಕೊರೋನಾ ವೈರಸ್ ಪ್ರತಿದಿನದ ಅಪ್‌ಡೇಟ್ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಝಾಹ ಲಿಜಾನ್ ಉತ್ತರಿಸಿದರು. ನಾವು ಹಲವು ಬಾರಿ ಹೇಳಿದ್ದೇವೆ. ವೈರಸ್ ಸೃಷ್ಟಿಗೆ ಚೀನಾ ಕಾರಣವಲ್ಲ ಎಂದು. ನಾವು ಪ್ರಯೋಗಾಲಯದಲ್ಲಿ ಉದ್ದೇಶಪೂರ್ವಕವಾಗಿ ವೈರಸ್ ಹರಡಿದ್ದೇವೆ ಅನ್ನೋದಕ್ಕೆ ಯಾವ ದಾಖಲೆಯೂ ಇಲ್ಲ. ಇನ್ನೆಷ್ಟು ಬಾರಿ ಹೇಳಲಿ ಎಂದು ಝಾಹ ಲಿಜಾನ್ ಹೇಳಿದ್ದಾರೆ.
WHOಗೆ ಆರ್ಥಿಕ ನೆರವು ಕಟ್ ಮಾಡಿದ ಅಮೆರಿಕ, ಟ್ರಂಪ್ ನಿರ್ಧಾರಕ್ಕೆ ವಿಶ್ವವೇ ಹಿಡಿಶಾಪ!
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಚೀನಾ ವೈರಸ್ ಆರೋಪಕ್ಕೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ತುಪ್ಪ ಸುರಿದಿದ್ದರು. ಟ್ರಂಪ್ ನೇರವಾಗಿ ವೈರಸ್ ಹರಡಲು ಚೀನಾ ಕಾರಣ. ಇದು ಚೀನಾ ವೈರಸ್, ವುಹಾನ್ ವೈರಸ್ ಎಂದು ಆರೋಪ ಮಾಡಿದ್ದರು. ಈ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿತ್ತು. ಇಷ್ಟೇ ಅಲ್ಲ ಟ್ರಂಪ್‌ಗೆ ಎಚ್ಚರಿಕೆ ನೀಡಿತ್ತು. ಬಳಿಕ ವಿಶ್ವಆರೋಗ್ಯ ಸಂಸ್ಥೆ ಹಾಗೂ ಟ್ರಂಪ್ ನಡುವಿನ ಸಂಬಂಧ ಹದಗೆಟ್ಟಿತು.