
ಟೆಹರಾನ್ (ಮಾ.03) ಇರಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ದಾಳಿಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಇರಾನ್ ಪ್ರಮುಖರೇ ಬಲಿಯಾಗುತ್ತಿದ್ದಾರೆ. ಇರಾನ್ ಸೇನಾ ಮುಖ್ಯಸ್ಥನ ಬೆನ್ನಲ್ಲೇ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು. ಇದೀಗ ಇರಾನ್ ನೂತನವಾಗಿ ನೇಮಕ ಮಾಡಿದ ರಕ್ಷಣಾ ಸಚಿವ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಹತ್ಯೆಯಾಗಿದ್ದಾರೆ. ಅಮೇರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂತನ ಸಚಿವ ಹತ್ಯೆಯಾಗಿರುವುದಾಗಿ ಸ್ಪೆಕ್ಟೇಟರ್ ಇಂಡೆಕ್ಸ್ ವರದಿ ಮಾಡಿದೆ.
ಎರಡು ದಿನದ ಹಿಂದೆ ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ಇರಾನ್ ರಕ್ಷಣಾ ಸಚಿವ ಅಮಿರ್ ನಾಸಿರ್‌ಜದೇಹ್ ಹತ್ಯೆಯಾಗಿದ್ದರು. ಹೀಗಾಗಿ ಇರಾನ್ ಹಂಗಾಮಿ ನಾಯಕನ ಆಯ್ಕೆ ವೇಳೆ ನೂತನ ರಕ್ಷಣಾ ಸಚಿವರಾಗಿ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಒಂದೇ ದಿನಕ್ಕೆ ಇಸ್ರೇಲ್ ಹಾಗೂ ಅಮೆರಿಕ ಟಾರ್ಗೆಟ್ ಮಾಡಿ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ಕಳೆದ ನಾಲ್ಕು ದಿನದಿಂದ ಇಸ್ರೇಲ್ ಹಾಗೂ ಅಮೆರಿಕ ಸತತ ದಾಳಿ ನಡೆಸುತ್ತಿದೆ. ನಾಲ್ಕು ದಿನದಲ್ಲಿ 1,700 ಏರ್‌ಸ್ಟ್ರೈಕ್ ನಡೆಸಿದೆ. ಈ ಕುರಿತು ಡೋನಾಲ್ಡ್ ಟ್ಕಂಪ್ ಹೇಳಿದ್ದಾರೆ. ಇರಾನ್ ಬಳಿಕ ದಾಳಿ ನಡೆಸಲು ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದೆ. ಈಗ ಮಾತುಕತೆಗೆ ಮುಂದಾಗಿದ್ದಾರೆ. ಆದರೆ ಸಮಯ ಮೀರಿ ಹೋಗಿದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ದಾಳಿ ಮುಂದುವರಿಯಲಿದೆ ಎಂದು ಟ್ರಂಪ್ ಸಂದೇಶ ರವಾನಿಸಿದ್ದಾರೆ.
ಇರಾನ್‌ನಲ್ಲಿ ಇದೀಗ ಆತಂಕ ಹೆಚ್ಚಾಗುತ್ತಿದೆ. ಇರಾನ್ ಪ್ರಮುಖ ನಾಯಕರನ್ನೇ ಟಾರ್ಗೆಟ್ ಮಾಡಿ ಇಸ್ರೇಲ್ ಅಮೆರಿಕ ದಾಳಿ ನಡೆಸುತ್ತಿದೆ. ಸತತ ಸಭೆಗಳು ನಡೆಯುತ್ತಿದೆ. ಇದೇ ವೇಳೆ ಇರಾನ್ ಪ್ರತಿ ದಾಳಿ ನಡೆಸುತ್ತಿದೆ. ಅಮೆರಿಕಾ ಸೇನಾ ನೆಲಗಳನ್ನು, ರಾಯಬಾರ ಕಚೇರಿಗಳನ್ನು ಟಾರ್ಗೆಟ್ ಮಾಡಿ ದಾಳ ಮಾಡುತ್ತಿದೆ. ಇಸ್ರೇಲ್ ಪ್ರಮುಖ ನಗರಳ ಮೇಲೆ ಮಿಸೈಲ್ ದಾಳಿ ನಡೆಸುತ್ತಿದೆ ಟೆಲ್ ಅವೀವ್ ಸೇರಿದಂತೆ ಕೆಲ ನಗರದ ಮೇಲೆ ಇರಾನ್ ದಾಳಿ ಮಾಡಿದೆ. ಇದೀಗ ಅಮೆರಿಕದ ಮೇಲೆ ದಾಳಿ ಮಾಡಲು ಇರಾನ್ ಮುಂದಾಗಿದೆ ಅನ್ನೋ ಮಾಹಿತಿಯನ್ನು ಅಮೆರಿಕಾ ಗುಪ್ತಚರ ಇಲಾಖೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ