ಅಣ್ವಸ್ತ್ರ ಸಮರದತ್ತ ಮಧ್ಯಪ್ರಾಚ್ಯ ಫೈಟ್‌, ಇರಾನ್‌ನ ನಟಾನ್ಜ್ ಪರಮಾಣು ಕೇಂದ್ರದ ಮೇಲೆ ಮಿಸೈಲ್‌ ದಾಳಿ?

Published : Mar 02, 2026, 03:59 PM IST
Natanz nuclear facility was attacked

ಸಾರಾಂಶ

ಇರಾನ್‌ನ ನಟಾನ್ಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿರುವುದಾಗಿ ಇರಾನ್ ಆರೋಪಿಸಿದೆ. ಆದರೆ, ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ಇದನ್ನು ನಿರಾಕರಿಸಿದೆ. ಇದೇ ವೇಳೆ, ಇಬ್ಬರು ಹಿರಿಯ ಇರಾನಿನ ಗುಪ್ತಚರ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಖಚಿತಪಡಿಸಿದೆ.

ವಿಯೆನ್ನಾ (ಮಾ.2): ಇಸ್ರೇಲ್‌ ಹಾಗೂ ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ನಡೆಸುತ್ತಿರುವ ಯುದ್ಧ ನಿಧಾನಾಗಿ ಅಣ್ವಸ್ತ್ರ ಸಮರವಾಗಿ ಬದಲಾಗುವ ಸಾಧ್ಯತೆಯೇ ಹೆಚ್ಚಾಗಿ ಕಾಣು್ತಿದೆ. ಇರಾನ್‌ನ ಪ್ರಮುಖ ಮತ್ತು ವಿಶಾಲವಾದ 'ನಟಾನ್ಜ್' (Natanz) ಪರಮಾಣು ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ಜಂಟಿ ದಾಳಿ ನಡೆಸಿರುವುದನ್ನು ಇರಾನ್ ಅಧಿಕೃತವಾಗಿ ಖಚಿತಪಡಿಸಿದೆ. ಸೋಮವಾರ ನಡೆದ ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ (IAEA) 35 ರಾಷ್ಟ್ರಗಳ ಮಂಡಳಿಯ ಸಭೆಯಲ್ಲಿ ವಿಶ್ವಸಂಸ್ಥೆಯ ಇರಾನ್ ರಾಯಭಾರಿ ರೆಜಾ ನಜಾಫಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

"ಸುರಕ್ಷಿತವಾಗಿದ್ದ ಇರಾನ್‌ನ ಶಾಂತಿಯುತ ಪರಮಾಣು ಕೇಂದ್ರಗಳ ಮೇಲೆ ನಿನ್ನೆ ಮತ್ತೊಮ್ಮೆ ದಾಳಿ ಮಾಡಲಾಗಿದೆ" ಎಂದು ನಜಾಫಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಯಾವ ಸ್ಥಾವರಕ್ಕೆ ಹಾನಿಯಾಗಿದೆ ಎಂಬ ಸುದ್ದಿಸಂಸ್ಥೆ 'ರಾಯಿಟರ್ಸ್'ನ ಪ್ರಶ್ನೆಗೆ ಉತ್ತರಿಸಿದ ಅವರು, "ನಟಾನ್ಜ್ ಪರಮಾಣು ಕೇಂದ್ರವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ" ಎಂದು ಸ್ಪಷ್ಟಪಡಿಸಿದರು.

ಪರಮಾಣು ಸಂಸ್ಥೆಗೆ ದಾಳಿ ಆಗಿಲ್ಲ ಎಂದ ವಿಶ್ವಸಂಸ್ಥೆ

ಇರಾನ್‌ನ ನಟಾಂಜ್ ಪರಮಾಣು ಸೌಲಭ್ಯವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಗಳು ನಡೆದಿವೆ ಎಂದು ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ (ಐಎಇಎ)ಯ ಇರಾನ್ ರಾಯಭಾರಿ ಹೇಳಿದ್ದಾರೆ. ಇರಾನ್ ಇದನ್ನು ಅಂತರರಾಷ್ಟ್ರೀಯ ಮೇಲ್ವಿಚಾರಣೆಗೆ ಒಳಪಟ್ಟ ಪರಮಾಣು ಕೇಂದ್ರ ಎಂದು ಹೇಳಿದೆ. ಇದರ ನಡುವೆ, ವಿಶ್ವಸಂಸ್ಥೆಯ ಪರಮಾಣು ಮೇಲ್ವಿಚಾರಣಾ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರೋಸಿ, ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಇರಾನ್‌ನಲ್ಲಿರುವ ಯಾವುದೇ ಪರಮಾಣು ಸ್ಥಾಪನೆಗೆ ಹಾನಿಯಾಗಿದೆ ಅಥವಾ ದಾಳಿ ಮಾಡಲಾಗಿದೆ ಎಂಬುದಕ್ಕೆ ತಮ್ಮ ಸಂಸ್ಥೆಗೆ ಯಾವುದೇ ಸೂಚನೆ ಇಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ಪಡೆಗಳು ಜಂಟಿಯಾಗಿ ನಡೆಸುತ್ತಿರುವ ಈ ಕಾರ್ಯಾಚರಣೆಯು ಮಧ್ಯಪ್ರಾಚ್ಯದಲ್ಲಿ ತಲ್ಲಣ ಮೂಡಿಸಿದೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಹತ್ತಿಕ್ಕುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇರಾನ್‌ನ ಹಿರಿಯ ಗುಪ್ತಚರ ಅಧಿಕಾರಿಗಳ ಹತ್ಯೆ ಖಚಿತಪಡಿಸಿದ ಇಸ್ರೇಲ್‌

ಫೆಬ್ರವರಿ 28 ರಂದು ಇರಾನ್ ಮೇಲೆ ನಡೆಸಿದ ಮೊದಲ ಹಂತದ ಭೀಕರ ದಾಳಿಯಲ್ಲಿ ಇರಾನ್‌ನ ಇಬ್ಬರು ಅತ್ಯಂತ ಹಿರಿಯ ಗುಪ್ತಚರ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಸೋಮವಾರ ತಿಳಿಸಿದೆ. ಇಸ್ರೇಲ್ ಮಿಲಿಟರಿ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಹತರಾದವರನ್ನು ಸಯ್ಯದ್ ಯಾಹ್ಯಾ ಹಮೀದಿ ಮತ್ತು ಜಲಾಲ್ ಪೋರ್ ಹುಸೇನ್ ಎಂದು ಗುರುತಿಸಲಾಗಿದೆ.

ಸಯ್ಯದ್ ಯಾಹ್ಯಾ ಹಮೀದಿ, ಇರಾನ್‌ನ ಗುಪ್ತಚರ ಇಲಾಖೆಯ 'ಇಸ್ರೇಲ್ ವ್ಯವಹಾರಗಳ ಉಪ ಸಚಿವ'ನಾಗಿ ಕಾರ್ಯನಿರ್ವಹಿಸುತ್ತಿದ್ದ. ಇರಾನ್ ಮತ್ತು ವಿದೇಶಗಳಲ್ಲಿ ಯಹೂದಿಗಳು, ಪಾಶ್ಚಿಮಾತ್ಯ ದೇಶದ ವ್ಯಕ್ತಿಗಳು ಹಾಗೂ ಇರಾನ್ ಸರ್ಕಾರದ ವಿರೋಧಿಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳ ನೇತೃತ್ವವನ್ನು ಈತ ವಹಿಸಿದ್ದ ಎಂದು ಇಸ್ರೇಲ್ ಆರೋಪಿಸಿದೆ.

ಜಲಾಲ್ ಪೋರ್ ಹುಸೇನ್, ಈತ ಇರಾನ್ ಗುಪ್ತಚರ ಸಚಿವಾಲಯದ 'ಬೇಹುಗಾರಿಕಾ ವಿಭಾಗ'ದ ಮುಖ್ಯಸ್ಥನಾಗಿದ್ದ ಎಂದು ಇಸ್ರೇಲ್ ಹೇಳಿಕೊಂಡಿದೆ. ಈ ಇಬ್ಬರು ಪ್ರಮುಖ ಅಧಿಕಾರಿಗಳ ಜೊತೆಗೆ ಇರಾನ್ ಸರ್ಕಾರದ ಇನ್ನೂ ಹಲವು ಹಿರಿಯ ಭಯೋತ್ಪಾದಕರನ್ನು ಈ ಕಾರ್ಯಾಚರಣೆಯಲ್ಲಿ ಎಲಿಮಿನೇಟ್ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮ್ಮದೇ ನಾಯಕನ ಸಾವಿಗೆ ಕಾರಣರಾದ ಟ್ರಂಪ್​ಗೆ ಹೃದಯಾಳದ ಧನ್ಯವಾದ: ಆಗಸದಲ್ಲಿ ಥ್ಯಾಂಕ್ಯೂ ಸಂದೇಶ!
ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಕೊನೆಗೂ ಮೌನ ಮುರಿದ ಚೀನಾ; ಖಡಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?