1 ಕೋಟಿ ಮೌಲ್ಯದ ನೋಟು ಬಿಡುಗಡೆ ಮಾಡಿದ ಇರಾನ್‌

Kannadaprabha News   | Kannada Prabha
Published : Mar 22, 2026, 04:57 AM IST
Iran

ಸಾರಾಂಶ

ಯುದ್ಧದಿಂದ ತೀವ್ರ ಜರ್ಝರಿತವಾಗಿರುವ ಇರಾನ್ ಈಗ 10 ದಶಲಕ್ಷ ರಿಯಾಲ್‌ (1 ಕೋಟಿ ರು.) ಮೌಲ್ಯದ ನೋಟು ಬಿಡುಗಡೆ ಮಾಡಿದೆ. ಇಷ್ಟೊಂದು ದೊಡ್ಡ ಮೊತ್ತದ ಕರೆನ್ಸಿಯನ್ನು ಬಿಡುಗಡೆ ಮಾಡುತ್ತಿರುವುದು ಇರಾನ್‌ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಟೆಹರಾನ್‌: ಯುದ್ಧದಿಂದ ತೀವ್ರ ಜರ್ಝರಿತವಾಗಿರುವ ಇರಾನ್ ಈಗ 10 ದಶಲಕ್ಷ ರಿಯಾಲ್‌ (1 ಕೋಟಿ ರು.) ಮೌಲ್ಯದ ನೋಟು ಬಿಡುಗಡೆ ಮಾಡಿದೆ. ಇಷ್ಟೊಂದು ದೊಡ್ಡ ಮೊತ್ತದ ಕರೆನ್ಸಿಯನ್ನು ಬಿಡುಗಡೆ ಮಾಡುತ್ತಿರುವುದು ಇರಾನ್‌ ಇತಿಹಾಸದಲ್ಲಿ ಇದೇ ಮೊದಲಾಗಿದೆ.

22 ದಿನಗಳಿಂದ ನಡೆಯುತ್ತಿರುವ ಯುದ್ಧ

22 ದಿನಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಇರಾನ್‌ನ ಅರ್ಥವ್ಯವಸ್ಥೆ ತೀವ್ರ ಅಧೋಗತಿಗಿಳಿದಿದೆ. ಯುದ್ಧ ಮತ್ತು ಆರ್ಥಿಕ ಸಂಕಷ್ಟಗಳು ದೇಶದ ಹಣಕಾಸು ಸ್ಥಿತಿಯನ್ನು ಸಂಪೂರ್ಣವಾಗಿ ಹದಗೆಡಿಸಿದ್ದು, ದೇಶದ ಕರೆನ್ಸಿಯಾದ ರಿಯಾಲ್‌ನ ಮೌಲ್ಯ ಪಾತಾಳಕ್ಕಿಳಿದಿದೆ. ಇರಾನ್‌ನ 4500 ರು. ಮೌಲ್ಯ ಭಾರತದ 1 ರು.ಗೆ ಸಮನಾಗಿದೆ. ಹೀಗಾಗಿ ಅನಿವಾರ್ಯವಾಗಿ ಇರಾನ್‌ ಹೆಚ್ಚಿನ ಮೌಲ್ಯದ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಇತ್ತೀಚೆಗಷ್ಟೇ 50 ಲಕ್ಷ ಮೌಲ್ಯದ ರಿಯಾಲ್‌ ಅನ್ನು ಇರಾನ್‌ ಬಿಡುಗಡೆ

ಇತ್ತೀಚೆಗಷ್ಟೇ 50 ಲಕ್ಷ ಮೌಲ್ಯದ ರಿಯಾಲ್‌ ಅನ್ನು ಇರಾನ್‌ ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ 1 ಕೋಟಿ ಮೌಲ್ಯದ ಕರೆನ್ಸಿಯನ್ನು ಬಿಡುಗಡೆ ಮಾಡಲಾಗಿದೆ.

ಆರ್ಥಿಕ ನಿರ್ಬಂಧ ಹಾಗೂ ಯುದ್ಧದಿಂದಾಗಿ ದೇಶದಲ್ಲಿ ಹಣದುಬ್ಬರ ಮಿತಿಮೀರಿದ್ದು, ಇದರ ಜತೆಗೆ ಇಂಟರ್ನೆಟ್‌ ಸೌಲಭ್ಯ ಕಡಿತದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಭಾರೀ ಹೊಡೆತ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ ತೈಲದ ಮೇಲಿನ ಅಮೆರಿಕ ನಿರ್ಬಂಧ ತೆರವು - ವೈರಿ ದೇಶದ ಬಗ್ಗೆ ಮೆತ್ತಗಾದರೆ ಟ್ರಂಪ್‌?
ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ