WATCH: ಅಮೆರಿಕ ಅಧ್ಯಕ್ಷನನ್ನೇ ಜೈಲಿಗೆ ಹಾಕಿದ ಇರಾನ್! ಮದುವೆ ಮನೆ ಮೇಲಿನ ದಾಳಿಗೆ ಈ ಪರಿ ಸೇಡು

Published : Oct 24, 2026, 01:40 PM ISTUpdated : Oct 24, 2026, 01:51 PM IST
Donald Trump in Iran jail billboard

ಸಾರಾಂಶ

ಇರಾನ್‌ನ ಮದುವೆ ಮನೆಯೊಂದರ ಮೇಲೆ ಅಮೆರಿಕ ನಡೆಸಿದ ಭೀಕರ ಬಾಂಬ್ ದಾಳಿಯನ್ನು ಖಂಡಿಸಿ ಟೆಹ್ರಾನ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸಲಾಗಿದೆ. ರಸ್ತೆಯ ಬೃಹತ್ ಡಿಜಿಟಲ್ ಪರದೆಯ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೈಲಿನಲ್ಲಿಟ್ಟಿರುವಂತಹ ದೃಶ್ಯವನ್ನು ಪ್ರದರ್ಶಿಸುವ ಮೂಲಕ ಇರಾನ್ ಅಣಕಿಸಿದೆ.

ಇರಾನ್ ಮೇಲೆ ಅಮೆರಿಕ ಮೇಲೆ ದಾಳಿ ಮಾಡಿದಾಗ ಆ ದೇಶದ ಕತೆ ಮುಗಿದೇ ಹೋಯ್ತು ಎಂದು ಜಗತ್ತು ಭಾವಿಸಿತ್ತು. ಅಮೆರಿಕ ತನ್ನೆಲ್ಲ ಸೈನಿಕ ಶಕ್ತಿ ಒಟ್ಟು ಸೇರಿಸಿ ಇರಾನ್ ಮುಗಿಸಲು ಭಾರೀ ದಾಳಿ ನಡೆಸಿತು. ಜನವಸತಿ, ಮದುವೆ ಮನೆ, ಮಕ್ಕಳು ಎಂಬುದನ್ನ ನೋಡದೆ ಬಾಂಬ್ ಸುರಿಮಳೆಗೆರೆಯಿತು. ಆದರೆ ಇರಾನ್ ಇಂದಿಗೂ ಅಮೆರಿಕಕ್ಕೆ ಬಗ್ಗುತ್ತಿಲ್ಲ. ಬದಲಾಗಿ ಡೊನಾಲ್ಡ್ ಟ್ರಂಪ್ ವಿರುದ್ಧ ವಿಷ ಕಾರುತ್ತಲೇ ಇದೆ. ಇತ್ತೀಚೆಗೆ ಇರಾನ್ ನಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮದ ಮನೆ ಮೇಲೆಯೂ ದಾಳಿ ನಡೆಸಿದ್ದ ಅಮೆರಿಕ. ಇದರಿಂದ ಇರಾನ್ ತನ್ನದೇ ರೀತಿಯಲ್ಲಿ ಅಮೆರಿಕ ಡೊನಾಲ್ಡ್‌ ಟ್ರಂಪ್‌ಗೆ ಅಣಕಿಸುವ ಮೂಲಕ ಮತ್ತಷ್ಟು ಉರಿಸಿದೆ.

ಹೌದು. ಇರಾನ್ ರಾಜಧಾನಿ ಟೆಹ್ರಾನ್ ತಜ್ರೀಶ್ ಚೌಕ್‌ ಯಾವಾಗಲೂ ಜನರಿಂದ ತುಂಬಿ ತುಳುಕಿರುತ್ತದೆ. ವಾಹನಗಳ ಓಡಾಟ.. ಅಲ್ಲಿ ಯಾರಿಗೂ ನಿಲ್ಲಲೂ ಸಮಯವಿರುವುದಿಲ್ಲ. ಆದರೆ ಇದಕ್ಕಿದ್ದಂತೆ ಜನ ರಸ್ತೆಯಲ್ಲಿ ನಿಂತು ಆ ದೃಶ್ಯವೊಂದು ನೋಡುತ್ತಿದ್ದಾರೆ, ಕೆಲವರು ಫೋಟೋ ತೆಗೆದು ಶೇರ್ ಮಾಡಿಕೊಳ್ಳುತ್ತಿದ್ದಾರೆ.. ಅಲ್ಲಿ ಕಾಣುತ್ತಿರುವ ದೃಶ್ಯವೇ ಹಾಗಿದೆ.

ಇರಾನ್ ಜೈಲಿನಲ್ಲಿ ಡೊನಾಲ್ಡ್ ಟ್ರಂಪ್!

ದೊಡ್ಡದೊಂದು ಜಾಹೀರಾತು ಫಲಕದ (ಬಿಲ್‌ಬೋರ್ಡ್) ಅದರ ಮೇಲೆ ಜೈಲಿನ ಕೊಠಡಿಯಂತ ಚಿತ್ರವಿದೆ. ಆ ಜೈಲಿನ ಒಳಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಂತಿದ್ದಾನೆ! ಅತ್ತಿಂದಿತ್ತ ಓಡಾಡುತ್ತಿದ್ದಾನೆ! ಇರಾನ್ ಜನರಿಗೆ ಮೊದಲಿಗೆ ಈ ದೃಶ್ಯ ನೋಡಿ ಶಾಕ್ ಆಗಿದೆ. ವೆನೆಜುವೆಲಾ ಅಧ್ಯಕ್ಷನ ಸೆರೆಹಿಡಿದಂತೆ ಅಮೆರಿಕದ ಅಧ್ಯಕ್ಷನನ್ನೇ ಇರಾನ್ ಸೆರೆಹಿಡಿದ ಜೈಲಿಗೆ ಹಾಕಿತಾ ಇರಾನ್ ಎಂದು ಅಚ್ಚರಿಪಡುವಂತಿದೆ ಈ ದೃಶ್ಯ.

ಅಸಲಿಗೆ ಅದು ಡೊನಾಲ್ಡ್ ಟ್ರಂಪ್ ಅಲ್ಲ, ಆತನನ್ನೇ ಹೋಲುವಂತೆ ವಿಗ್ ಧರಿಸಿದ ವ್ಯಕ್ತಿಯೊಬ್ಬ ಕಂಬಿಗಳ ಹಿಂದೆ ನಿಂತಿದ್ದಾನೆ. ಜೈಲಿನೊಳಗೆ ಒಂದು ಸಣ್ಣ ಹಾಸಿಗೆ, ಶೌಚಾಲಯ, ಕೈತೊಳೆಯುವ ಸಿಂಕ್ ಎಲ್ಲವೂ ಇದೆ. ಅದರೊಳಗಿನ ಆ ನಕಲಿ ಟ್ರಂಪ್ ಜೈಲಿನ ಕಂಬಿ ಹಿಡಿದು ಅಲುಗಾಡಿಸುವುದು, ಸುಮ್ಮನೆ ಮಲಗುವುದು, ಮತ್ತೆ ಎದ್ದು ಬರುವುದು ಹೀಗೆ ಡ್ರಾಮಾ ಮಾಡುತ್ತಿದ್ದಾನೆ.

ಅಷ್ಟಕ್ಕೂ ಇರಾನ್ ಹೀಗೆಕೆ ಅಣಕಿಸಿದೆ ಗೊತ್ತಾ?

ಹೋದ ತಿಂಗಳು ದಕ್ಷಿಣ ಇರಾನ್‌ನ ಕುಹೆಸ್ತಾಕ್ ಎಂಬ ಪಟ್ಟಣದಲ್ಲಿ ನಡಿತಿದ್ದ ಮದುವೆ ಮನೆ ಮೇಲೆ ಅಮೆರಿಕ ಭೀಕರ ಬಾಂಬ್ ದಾಳಿ ನಡೆಸಿತ್ತು. ಅದರ ಪರಿಣಾಮ ಎಷ್ಟಿತ್ತೆಂದರೆ ಮದುವೆ ಸಂಭ್ರಮದಲ್ಲಿದ್ದ ಇಡೀ ಕುಟುಂಬ ಕ್ಷಣಾರ್ಧದಲ್ಲಿ ಒಂದು ಕುರುಹೂ ಸಿಗದಂತೆ ಸುಟ್ಟು ಬೂದಿಯಾದರು. ಮದುವೆ ಮನೆಯ ಸಂಭ್ರಮದಲ್ಲಿ ಜನರ ಸಾವು-ನೋವುಗಳ ಕಣ್ಣೀರ ಕೋಡಿ ಹರಿದಿತ್ತು. ಈ ರಕ್ತಸಿಕ್ತ ಘಟನೆಯನ್ನು ಖಂಡಿಸಿ, ಟೆಹ್ರಾನ್ ನಗರ ಪಾಲಿಕೆಯ ಸಂಸ್ಥೆ ಈ ರೀತಿ ನಿರ್ಮಿಸಿ ವಿಭಿನ್ನವಾಗಿ ಅಮೆರಿಕ ವಿರುದ್ಧ ಪ್ರತಿಭಟಿಸಿದೆ. ಈ ದೃಶ್ಯದ ಕಲಾಕೃತಿ ಇರಾನ್ ನಾಗರಿಕರ ಗಮನ ಸೆಳೆಯುತ್ತಿದೆ.

ಜೈಲಲ್ಲಿ ಓಡಾಡುತ್ತಿರುವುದು ಜೀವಂತ ಮನುಷ್ಯನಾ?

ಅಲ್ಲ, ಇದೊಂದು ಡಿಜಿಟಲ್ ಸ್ಕ್ರೀನ್. ಅದರ ಮೇಲೆ ಮದುವೆ ಮನೆಯ ಮೇಲೆ ನಡೆದ ದಾಳಿಯ ದೃಶ್ಯಗಳು, ಅಪರಾಧ ಸ್ಥಳದ ಸಾಕ್ಷ್ಯಗಳನ್ನು ನಿರಂತರವಾಗಿ ಪ್ರದರ್ಶಿಸಲಾಗುತ್ತಿದೆ. ಇದು ಕೇವಲ ಒಂದು ದಿನದ ಪ್ರದರ್ಶನವಲ್ಲ, ಸತತ 15 ದಿನಗಳ ಕಾಲ ಅಮೆರಿಕದ ವಿರುದ್ಧ ನಡೆಯುತ್ತಿರುವ ದೊಡ್ಡ ಅಭಿಯಾನದ ಭಾಗವಿದು.

ಅಮೆರಿಕ ಇರಾನ್ ನಡುವಿನ ಸಂಘರ್ಷ ಇನ್ನು ಮುಗಿದಿಲ್ಲ, ಮುಗಿಯುವ ಲಕ್ಷಣವೂ ಇಲ್ಲ. ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಇದರಿಂದ ಮತ್ತಷ್ಟು ಹೆಚ್ಚಲಿದೆ. ವಾಷಿಂಗ್ಟನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇರಾನ್ ಇಂಥ ವಿಚಿತ್ರ ಬಿಲ್ ಬೋರ್ಡ್‌ಗಳನ್ನು ನಿರ್ಮಿಸುತ್ತಿದೆ. ಅಲ್ಲದೇ ಇಂಥ ಬಿಲ್ ಬೋರ್ಡ್ ನಿರ್ಮಾಣ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಟ್ರಂಪ್ ಶವಪೆಟ್ಟಿಗೆಯಲ್ಲಿ ಮಲಗಿರುವಂತಹ ದೃಶ್ಯಗಳನ್ನು ಪ್ರದರ್ಶಿಸಲಾಗಿದ್ದು ನೆನಪಿದೆಯೇ? ಇನ್ನು ಸೋಷಿಯಲ್ ಮೀಡಿಯಾಗಳಲ್ಲಂತೂ ಟ್ರಂಪ್‌ರನ್ನು ಅಣಕಿಸುವ ಮೆಮೆಗಳನ್ನು ಇರಾನ್ ಬೆಂಬಲಿಗರು ನಿತ್ಯವೂ ಟ್ರೋಲ್ ಮಾಡುತ್ತಲೇ ಇರುತ್ತಾರೆ.

ಈ ಮದುವೆ ಮನೆಯ ಘಟನೆಯ ಬಗ್ಗೆ ಅಮೆರಿಕದ ರಕ್ಷಣಾ ಪಡೆ (US Central Command) ಪ್ರತಿಕ್ರಿಯಿಸಿದ್ದು, 'ಘಟನೆಯ ಬಗ್ಗೆ ಬಂದಿರುವ ವರದಿಗಳ ಬಗ್ಗೆ ನಮಗೆ ತಿಳಿದಿದೆ, ಆದರೆ ಅಮೆರಿಕದ ಸೇನೆ ಎಂದಿಗೂ ಮುಗ್ಧ ನಾಗರಿಕರನ್ನು ಗುರಿಯಾಗಿಸುವುದಿಲ್ಲ' ಎಂದು ಸ್ಪಷ್ಟನೆ ನೀಡಿದೆ. ಆದರೆ ಇದನ್ನ ಇರಾನ್ ಒಪ್ಪುತ್ತದೆಯೇ , ನೆವರ್, ಇರಾನ್ ಮಾತ್ರ ಟ್ರಂಪ್‌ರನ್ನು ಸಾರ್ವಜನಿಕವಾಗಿ ಜೈಲಿನ ಕಂಬಿಗಳ ಹಿಂದೆ ನಿಲ್ಲಿಸಿ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

40 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಚೀನಾಗೆ ಕಳುಹಿಸುತ್ತಿದೆ ಉತ್ತರ ಕೊರಿಯಾ; ಕಣ್ಣೀರ ಕಥೆ!
ಡೊನಾಲ್ಡ್ ಟ್ರಂಪ್‌ ಪತ್ನಿ ಮಧ್ಯಸ್ಥಿಕೇಲಿ ರಷ್ಯಾ-ಉಕ್ರೇನ್‌ ನಡುವೆ ಸ್ಥಳೀಯ ಕದನ ವಿರಾಮ