ಅಮೆರಿಕದ ದಾಳಿ ಬೆದರಿಕೆ: ಫ್ಲೈಟ್ ಹತ್ತಿ ಬಂದಿದ್ದ ಇರಾನ್ ನಿಯೋಗ ಬಸ್‌ನಲ್ಲಿ ವಾಪಸ್!

Kannadaprabha News   | Kannada Prabha
Published : Apr 16, 2026, 08:26 AM IST
Iran claims flight threat as US talks stall in Islamabad rav

ಸಾರಾಂಶ

ಪಾಕಿಸ್ತಾನದಲ್ಲಿ ಅಮೆರಿಕದೊಂದಿಗಿನ ಮಾತುಕತೆ ವಿಫಲವಾದ ನಂತರ, ಇರಾನ್‌ ನಿಯೋಗವು ಕ್ಷಿಪಣಿ ದಾಳಿಯ ಬೆದರಿಕೆಯಿಂದಾಗಿ ತಮ್ಮ ಪ್ರಯಾಣದ ಮಾರ್ಗವನ್ನು ಬದಲಿಸಿತು. ಟೆಹ್ರಾನ್‌ಗೆ ಸುರಕ್ಷಿತವಾಗಿ ಮರಳಲು ಅವರು ವಿಮಾನ, ರೈಲು ಮತ್ತು ಬಸ್‌ಗಳನ್ನು ಬಳಸಿದರು. 

ಬೆದರಿಕೆ ಇದ್ದ ಕಾರಣ ಮಾರ್ಗವೇ ಬದಲು । ವಂಚಕ ಅಮೆರಿಕದ ಮೇಲೆ ನಂಬಿಕೆ ಇಲ್ಲ

ಟೆಹ್ರಾನ್‌: ಪಾಕಿಸ್ತಾನದ ರಾಜಧಾನಿಯಲ್ಲಿ ಅಮೆರಿಕ ಜತೆಗಿನ ಸಂಧಾನ ಮಾತುಕತೆ ವಿಫಲವಾದ ಬಳಿಕ ಇರಾನ್‌ಗೆ ಮರಳಲಿದ್ದ ನಿಯೋಗಕ್ಕೆ ಬೆದರಿಕೆ ಇದ್ದ ಕಾರಣ ಅದು ನಡುನಡುವೆ ವಿಮಾನ ಬದಲಿಸಿ, ರೈಲು, ಬಸ್‌ ಪ್ರಯಾಣ ಮಾಡಿ ಸ್ವದೇಶಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ. ಈ ವಿಷಯವನ್ನು ನಿಯೋಗದೊಂದಿಗೆ ಬಂದಿದ್ದ ಇರಾನಿನ ರಾಜಕೀಯ ವಿಶ್ಲೇಷಕ ಮೊಹಮ್ಮದ್ ಮರಾಂಡಿ ಬಾಯ್ಬಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮರಾಂಡಿ, ‘ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ಸಂಸತ್‌ ಸ್ಪೀಕರ್‌ ಘಾಲಿಬಾಫ್‌ ಜತೆ ಮಾತುಕತೆಗೆಂದು ಇಸ್ಲಾಮಾಬಾದ್‌ಗೆ ಹೊರಟಿದ್ದಾಗಲೇ ನಾವಿದ್ದ ವಿಮಾನದ ಮೇಲೆ ದಾಳಿಯ ಬೆದರಿಕೆ ಬಂದಿದ್ದವು. ಆದ್ದರಿಂದ ಮರಳುವಾಗ ವಿಮಾನದ ಮೇಲೆ ಕ್ಷಿಪಣಿ ದಾಳಿ ಭೀತಿಯಿಂದ ನಾವು ಒಂದೇ ವಿಮಾನದಲ್ಲಿ ಟೆಹ್ರಾನ್‌ಗೆ ಪ್ರಯಾಣಿಸಲಿಲ್ಲ. ಬೇರೊಂದು ವಿಮಾನ ಹತ್ತಿ ಮಶಾದ್‌ಗೆ ಹೋದೆವು. ಅಲ್ಲಿಂದ ಟ್ರೈನ್‌, ಕಾರ್‌, ಬಸ್‌ನಲ್ಲಿ ಟೆಹ್ರಾನ್‌ ತಲುಪಿದೆವು’ ಎಂದು ಹೇಳಿದ್ದಾರೆ.

ಜತೆಗೆ ಅಮೆರಿಕವನ್ನು ‘ವಂಚಕ’ ಎಂದು ಕರೆದ ಮರಾಂಡಿ, ‘ನಾವು ಮತುಕತೆಯಲ್ಲಿ ತೊಡಗಿದ್ದ ವೇಳೆಯೂ ಅಲ್ಲ ನಮ್ಮ ಸೇನೆ ದಾಳಿಗೆ ತಯಾರಿ ನಡೆಸುತ್ತಲೇ ಇತ್ತು’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ!
'ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್​ ಆದೇಶ- ಏನಿದು ಕೇಸ್​?