ಬಹ್ರೇನ್‌ನಲ್ಲಿನ ಅಮೆರಿಕಾ ನೌಕಾ ನೆಲೆ ಮೇಲೆ ಇರಾನ್ ಬಾಂಬ್ ದಾಳಿ; ದಟ್ಟ ಹೊಗೆ

Published : Feb 28, 2026, 02:54 PM IST
Bahrain’s Juffair

ಸಾರಾಂಶ

ಬಹ್ರೇನ್‌ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆ ಮೇಲೆ ಇರಾನ್ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಜುಫೇರ್ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ದಾಳಿಗೂ ಮುನ್ನವೇ ಬಹ್ರೇನ್ ಸರ್ಕಾರ ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ತುರ್ತು ಎಚ್ಚರಿಕೆ ನೀಡಿತ್ತು.

ಅಮೆರಿಕಾ ಮಿಲಿಟರಿ ನೆಲೆ ಮೇಲೆ ಇರಾನ್ ಬಾಂಬ್ ದಾಳಿ

ಅಮೆರಿಕಾದ ಬಹ್ರೇನ್ ಮಿಲಟಿರಿ ನೆಲೆ ಮೇಲೆ ಇರಾನ್ ಬಾಂಬ್ ದಾಳಿ ನಡೆಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. Bahrain’s Juffair ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿರುವ ಬಗ್ಗೆ ವರದಿಗಳು ಬರುತ್ತಿವೆ. ಈ ದಾಳಿಗೂ ಮುನ್ನವೇ ಬಹ್ರೇನ್‌ನ ಆಂತರಿಕ ಸಚಿವಾಲಯವು ತುರ್ತು ಎಚ್ಚರಿಕೆಯನ್ನು ನೀಡಿ ನಾಗರಿಕರನ್ನು ಹತ್ತಿರದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುರ್ತು ಸಂದೇಶವನ್ನ ನೀಡಿದೆ. ಹಾಗಾಗಿ ನಾಗರೀಕರು ಅಪಾಯದಿಂದ ಪಾರಾಗುವ ಸಾಧ್ಯತೆಗಳಿವೆ.

ಮನೆಯಲ್ಲಿಯೇ ಸುರಕ್ಷಿತವಾಗಿರುವಂತೆ ತನ್ನ ಎಲ್ಲಾ ನಿವಾಸಿಗಳಿಗೆ ಕತಾರ್ ಮೊಬೈಲ್‌ನಲ್ಲಿ ಸಂದೇಶ ರವಾನಿಸಿದೆ. ಮನೆ ಅಥವಾ ಸುರಕ್ಷಿತ ಸ್ಥಳದಲ್ಲಿರಬೇಕು ಮತ್ತು ಮಿಲಿಟಿರಿ ನೆಲೆಗಳಿಂದ ದೂರವಿರುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ: BREAKING: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ರಾಷ್ಟ್ರಪತಿ ಭವನ ಉಡೀಸ್, ಗುಪ್ತ ಸ್ಥಳಕ್ಕೆ ಖಮೇನಿ ಶಿಫ್ಟ್!

ಇದನ್ನೂ ಓದಿ: Photos: ಮೋದಿ ಇಸ್ರೇಲ್‌ನಿಂದ ಹೊರಡುತ್ತಿದ್ದಂತೆ ಇರಾನ್ ಮೇಲೆ ಯುದ್ಧ ಸಾರಿದ ಟ್ರಂಪ್; ಟೆಹ್ರಾನ್ ಆಗಸದಲ್ಲಿ ಫೈಟರ್ ಜೆಟ್‌ಗಳ ಅಬ್ಬರ!

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Video: ಅಮೆರಿಕ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
Photos: ಮೋದಿ ಇಸ್ರೇಲ್‌ನಿಂದ ಹೊರಡುತ್ತಿದ್ದಂತೆ ಇರಾನ್ ಮೇಲೆ ಯುದ್ಧ ಸಾರಿದ ಟ್ರಂಪ್; ಟೆಹ್ರಾನ್ ಆಗಸದಲ್ಲಿ ಫೈಟರ್ ಜೆಟ್‌ಗಳ ಅಬ್ಬರ!