
ಇಸ್ಲಾಮಾಬಾದ್: ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಅಪರೇಷನ್ ಸಿಂದೂರ್‌ಗೆ ಸೋತು ಸುಣ್ಣವಾದ ಪಾಕಿಸ್ತಾನ, ಇನ್ನೂ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಚಾಳಿಯನ್ನು ಮುಂದುವರೆಸಿದೆ.
ಪಾಕ್ ಸಂಸತ್‌ನಲ್ಲಿ ಮಾತನಾಡಿದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ‘ಪಾಕಿಸ್ತಾನದ ಸೈಬರ್ ವೀರರು ಭಾರತದ ಐಪಿಎಲ್ ಕ್ರೀಡಾಕೂಟದಲ್ಲಿ ಅಳವಡಿಸಿದ್ದ ಫ್ಲಡ್ ಲೈಟ್‌ಗಳನ್ನು ಹ್ಯಾಕ್ ಮಾಡಿ ಪಂದ್ಯದ ವೇಳೆ ಅವುಗಳನ್ನು ಆಫ್ ಮಾಡಿದ್ದಾರೆ. ಅಲ್ಲದೆ, ಭಾರತದ ಅಣೆಕಟ್ಟುಗಳ ದ್ವಾರಗಳಿಗೆ ಪ್ರವೇಶ ಪಡೆದಿದ್ದಾರೆ’ ಎಂದಿದ್ದಾರೆ.
ಅವರು ಮಾತನಾಡಿದ ವಿಡಿಯೋ ಎಕ್ಸ್‌ನಲ್ಲಿ ಹರಿದಾಡುತ್ತಿದ್ದು, ‘ಪಾಕ್ ಸಚಿವರ ಪ್ರಕಾರ, ಪಾಕಿಸ್ತಾನದ ಸ್ವದೇಶಿ ಸೈಬರ್ ತಂತ್ರಜ್ಞಾನವು ಈಗ ಭಾರತದ ಜಲವಿದ್ಯುತ್ ಅಣೆಕಟ್ಟುಗಳ ನಿಯಂತ್ರಣ ವ್ಯವಸ್ಥೆಯನ್ನು ಹ್ಯಾಕ್ ಮಾಡುವಷ್ಟು ಬಲಿಷ್ಠವಾಗಿದೆ. ಏಕೆಂದರೆ, ಭಾರತದ ಅಣೆಕಟ್ಟುಗಳು ‘1234’ ವೈ-ಫೈ ಪಾಸ್‌ವರ್ಡ್ ಮೂಲಕ ಕಾರ್ಯನಿರ್ವಹಿಸುತ್ತವೆ’ ಎಂದು ಕಾಲೆಳೆದಿದ್ದಾರೆ.
ಆಪರೇಷನ್ ಸಿಂದೂರ್ ವೇಳೆಯೂ ಭಾರತದ ಡ್ರೋನ್, ಕ್ಷಿಪಣಿ, ವಾಯುನೆಲೆಗಳನ್ನು ಹೊಡೆದುರುಳಿಸಿರುವುದಾಗಿ ಸುಳ್ಳು ಹೇಳಿದ್ದ ಪಾಕಿಸ್ತಾನ, ಆ ಕುರಿತು ಸುಳ್ಳು ಫೋಟೋಗಳನ್ನೂ ಬಿಡುಗಡೆ ಮಾಡಿತ್ತು.
ಭಾರತ- ಚೀನಾ ನೇರ ವಿಮಾನಕ್ಕೆ ಮಾತುಕತೆ
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಹದೆಗೆಟ್ಟಿರುವ ಸಂಬಂಧ ಸುಧಾರಣೆಗೆ ಉಭಯ ದೇಶಗಳು ಪ್ರಯತ್ನಿಸುತ್ತಿದ್ದು, ಈ ನಡುವೆ ಎರಡು ದೇಶಗಳ ನಡುವೆ ಸ್ಥಗಿತಗೊಂಡಿರುವ ನೇರ ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ಮಾತುಕತೆ ನಡೆದಿದೆ.ಚೀನಾದ ಉಪ ವಿದೇಶಾಂಗ ಸಚಿವ ಸನ್ ವೀಡಾಂಗ್‌ರ ಇತ್ತೀಚಿನ ಭಾರತ ಭೇಟಿ ವೇಳೆ ಉಭಯ ದೇಶಗಳು ವ್ಯಾಪಾರ ಸಮಸ್ಯೆ ಇತ್ಯರ್ಥ ಹಾಗೂ ನೇರ ವಿಮಾನಯಾನ ಸೇವೆ ಮತ್ತೆ ಆರಂಭಿಸುವುದರ ಬಗ್ಗೆ ಮಾತುಕತೆ ನಡೆಸಿವೆ ಎನ್ನಲಾಗಿದೆ. ಎರಡೂ ದೇಶಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಕಳೆದೊಂದು ವರ್ಷದಿಂದ ಭಾರತ ಮತ್ತು ಚೀನಾ ನಡುವೆ ಸಂಬಂಧ ಸುಧಾರಣೆಯ ಮಾತುಕತೆಗಳು ನಡೆಯುತ್ತಿದ್ದು, ಅದರ ಭಾಗವಾಗಿ ಕಳೆದ 6 ವರ್ಷದಿಂದ ಸ್ಥಗಿತಗೊಂಡಿದ್ದ ಕೈಲಾಸ ಸರೋವರ ಯಾತ್ರೆ ಮತ್ತೆ ಆರಂಭವಾಗಿತ್ತು.
ಲಾಸ್ ಏಂಜಲೀಸ್ ಭದ್ರತೆ ಇದೀಗ ನೌಕಾಪಡೆಯ ಕಮಾಂಡೋಗಳಿಗೆ
ಲಾಸ್ ಏಂಜಲೀಸ್: ಕಳೆದೊಂದು ವಾರದಿಂದ ಲಾಸ್ ಏಂಜಲೀಸ್‌ನಲ್ಲಿ ಡೊನಾಲ್ಡ್ ಟ್ರಂಪ್ ವಲಸಿಗ ನೀತಿ ವಿರೋಧಿಸಿ ನಿರಂತರ ಪ್ರತಿಭಟನೆ ನಡೆಯುತ್ತಿದ್ದು ಶಮನವಾಗುವ ಲಕ್ಷಣವೇ ಕಾಣಿಸುತ್ತಿಲ್ಲ. ಈ ಬೆನ್ನಲ್ಲೇ ಅಮೆರಿಕದಲ್ಲಿ ವಾರಂತ್ಯದಲ್ಲಿ ಸರ್ಕಾರದ ವಿರುದ್ಧ ನಡೆಯಲಿರುವ ನೋ ಕಿಂಗ್ಸ್ ರ್‍ಯಾಲಿ ಹಿನ್ನೆಲೆಯಲ್ಲಿ ನೌಕಾಪಡೆ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಷ್ಟ್ರೀಯ ಗಾರ್ಡ್ ನಿಯೋಜಿಸಿದ್ದ ಟ್ರಂಪ್ ಆದೇಶಕ್ಕೆ ಫೆಡರಲ್ ನ್ಯಾಯಾಲಯ ತಡೆ ನೀಡಿದ ಒಂದು ದಿನದ ಬಳಿಕ ಲಾಸ್ ಏಂಜಲೀಸ್‌ಗೆ ನೌಕಾಪಡೆ ಕಮಾಂಡೋಗಳ ಆಗಮನವಾಗಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಕಮಾಂಡೋಗಳು ಸಶಸ್ತ್ರ ಸಮೇತರಾಗಿ ಭದ್ರತೆಗೆ ಮುಂದಾಗಿವೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ 17 ಅಂತಸ್ತಿನ ವಿಲ್‌ಶೈರ್ ಫೆಡರಲ್ ಕಟ್ಟಡದ ಹೊರಗೆ ಡಜನ್‌ಗಿಂತಲೂ ಹೆಚ್ಚು ಈ ನಡುವೆ ಮತ್ತೆ ಅಮೆರಿಕದಲ್ಲಿ ಟ್ರಂಪ್ ಮತ್ತು ಕ್ಯಾಲಿಫೋರ್ನಿಯಾ ಸರ್ಕಾರದ ವಿರುದ್ಧ ಸಮರ ಆರಂಭವಾಗಿದೆ. ರಾಷ್ಟ್ರೀಯ ಗಾರ್ಡ್ ನಿಯೋಜನೆಗೆ ತಡೆ ನೀಡಿದ ಕೋರ್ಟ್, ಗಾರ್ಡ್‌ನ ನಿಯಂತ್ರಣವನ್ನು ಕ್ಯಾಲಿಫೋರ್ನಿಯಾ ಗವರ್ನರ್‌ಗೆ ಹಿಂದಿರುಗಲು ಆದೇಶಿಸಿದ್ದಾರೆ. ಇದರ ವಿರುದ್ಧ ಟ್ರಂಪ್ಅ ಮೇಲ್ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಸುಮ್ಮನಾಗದೆ , ‘ ನಾನು ಲಾಸ್ ಏಂಜಲೀಸ್‌ಗೆ ಸೈನ್ಯವನ್ನು ಕಳುಹಿಸದಿದ್ದರೆ ಆ ನಗರವು ಈಗಲೇ ಹೊತ್ತಿ ಉರಿಯುತ್ತಿತ್ತು’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ನೀಟ್-ಯುಜಿ: ರಾಜಸ್ಥಾನದ ಮಹೇಶ್ ದೇಶಕ್ಕೆ ಪ್ರಥಮ
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ 2025ರ ಫಲಿತಾಂಶವನ್ನು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಶನಿವಾರ ಪ್ರಕಟಿಸಿದೆ. ರಾಜಸ್ಥಾನದ ಮಹೇಶ್ ಕುಮಾರ್ ದೇಶಕ್ಕೆ ಮೊದಲ ರ್‍ಯಾಂಕ್ ಹಾಗೂ ಮಧ್ಯ\ಪ್ರದೇಶದ ಉತ್ಕರ್ಷ್ ಅವಧಿಯಾ 2ನೇ ರ್‍ಯಾಂಕ್ ಪಡೆದಿದ್ದಾರೆ.
ಮಹಾರಾಷ್ಟ್ರದ ಕೃಶಾಂಗ ಜೋಶಿ, ದೆಹಲಿಯ ಮೃಣಾಲ್ ಕಿಶೋರ್ ಝಾ 3 ಮತ್ತು 4ನೇ ರ್‍ಯಾಂಕ್ ಪಡೆದಿದ್ದಾರೆ. ಮಹಿಳೆಯರಲ್ಲಿ ದೆಹಲಿಯ ಅವಿಕಾ ಅಗರ್ವಾಲ್ ಅಗ್ರಸ್ಥಾನ ಪಡೆದಿದ್ದು, 5ನೇ ರ್‍ಯಾಂಕ್ ಗಳಿಸಿದ್ದಾರೆ.
ಮೇ 4ರಂದು ಪರೀಕ್ಷೆ ನಡೆದಿತ್ತು. ದೇಶಾದ್ಯಂತ 5,468 ಕೇಂದ್ರಗಳಲ್ಲಿ ಒಟ್ಟು 22.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 12.36 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದವರಲ್ಲಿ 7.2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು 5.14 ಲಕ್ಷಕ್ಕೂ ಹೆಚ್ಚು ಪುರುಷ ಅಭ್ಯರ್ಥಿಗಳು ಸೇರಿದ್ದಾರೆ.
ಉತ್ತರ ಪ್ರದೇಶದಿಂದ (1.70 ಲಕ್ಷ) ಅತಿ ಹೆಚ್ಚು ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಮಹಾರಾಷ್ಟ್ರ (1.25 ಲಕ್ಷ) ಮತ್ತು ರಾಜಸ್ಥಾನ (1.19 ಲಕ್ಷ) ನಂತರದ ಸ್ಥಾನದಲ್ಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ