ಅಂತಾರಾಷ್ಟ್ರೀಯ ಕೋರ್ಟ್‌ನಿಂದ ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಅರೆಸ್ಟ್ ವಾರೆಂಟ್!

By Chethan Kumar  |  First Published Nov 21, 2024, 7:10 PM IST

ಇಸ್ರೇಲ್ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಕಳೆದ ಒಂದು ವರ್ಷದಿಂದ ಇಸ್ರೇಲ್ ಗಾಜಾ, ಲೆಬೆನಾನ್, ಇರಾನ್ ಸೇರಿದಂತೆ ಸುತ್ತಲೂ ದಾಳಿ ಮಾಡುತ್ತಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಇಸ್ರೇಲ್ ಪ್ರಧಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.


ಜಿನೆವಾ(ನ.21) ಉಗ್ರರ ವಿರುದ್ದ ಇಸ್ರೇಲ್ ಯುದ್ಧ ಅಂತ್ಯಗೊಂಡಿಲ್ಲ. ಒಮ್ಮೆ ಗಾಜಾ ಮೇಲೆ ದಾಳಿ ಮಾಡಿದರೆ ಮತ್ತೊಮ್ಮೆ ಲೆಬೆನಾನ್, ಇರಾನ್ ಹೀಗೆ ಸುತ್ತಲು ಮುತ್ತಿಕೊಂಡಿರುವ ಉಗ್ರರ ವಿರುದ್ದ ಇಸ್ರೇಲ್ ಕಾರ್ಯಾಚರಣೆ ಮಾಡುತ್ತಲೇ ಇದೆ. 2023ರ ಅಕ್ಟೋಬರ್ ತಿಂಗಳಲ್ಲಿ ಹಮಾಸ್ ಉಗ್ರರು ನಡೆಸಿದ ರಣಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಯುದ್ಧ ಸಾರಿದೆ. ಇಸ್ರೇಲ್ ಮೇಲೆ ವಿಶ್ವಸಂಸ್ಥೆ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಒತ್ತಡ ಬಂದರೂ ಜಗ್ಗದೇ ಯುದ್ಧ ಮುಂದುವರಿಸಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಯುದ್ಧ ಅಪರಾಧ, ಮಾನವ ಹಕ್ಕುಗಳ ಉಲ್ಲಂಘಟನೆ, ಅಮಾಯಕರ ಮೇಲೆ ಬಾಂಬ್, ಮಿಸೈಲ್ ದಾಳಿ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ನೆತನ್ಯಾಹು ವಿರುದ್ದ ಅರೆಸ್ಟ್ ವಾರೆಂಟ್ ನೀಡಿದೆ. ಇದೇ ವೇಳೆ ಹಮಾಸ್ ಉಗ್ರಸಂಘಟನೆ ಮುಖ್ಯಸ್ಥ ಮೊಹಮ್ಮದ್ ದಿಯಾಬ್ ಇಬ್ಬಾಹಿಂ, ಇಸ್ರೇಲ್ ಸೇನೆಯ ಮಾಜಿ ಸಚಿವ ಯೋಆವ್ ಗ್ಯಾಲೆಂಟ್ ವಿರುದ್ಧವೂ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.

Tap to resize

Latest Videos

undefined

ಗಾಜಾಗೆ ಭೇಟಿ ನೀಡಿದ ನೆತನ್ಯಾಹು; ಒತ್ತೆಯಾಳು ಬಿಡುಗಡೆಗೆ $5 ಮಿ ಡಾಲರ್ ಬಹುಮಾನ!

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ಉದ್ದೇಶಪೂರ್ವಕ ಹಾಗೂ ಪೂರ್ವನಿಗದಿ ದಾಳಿಗೆ ಹಮಾಸ್ ನಾಯಕನ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಇನ್ನು ನೇತನ್ಯಾಹೂ ಹಾಗೂ ಮಾಜಿ ರಕ್ಷಣಾ ಸಚಿವ ಇಬ್ಬರೂ ಗಾಜಾ ಮೇಲೆ ನಡೆಸಿದ ಭೀಕರ ದಾಳಿಗೆ ಬಂಧನ ವಾರೆಂಟ್ ನೀಡಲಾಗಿದೆ. ಇದೇ ವೇಳೆ ಇಸ್ರೇಲ್ ಈ ವಾರೆಂಟ್ ನಿರಾಕರಿಸದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ. ಈ ಹೇಳಿಕೆಗೆ ಮುಖ್ಯ ಕಾರಣ ವಿಶ್ವ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ವಿರುದ್ಧ ಖಂಡನೆ ವ್ಯಕ್ತವಾಗಿತ್ತು. ಇದೇ ಸಭೆಯಲ್ಲಿ ಪಾಲ್ಗೊಂಡು ಇಸ್ರೇಲ್ ವಿರುದ್ಧ ತೆಗೆದುಕೊಂಡ ಖಂಡನಾ ನಿರ್ಣಯವನ್ನು ಹರಿದು ಹಾಕಿದ್ದ ನೇತನ್ಯಾಹು, ಹಮಾಸ್ ಉಗ್ರರು ನಮ್ಮ ಅಮಾಯಕ ನಾಗರೀಕರ ಮೇಲೆ, ಹೆಣ್ಣು ಮಕ್ಕಳು, ಮಕ್ಕಳ ಮೇಲೆ ನಡೆಸಿದ ದಾಳಿ ನಿಮಗೆ ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಇಸ್ರೇಲ್ ಉಗ್ರರ ವಿರುದ್ಧ ಹೋರಾಡುತ್ತಿದೆ. ನಾಗರೀಕರ ವಿರುದ್ಧ ಅಲ್ಲ. ಇದಕ್ಕೆ ಖಂಡನೆ ವ್ಯಕ್ತಪಡಿರುವ ಈ ಖಂಡನಾ ನಿರ್ಣಯವನ್ನು ಇಸ್ರೇಲ್ ಪುಟಿ ಬಿಡಿಸಿ ನೋಡುವುದಿಲ್ಲ ಎಂದು ಹರಿದು ಹಾಕಿದ್ದರು. ಇಂತಹ ಯಾವುದೆ  ಬೆದರಿಕೆ ಇಸ್ರೇಲ್ ಮುಂದೆ ನಡೆಯಲ್ಲ ಎಂದಿದ್ದರು. ಇಷ್ಟೇ ಅಲ್ಲ ವಿಶ್ವಸಂಸ್ಥೆಯ ಕಾರ್ಯದರ್ಶಿ ಗಾಜಾಗೆ ಭೇಟಿಗೆ ಮುಂದಾಗಿರುವ ಮಾಹಿತಿ ಪಡೆದ ಇಸ್ರೇಲ್, ವಿಶ್ವಸಂಸ್ಥೆ ಕಾರ್ಯದರ್ಶಿ ಅಥವಾ ಪದಾಧಿಕಾರಿಗಳು ಕಾಲು ಇಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದ್ದರು. 

ಇದೀಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಹೊರಡಿಸಿದ ಅರೆಸ್ಟ್ ವಾರೆಂಟನ್ನು ಇಸ್ರೇಲ್ ತಿರಸ್ಕರಿಸಿದೆ. ಇದು ಉಗ್ರರ ವಿರುದ್ದ ಹೋರಾಟ. ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಹಾಗೂ ಇತರ ಉಗ್ರರ ಸಾಯುವವರಗೂ ವಿರಮಿಸುವುದಿಲ್ಲ. ಹಲವು ಘಟನೆಗಳ ಕುರಿತು ಮೌನವಾಗಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಇಸ್ರೇಲ್ ವಿರುದ್ದ ಹರಿಯಾಯಲು ಬರುತ್ತಿರುವುದೇಕೆ ಎಂದು ಪ್ರಶ್ನಿಸಿದೆ. 

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 1,200 ಇಸ್ರೇಲ್ ನಾಗರೀಕರು ಮೃತಪಟ್ಟಿದ್ದರು. 250 ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿ ಸೇರಿದಂತೆ ಸುತ್ತಲು ಇರುವ ಉಗ್ರರ ಮೇಲೆ ದಾಳಿ ನಡೆಸಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
 

click me!