
ಪ್ಯಾರಿಸ್ (ಜು.27) ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ನೀಡಿದ 70 ಗಂಟೆ ಕೆಲಸ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಈ ಹೇಳಿಕೆಯಿಂದ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಕಳೆದ ವರ್ಷ ಭಾರಿ ಚರ್ಚಯಾಗಿತ್ತು. ಇದೀಗ ಈ ಚರ್ಚೆ ತಣ್ಣಾಗದ ಬೆನ್ನಲ್ಲೇ ಇನ್ಫೋಸಿಸ್‌ಗೆ ಆಘಾತ ಎದುರಾಗಿದೆ. ಉದ್ಯೋಗಿಗಳ ಕೆಲಸ ಸಮಯದ ವಿಚಾರದಲ್ಲಿ ಲೋಪ ಪತ್ತೆಯಾಗಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. 70 ಗಂಟೆ ಅಲ್ಲ ವಾರದಲ್ಲಿ 35 ಗಂಟೆ ಮೀರುವಂತಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ.
ಫ್ರಾನ್ಸ್‌ನಲ್ಲಿರುವ ಇನ್ಫೋಸಿಸ್ ಕಚೇರಿಗೆ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಉದ್ಯೋಗಿಗಳ ಕೆಲಸದ ಸಮಯ, ಓವರ್ ಟೈಮ್ ಡ್ಯೂಟಿ ಸೇರಿದಂತೆ ಕಂಪನಿಯ ಎಂಪ್ಲಾಯ್ ಟೈಮ್ ಟ್ರಾಕಿಂಗ್‌ನಲ್ಲಿ ಗಂಭೀರ ಲೋಪಗಳನ್ನು ಪ್ಯಾರಿಸ್ ಸರ್ಕಾರ ಪತ್ತೆ ಹಚ್ಚಿದೆ. ಈ ಲೋಪ ಪತ್ತೆ ಹಚ್ಚಿದ ಫ್ರಾನ್ಸ್ ಕಾರ್ಮಿಕ ಇಲಾಖೆ 1,75,000 ಯುರೋ ( 2 ಕೋಟಿ ರೂಪಾಯಿ) ದಂಡ ವಿಧಿಸಿದೆ.
ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳ ಪ್ರತಿ ದಿನ, ವಾರದ ಒಟ್ಟು ಗಂಟೆ ಕೆಲಸ ಮಾಡಿದ ಸಮಯ ಲೆಕ್ಕ ಹಾಕುವ ಟ್ರಾಕಿಂಗ್‌ನಲ್ಲಿ ಹಲವು ಲೋಪಗಳಿವೆ. ಉದ್ಯೋಗಿಗಳು ಎಷ್ಟು ಗಂಟೆ ಕೆಲಸ ಮಾಡಿದ್ದಾರೆ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಉದ್ಯೋಗಿಗಳು ಹೆಚ್ಚುವರಿ ಸಮಯ ದುಡಿಸಿಕೊಳ್ಳಲಾಗುತ್ತಿದೆ ಅನ್ನೋ ಆರೋಪಗಳು ಇವೆ. ಇದಕ್ಕೆ ಪೂರಕವಾಗಿ ಟೈಮ್ ಟ್ರಾಕಿಂಗ್ ಲೋಪ ಪತ್ತೆಯಾಗಿದೆ. ಇನ್ಫೋಸಿಸ್ ಬಳಸುವ ಟೈಮ್ ಟ್ರಾಕಿಂಗ್ ಫ್ರಾನ್ಸ್ ಕಾನೂನಿಗೆ ಅನುಗುಣವಾಗಿಲ್ಲ ಎಂದು ಫ್ರಾನ್ಸ್ ಕಾರ್ಮಿಕ ಇಲಾಖೆ ದಂಡ ವಿಧಿಸಿದೆ. ತನಗೆ ವಿಧಿಸಿರುವ ಗಂಡ ಕುರಿತು ಇನ್ಫೋಸಿಸ್ ಇದೀಗ ಬಾಂಬೇ ಷೇರು ಮಾರುಕಟ್ಟೆ (BSE & NSE)ನಲ್ಲಿ ಉಲ್ಲೇಖಿಸಿದೆ.
ಫ್ರಾನ್ಸ್‌ನಲ್ಲಿ ಕಾರ್ಮಿಕ ನಿಯಮಗಳು ಕಠಿಣವಾಗಿದೆ. ಕಾರ್ಮಿಕರನ್ನು ಬೇಕಾಬಿಟ್ಟ ದುಡಿಸಿಕೊಳ್ಳುವಂತಿಲ್ಲ. ಟಾರ್ಗೆಟ್ ಸೇರಿದಂತೆ ಏನೇ ಇದ್ದರೂ ಹೆಚ್ಚಿಗೆ ದುಡಿಸಿಕೊಳ್ಳುವಂತಿಲ್ಲ. ಇನ್ನು ಓವರ್ ಟೈಮ್ ಮಾಡಿದರೂ ನಿರ್ದಿಷ್ಟ ಸಮಯ ಮೀರುವಂತಿಲ್ಲ. ಫ್ರಾನ್ಸ್‌ನಲ್ಲಿ ವಾರಕ್ಕೆ 35 ಗಂಟೆ ಕೆಲಸ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಇನ್ಫೋಸಿಸ್ ಉದ್ಯೋಗಿಗಳ ಟ್ರಾಕಿಂಗ್‌ನಲ್ಲಿ ಪಾರದರ್ಶಕತೆ ಇಲ್ಲ ಎಂದು ದಂಡದ ನೋಟಿಸ್‌ನಲ್ಲಿ ಹೇಳಿದೆ.
ಫ್ರಾನ್ಸ್ ದಂಡದ ಕುರಿತು ಕಾನೂನು ರೀತಿಯಲ್ಲಿ ಪರಿಶೀಲಿಸಲಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ. ಇದರಿಂದ ಕಂಪನಿಯ ಕಾರ್ಯಚಟುವಟಿಕೆಗೆ ಯಾವುದೇ ಸಮಸ್ಯೆ ಇಲ್ಲ. ಲೋಪದ ಕುರಿತು ಪರಿಶೀಲಿಸಲಾಗುತ್ತದೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದೆ. ಫ್ರಾನ್ಸ್‌ನಲ್ಲಿ ಇನ್ಫೋಸಿಸ್ ಆಫೀಸ್ ಹಾಜರಾಜಿ ಕಡ್ಡಾಯ ಮಾಡಿದೆ. ಹೈಬ್ರಿಡ್ ಮಾಡೆಲ್ ದೂರ ಸರಿಸಿ ಸಂಪೂರ್ಣ ಆಫೀಸ್ ಹಾಜರಾತಿಗೆ ಮುಂದಾಗಿದೆ. ಈ ಪ್ರಯತ್ನಗಳ ನಡುವೆ ಉದ್ಯೋಗಿಗಳ ಸಮಯದ ಕುರಿತು ದಂಡ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ