ಇಂಡೋನೇಷ್ಯಾದ ಪ್ರವಾಸಿ ದ್ವೀಪ ಬಾಲಿಯ ಅಧಿಕಾರಿಗಳು ಮಂಗಳವಾರ ಹಿಂದೂ ದೇಗುಲದಲ್ಲಿ ಬೆತ್ತಲೆಯಾಗಿ ಧ್ಯಾನ ಮಾಡುತ್ತಿರುವ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಾಲಿ (ಅಕ್ಟೋಬರ್ 5, 2023): ಇಂಡೋನೇಷ್ಯಾದ ಬಾಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆದರೂ, ಇಂಡೋನೇಷ್ಯಾದಲ್ಲಿ ಅನೇಕ ಹಿಂದೂ ದೇಗುಲಗಳೂ ಇವೆ. ಈ ದೇವಾಲಯವೊಂದರಲ್ಲಿ ವಿದೇಶಿ ಪ್ರಜೆ ಬೆತ್ತಲೆಯಾಗಿ ಧ್ಯಾನ ಮಾಡಿದ್ದಾರೆ ಎಂಧು ತಿಳಿದುಬಂದಿದೆ. ಈ ಸಂಬಂಧದ ವಿಡಿಯೋವೊಂದು ವೈರಲ್ ಆಗಿದೆ.
ಇಂಡೋನೇಷ್ಯಾದ ಪ್ರವಾಸಿ ದ್ವೀಪ ಬಾಲಿಯ ಅಧಿಕಾರಿಗಳು ಮಂಗಳವಾರ ಹಿಂದೂ ದೇಗುಲದಲ್ಲಿ ಬೆತ್ತಲೆಯಾಗಿ ಧ್ಯಾನ ಮಾಡುತ್ತಿರುವ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ಹಿನ್ನೆಲೆ ಇಂಡೋನೇಷ್ಯಾ ಸರ್ಕಾರ ಹುಡುಕಾಟ ನಡೆಸ್ತಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಮಲೇರಿಯಾ ತಡೆಗೆ ಈ ಲಸಿಕೆ ಬೆಸ್ಟ್: ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು
ಪ್ರಧಾನವಾಗಿ ಹಿಂದೂ ದ್ವೀಪದ ಸಂಸ್ಕೃತಿಗೆ ಅಗೌರವದ ಕೃತ್ಯಗಳು ಸೇರಿದಂತೆ ಹಲವಾರು ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಅನುಚಿತವಾಗಿ ವರ್ತಿಸುವ ಪ್ರವಾಸಿಗರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳೋದಾಗಿ ಪಾಮ್ ಫ್ರಿಂಜ್ಡ್ ಹಾಟ್‌ಸ್ಪಾಟ್ ಪ್ರತಿಜ್ಞೆ ಮಾಡಿದೆ. ಬಲಿನೀಸ್ ಇನ್ಫ್ಲ್ಯುಯೆನ್ಸರ್ ನಿ ಲುಹ್ ಡಿಜೆಲಾಂಟಿಕ್ ಶನಿವಾರ ಮತ್ತು ಭಾನುವಾರದ ನಡುವೆ ಹಲವಾರು ಬಾರಿ ವಿಡಿಯೋವನ್ನು ರೀಪೋಸ್ಟ್ ಮಾಡಿದ ನಂತರ ಹಿಂದೂ ದ್ವೀಪದಲ್ಲಿ ಈ ಪ್ರಕರಣವು ವ್ಯಾಪಕ ಗಮನವನ್ನು ಗಳಿಸಿದೆ. ಅಲ್ಲದೆ, ಈ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಆಕರ್ಷಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂದು ವಲಸೆ ಕಚೇರಿ ಮುಖ್ಯಸ್ಥ ಟೆಡಿ ರಿಯಾಂಡಿ ಮಂಗಳವಾರ ಎಎಫ್‌ಪಿಗೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದೇಶಿ ಪ್ರಜೆಯನ್ನು ಅಧಿಕಾರಿಗಳು ಗುರುತಿಸಿದ್ದಾರೆ, ಆದರೆ ಹುಡುಕಾಟ ನಡೆಯುತ್ತಿರುವುದರಿಂದ ಅವರ ಹೆಸರು ಮತ್ತು ರಾಷ್ಟ್ರೀಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. "ಪ್ರಸ್ತುತ ವಲಸೆ ಕಚೇರಿಯು ವಿದೇಶಿ ಪ್ರಜೆಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದು ರಿಯಾಂಡಿ ಹೇಳಿದರು.
ಇದನ್ನೂ ಓದಿ: ಜಗತ್ತಿನ ನಂ. 2 ಶ್ರೀಮಂತ ವ್ಯಕ್ತಿಗೆ ಶಾಕ್: ಪೊಲೀಸರ ತನಿಖೆ; ಕಾರಣ ಹೀಗಿದೆ..
ವಿದೇಶಿ ಪ್ರಜೆಯ ಹುಡುಕಾಟವನ್ನು ಬಾಲಿ ಪೊಲೀಸರೊಂದಿಗೆ ಸಮನ್ವಯಗೊಳಿಸಲಾಗುತ್ತಿದೆ ಮತ್ತು ಅವರು ಇನ್ನೂ ಸ್ಥಳ ಮತ್ತು ಸಮಯವನ್ನು ನಿರ್ಣಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಿದರು. ಪ್ರವಾಸಿ - ಅವಲಂಬಿತ ಬಾಲಿ ವಾರ್ಷಿಕವಾಗಿ ಲಕ್ಷಾಂತರ ವಿದೇಶಿ ಸಂದರ್ಶಕರನ್ನು ಆಕರ್ಷಿಸುತ್ತದೆ. ಆದರೆ ಕೋವಿಡ್ -19 ಸಾಂಕ್ರಾಮಿಕದ ನಂತರ ದ್ವೀಪವು ಪುನಃ ತೆರೆದಾಗಿನಿಂದ ಹಲವಾರು ಉನ್ನತ-ಪ್ರೊಫೈಲ್ ಪ್ರಕರಣಗಳು ಕೆಲವು ಅಶ್ಲೀಲ ಕೃತ್ಯಗಳಿಗಾಗಿ ಗಡೀಪಾರು ಮಾಡಲ್ಪಟ್ಟಿವೆ.
ಬಾಲಿ ಇಮಿಗ್ರೇಷನ್ ಜೂನ್‌ನಲ್ಲಿ ಡ್ಯಾನಿಶ್ ಮಹಿಳೆಯನ್ನು ಗಡೀಪಾರು ಮಾಡಿದ್ದು, ಅವರು ಮೋಟಾರ್‌ಬೈಕ್‌ನಲ್ಲಿ ಸವಾರಿ ಮಾಡುವಾಗ ಸಾರ್ವಜನಿಕರೆದುರು ತಮ್ಮ ಖಾಸಗಿ ಭಾಗಗಳನ್ನು ಪ್ರದರ್ಶನ ಮಾಡಿದ್ದರು. ಅಲ್ಲದೆ, ಪವಿತ್ರ ಮರವೊಂದರ ಮುಂದೆ ತನ್ನ ನಗ್ನ ಫೋಟೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ರಷ್ಯಾದ ಮಹಿಳೆಯೊಬ್ಬರನ್ನು ಏಪ್ರಿಲ್‌ನಲ್ಲಿ ದ್ವೀಪದಿಂದ ಹೊರಹಕಲಾಗಿತ್ತು.
ಇದನ್ನೂ ಓದಿ: ಇವ್ರೇ ನೋಡಿ ಪಾಕಿಸ್ತಾನದ ಶ್ರೀಮಂತ ಹಿಂದೂಗಳು: ಅವರ ಆಸ್ತಿ ಮೌಲ್ಯ, ವೃತ್ತಿ, ಇತರ ವಿವರ ಇಲ್ಲಿದೆ..
ಜೂನ್‌ನಲ್ಲಿ, ಸ್ಥಳೀಯ ಸರ್ಕಾರವು ದ್ವೀಪಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಿಯನ್ನು ಪ್ರಕಟಿಸಿತು.