ಕಮಲಾ ಹ್ಯಾರೀಸ್ ಪ್ರೆಗ್ನೆಂಟ್​, ಹೊಟ್ಟೆ ಹಿಡಿದ ಟ್ರಂಪ್​! ಎಲೆಕ್ಷನ್​ ಹೊತ್ತಿಗೆ ಇದೆಂಥ ಫೋಟೋ ವೈರಲ್​?

By Suchethana D  |  First Published Oct 26, 2024, 1:59 PM IST

ಕಮಲಾ ಹ್ಯಾರೀಸ್ ಪ್ರೆಗ್ನೆಂಟ್​, ಹೊಟ್ಟೆ ಹಿಡಿದ ಟ್ರಂಪ್​! ಅಮೆರಿಕದ ಎಲೆಕ್ಷನ್​ ಹೊತ್ತಿಗೆ ಇದೆಂಥ ಫೋಟೋ ವೈರಲ್​? ಅಸಲಿಯತ್ತೇನು?
 


ಅಮೆರಿಕದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಬರುವ ನವೆಂಬರ್ 5ರಂದು  ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು,  ಈ ಬಾರಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸ್ಪರ್ಧಿಸಲಿದ್ದಾರೆ. ಅಧ್ಯಕ್ಷ ಸ್ಥಾನದ ರೇಸ್‌ನಿಂದ ಜೋ ಬಿಡನ್ ನಿರ್ಗಮಿಸಿದ ತಕ್ಷಣ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದರಿಂದಾಗಿ  ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.   ಕತ್ತೆ ಮತ್ತು ಆನೆಯ ಚುನಾವಣಾ ಚಿಹ್ನೆ ಬಳಸಲಾಗಿದ್ದು, ಗೆಲ್ಲುವವರು ಯಾರು ಎನ್ನುವುದು ನೋಡಬೇಕಿದೆ.  ಡೆಮಾಕ್ರಟಿಕ್ ಪಕ್ಷದ ಚುನಾವಣಾ ಚಿಹ್ನೆ ಕತ್ತೆಯಾಗಿದ್ದರೆ, ರಿಪಬ್ಲಿಕನ್ ಪಕ್ಷದ ಚುನಾವಣಾ ಚಿಹ್ನೆ ಆನೆಯಾಗಿದೆ.  ಜನವರಿ 20 ರಂದು ಅಮೆರಿಕದ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಈಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಧ್ಯಕ್ಷ ಅಭ್ಯರ್ಥಿಗಳಾಗಿರುವ ಡೊನಾಲ್ಡ್​ ಟ್ರಂಪ್​ ಮತ್ತು ಕಮಲಾ ಹ್ಯಾರೀಸ್​ ಅವರ ಶಾಕಿಂಗ್​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿವೆ. ಇದರಲ್ಲಿ ಕಮಲಾ ಹ್ಯಾರೀಸ್​ ಗರ್ಭಿಣಿಯಾಗಿದ್ದರೆ, ಟ್ರಂಪ್​ ಅವರು ಕಮಲಾ ಅವರ ಹೊಟ್ಟೆಯನ್ನು ಹಿಡಿದು ನಿಂತಿದ್ದಾರೆ. ಈ ಡೀಪ್​ ಫೇಕ್​ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಇದಾಗಲೇ ಹಲವಾರು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ವಿಡಿಯೋ, ಫೋಟೋ ಡೀಪ್​ಫೇಕ್​ನಲ್ಲಿ ಹಂಗಾಮ ಸೃಷ್ಟಿಸಿರುವುದು ಗೊತ್ತೇ ಇದೆ. ಇದೀಗ ಟ್ರಂಪ್​ ಮತ್ತು ಕಮಲಾ ಅವರ ಫೋಟೋಗೂ ಹೀಗೆಯೇ ಆಗಿರುವುದು ಆತಂಕವನ್ನೂ ಸೃಷ್ಟಿಸುತ್ತಿದೆ. 

Tap to resize

Latest Videos

undefined

ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದ ನಟಿ ವಿದ್ಯಾ ಬಾಲನ್​! ಶಾಕಿಂಗ್​ ವಿಡಿಯೋ ವೈರಲ್​

ಇನ್ನು ಕಮಲಾ ಅವರ ಕುಟುಂಬದ ವಿಷಯ ಹೇಳುವುದಾದರೆ, ಕಮಲಾ ಹ್ಯಾರಿಸ್ ಅವರ ಪತಿ ಡೌಗ್ ಎಮ್ಹಾಫ್. ಇವರಿಗೆ ಇಬ್ಬರು ಮಕ್ಕಳು. ಇತ್ತೀಚೆಗಷ್ಟೇ ಡೌಗ್​ ಅವರು ತಮ್ಮ ಮೊದಲ ಪತ್ನಿಗೆ ಮೋಸ ಮಾಡಿರುವುದನ್ನು   ಒಪ್ಪಿಕೊಂಡಿದ್ದರು. ಮನೆಗೆ ಬರುತ್ತಿದ್ದ ದಾದಿಯ ಜತೆ ಸಂಬಂಧ ಹೊಂದಿದ್ದ ಡೌಗ್ ಎಮ್ಹಾಫ್ ಅವರು ಒಮ್ಮೆ ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದರು ಎಂಬ ಬ್ರಿಟಿಷ್ ಟ್ಯಾಬ್ಲಾಯ್ಡ್ ವರದಿಯೊಂದು ಸಂಚಲನ ಮೂಡಿಸಿತ್ತು. ಈ ವರದಿ ಬೆನ್ನಲ್ಲೇ ಎಮ್ಹಾಫ್ ತಪ್ಪೊಪ್ಪಿಕೊಂಡಿದ್ದರು.  2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರು ತಮ್ಮ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡುವುದಕ್ಕೂ ಮುನ್ನ, ಡೌಗ್ ಎಮ್ಹಾಫ್ ಅವರು ಹೊಂದಿದ್ದ ಸಂಬಂಧದ ಬಗ್ಗೆ ಸಮಿತಿಗೆ ಮಾಹಿತಿ ನೀಡಲಾಗಿತ್ತು ಎಂದು ತಿಳಿದು ಬಂದಿದೆ.
 
ಇನ್ನು ಡೊನಾಲ್ಡ್​ ಟ್ರಂಪ್​ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ವಾಸಿಸುತ್ತಿದ್ದಾರೆ. ಇವರಿಗೆ ಇದಾಗಲೇ ಮೂರು ಮದುವೆಯಾಗಿದೆ. ಗೂಗಲ್​ ಪ್ರಕಾರ, ಡೊನಾಲ್ಡ್​ ಟ್ರಂಪ್​ ಅವರ ಪತ್ನಿಯರು:  ಇವಾನಾ ಟ್ರಂಪ್ ( 1977 ರಿಂದ 1990), ಮಾರ್ಲಾ ಮ್ಯಾಪಲ್ಸ್ (1993 ರಿಂದ 1999) ಹಾಗೂ ಈಗ ಮೆಲಾನಿಯಾ ಟ್ರಂಪ್ (2005 ರಲ್ಲಿ ಮದುವೆ). ಈ ಮೂರು ಮದುವೆಗಳಿಂದ ಅವರಿಗೆ,  ಬ್ಯಾರನ್ ಟ್ರಂಪ್, ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಜೂನಿಯರ್, ಟಿಫಾನಿ ಟ್ರಂಪ್, ಎರಿಕ್ ಟ್ರಂಪ್ ಎಂಬ ಮಕ್ಕಳು ಇದ್ದಾರೆ. ಇನ್ನು ಅಮೆರಿಕ ಚುನಾವಣೆ ಕುರಿತು ಹೇಳುವುದಾದರೆ, ಚುನಾವಣೆ ಮೇಲೆ ರಷ್ಯ- ಉಕ್ರೇನ್ ಹಾಗೂ ಇಸ್ರೇಲ್​-ಹಮಾಸ್​ ಯುದ್ಧ ಗಂಭೀರ ಪರಿಣಾಮ ಬೀರುವಂತೆ  ಕಾಣಿಸುತ್ತಿದೆ.  ಅಮೆರಿಕ ಹಾಗೂ ನೇಟೋ ಪಡೆ ಉಕ್ರೇನ್ ಬೆಂಬಲಕ್ಕೆ ನಿಂತಿದೆ.   ಯುದ್ಧ ಆರಂಭವಾದ ದಿನದಿಂದಲೂ ಇಸ್ರೇಲ್‌ಗೆ ಅಮೆರಿಕ ಬೆಂಬಲವಾಗಿ ನಿಂತಿದೆ. ಹೀಗಾಗಿ, ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹೊಸದೊಂದು ಮೈತ್ರಿ ಕೂಟ ಸಜ್ಜಾಗುತ್ತಿದೆ ಎಂದೂ ಹೇಳಲಾಗುತ್ತಿದೆ.  

ಬಾಲಿವುಡ್​ ತಾರೆಯರ ಮರ್ಯಾದೆ ಹೀಗೆ ತೆಗೆಯೋದಾ ಕಂಗನಾ? ಬಿದ್ದೂ ಬಿದ್ದೂ ನಕ್ಕ ಪ್ರೇಕ್ಷಕರು

click me!