ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ: ಚೀನಾ ಕುಹಕ!

By Kannadaprabha News  |  First Published Jun 9, 2020, 7:11 AM IST

ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ| ಆಂದೋಲನ ಯಶಸ್ವಿಯಾಗಲ್ಲ: ಗ್ಲೋಬಲ್‌ ಟೈಮ್ಸ್| ವ್ಯಾಪಕ ಬಳಕೆ ಇದೆ, ಬಹಿಷ್ಕರಿಸಿದರೆ ಹೊರೆ: ಚೀನಾ


ನವದೆಹಲಿ(ಜೂ.09): ವಿಶ್ವದಾದ್ಯಂತ ಕೊರೋನಾ ವ್ಯಾಪಿಸಿದ ಬಳಿಕ ಹಾಗೂ ಲಡಾಖ್‌ನಲ್ಲಿ ಕಾಲು ಕೆರೆದು ಜಗಳಕ್ಕೆ ನಿಂತ ನಂತರದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ದೊಡ್ಡ ಕೂಗು ಭಾರತದಲ್ಲಿ ಎದ್ದಿದೆ. ಆದರೆ ಅದು ಸಫಲವಾಗುವುದಿಲ್ಲ ಎಂದು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಮುಖವಾಣಿ ಪತ್ರಿಕೆಯೊಂದು ಕುಹಕವಾಡಿದೆ.

ಚೀನಾ ಟೀಕಿಸಿದ್ದಕ್ಕೆ ಅಮೂಲ್‌ ಟ್ವೀಟರ್‌ ಖಾತೆಯೇ ಬ್ಲಾಕ್‌!

Tap to resize

Latest Videos

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಭಾರತದಲ್ಲಿ ಎದ್ದಿರಬಹುದು. ಆದರೆ ಚೀನಿ ಉತ್ಪನ್ನಗಳನ್ನು ಭಾರತೀಯರು ಪ್ರತಿಬಂಧಿಸುವುದು ಕಷ್ಟ. ಸ್ಮಾರ್ಟ್‌ಫೋನ್‌ ಹಾಗೂ ಮೊಬೈಲ್‌ ಅಪ್ಲಿಕೇಷನ್‌ಗಳಂತಹ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿರುವುದು ಚೀನಾಕ್ಕೆ ಕಳಂಕ ಮೆತ್ತಲು ಭಾರತದ ರಾಷ್ಟ್ರೀಯವಾದಿಗಳು ನಡೆಸಿರುವ ಕುತಂತ್ರ ಎಂದು ‘ಗ್ಲೋಬಲ್‌ ಟೈಮ್ಸ್‌’ ವರದಿ ಪ್ರಕಟಿಸಿದೆ.

ಅಲ್ಲದೆ ಇಂಥ ಯತ್ನ ಇದೇ ಮೊದಲಲ್ಲ. ಭಾರತ ಮತ್ತು ಚೀನಾ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದಾಗಲೆಲ್ಲಾ ಇಂಥ ಬೇಡಿಕೆ ವ್ಯಕ್ತವಾಗಿದೆ. ಆದರೆ, ಭಾರತದಲ್ಲಿ ನಡೆಯುತ್ತಿರುವ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಬಹುತೇಕ ವಿಫಲವಾಗಿದೆ. ಏಕೆಂದರೆ ಚೀನಾ ಉತ್ಪನ್ನಗಳನ್ನು ಭಾರತೀಯರು ಇಷ್ಟಪಡುತ್ತಾರೆ. ಅದನ್ನು ಬದಲಿಸಲಾಗದು. ಅಗ್ಗದ ಚೀನಾ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಹಾಗೊಂದು ವೇಳೆ ಬಹಿಷ್ಕರಿಸಿದರೆ ಭಾರತಕ್ಕೆ ಅದು ಹೊರೆಯಾಗಲಿದೆ ಎಂದು ತಜ್ಞರನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.

ಪಾಕ್ ಗೆ ಚೀನಾ ಬೆಂಬಲ: #BoycottChineseProducts ಸಮರ

ಜೊತೆಗೆ ಪತ್ರಿಕೆ ತನ್ನ ವರದಿಯಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದ ಲಡಾಖ್‌ನ ಸೋನಂ ವಾಂಗ್ಚುಕ್‌ (ತ್ರೀ ಈಡಿಯಟ್ಸ್‌ ಚಿತ್ರಕ್ಕೆ ಸೂರ್ತಿಯಾಗಿದ್ದ ವಿಜ್ಞಾನಿ) ಮತ್ತು ರೀಮೂವ್‌ ಚೀನಾ ಆ್ಯಪ್‌ ಎಂಬ ಆ್ಯಪ್‌ ಕುರಿತೂ ಪ್ರಸ್ತಾಪ ಮಾಡಿದೆ.

click me!