
ನ್ಯೂಯಾರ್ಕ್ (ಏ.21): ಕಳೆದ ಮಾರ್ಚ್ ತಿಂಗಳಿನಲ್ಲಿ ಅಮೆರಿಕದಲ್ಲಿ ನಡೆದ ಭಾರತೀಯ ಮೂಲದ ವಿದ್ಯಾರ್ಥಿಯ ಆತ್ಮಹತ್ಯೆಗೆ ಬ್ಲೂವೇಲ್ ಗೇಮ್ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಮಸಾಚ್ಯುಸೆಟ್ಸ್ ವಿವಿಯಲ್ಲಿ ಮೊದಲನೇ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ.
ಇದಕ್ಕೆ ಕಾರಣ ತಿಳಿದುಬಂದಿರಲಿಲ್ಲ. ಆದರೆ ಇತ್ತೀಚೆಗೆ ಲಭ್ಯವಾದ ಕೆಲ ಮಾಹಿತಿಗಳು ಆತ್ಮಹತ್ಯೆಗೆ ವಿದ್ಯಾರ್ಥಿ ಬ್ಲೂವೇಲ್ ಗೇಮ್ ಕಾರಣವಿರಬಹುದು ಎಂಬ ಸುಳಿವು ಲಭ್ಯವಾಗಿದೆ. ಹೀಗಾಗಿ ಆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಬ್ಲೂವೇಲ್ ಗೇಮ್?: 2015ರಲ್ಲಿ ಮೊದಲ ಬಾರಿಗೆ ರಷ್ಯಾದಲ್ಲಿ ಆಡಲಾದ ಈ ಆನ್‌ಲೈನ್ ಗೇಮ್ 4-5 ವರ್ಷಗಳ ಹಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ವ್ಯಾಪಿಸಿ ಹಲವರನ್ನು ಬಲಿ ಪಡೆದಿತ್ತು. ಇದರಲ್ಲಿ ಆಟ ನಿರ್ವಹಣೆ ಮಾಡುವ ಅನಾಮಿಕ ವ್ಯಕ್ತಿ, ಆನ್‌ಲೈನ್‌ನಲ್ಲಿ ಲಭ್ಯರಾಗುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು 50 ದಿನಗಳ ಅವಧಿಯಲ್ಲಿ ವಿವಿಧ ರೀತಿಯ ಸವಾಲುಗಳನ್ನು ನೀಡುತ್ತಾ ಹೋಗುತ್ತಾನೆ. ಉದಾಹರಣೆಗೆ ಮೊದಲಿಗೆ ಮಧ್ಯರಾತ್ರಿಯಲ್ಲಿ ಏಳುವ ಸವಾಲು ಇರಬಹುದು.
ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದರು: ಎಚ್.ಡಿ.ದೇವೇಗೌಡ
ಹಂತಹಂತವಾಗಿ ಸವಾಲಿನ ಗಂಭೀರತೆ ಹೆಚ್ಚುತ್ತಾ ಹೋಗುತ್ತದೆ. ಎತ್ತರದ ಕಟ್ಟಡದ ತುದಿಯಲ್ಲಿ ನಿಲ್ಲುವುದು, ಕೈ ಕತ್ತರಿಸಿಕೊಳ್ಳುವುದು, ಭೀತಿ ಹುಟ್ಟಿಸುವ ಚಲನಚಿತ್ರ ನೋಡುವುದು ಹೀಗೆ ಮುಂದುವರೆಯುತ್ತದೆ. ಅಂತಿಮ ಸವಾಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಬೆದರಿಕೆ, ಬ್ಲ್ಯಾಕ್‌ಮೇಲ್ ಅಥವಾ ಮಾನಸಿಕವಾಗಿ ಒತ್ತಡ ಹೇರಿ ಆಟಗಾರರನ್ನು ಬಲೆಗೆ ಬೀಳಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ