Russia Ukraine War: ಉಕ್ರೇನಲ್ಲಿ ರೆಸ್ಟೋರೆಂಟನ್ನು ಬಂಕರ್‌ ಆಗಿ ಪರಿವರ್ತಿಸಿದ ಭಾರತೀಯ ಮಾಲೀಕ!

Published : Mar 03, 2022, 10:37 AM IST
Russia Ukraine War: ಉಕ್ರೇನಲ್ಲಿ ರೆಸ್ಟೋರೆಂಟನ್ನು ಬಂಕರ್‌ ಆಗಿ ಪರಿವರ್ತಿಸಿದ ಭಾರತೀಯ ಮಾಲೀಕ!

ಸಾರಾಂಶ

*ರಷ್ಯಾದಲ್ಲಿದ್ದಾರ ಬಿಹಾರ ಮೂಲದ ಶಾಸಕ!: ರಷ್ಯಾ ದಾಳಿಗೆ ಅಭಯ್‌ ಸಿಂಗ್‌ ಸಮರ್ಥನೆ *ರೆಸ್ಟೋರೆಂಟನ್ನು ಬಂಕರ್‌ ಆಗಿ ಪರಿವರ್ತಿಸಿದ ಭಾರತೀಯ ಮಾಲೀಕ! *498 ಯೋಧರ ಸಾವು: ರಷ್ಯಾ ಮೊದಲ ಅಧಿಕೃತ ಹೇಳಿಕೆ *ವಿದೇಶಕ್ಕೆ ಹೋಗುವ ಶೇ.90 ವಿದ್ಯಾರ್ಥಿಗಳು ನೀಟ್‌ನಲ್ಲಿ ಅನುತ್ತೀರ್ಣ: ಪ್ರಹ್ಲಾದ ಜೋಶಿ

ರೆಸ್ಟೋರೆಂಟನ್ನು ಬಂಕರ್‌ ಆಗಿ ಪರಿವರ್ತಿಸಿದ ಭಾರತೀಯ ಮಾಲೀಕ!: ಉಕ್ರೇನ್‌ ವಿರುದ್ಧ ಸತತ 7 ದಿನಗಳಿಂದ ರಷ್ಯಾ ಯುದ್ಧ ನಡೆಸುತ್ತಿದೆ. ಈ ನಡುವೆ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ ಮಾಲೀಕರೊಬ್ಬರು ಅದನ್ನು ಬಂಕರ್‌ ಆಗಿ ಪರಿವರ್ತಿಸಿದ್ದಾರೆ. ಈ ಮೂಲಕ ಬಾಂಬ್‌, ಶೆಲ್‌, ರಾಕೆಟ್‌ ದಾಳಿ ಭೀತಿಯಲ್ಲಿರುವ ಜನರಿಗೆ ನೆರವಾಗಿದ್ದಾರೆ. ಮನೀಶ್‌ ದೇವ್‌ ತಮ್ಮ ‘ಸಾಥಿಯಾ’ (Saathiya) ರೆಸ್ಟೋರೆಂಟ್‌ ಅನ್ನು ಬಂಕರ್‌ ಆಗಿ ಪರಿವರ್ತಿಸಿದ್ದು ಇದರಲ್ಲಿ 130ಕ್ಕೂ ಹೆಚ್ಚು ಜನರು ಆಶ್ರಯ ಪಡೆಯಬಹುದಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೀಶ್‌, ‘ರಷ್ಯಾ ಯುದ್ಧ ಘೋಷಿಸಿದಾಗ ಜನರು ಕಂಗಾಲಾದ ಸಮಯದಲ್ಲಿ ಸಾತಿಯಾ ಕೇವಲ ಭಾರತೀಯರಿಗೆ ಮಾತ್ರವಲ್ಲದೆ ಉಕ್ರೇನಿನ ಸ್ಥಳೀಯರಿಗೂ ಆಶ್ರಯ ನೀಡಿದೆ. ಅವರಿಗೆ ಆಹಾರ, ನೀರು ಮುಂತಾದ ಅಗತ್ಯ ಸೌಕರ‍್ಯಗಳನ್ನೂ ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಮನೀಶ್‌ ಅಕ್ಟೋಬರ್‌ 2021ರಲ್ಲಿ ವಡೋದರದಿಂದ ಕೀವ್‌ಗೆ ತೆರಳಿ ರೆಸ್ಟೋರೆಂಟ್‌ ತೆರೆದಿದ್ದರು.

ಇದನ್ನೂ ಓದಿRussia Ukraine War: ರಷ್ಯಾ ಪರ ಇದ್ದ ಚೀನಾದಿಂದ ಈಗ ಉಕ್ರೇನ್‌ ಪರ ಬ್ಯಾಟಿಂಗ್‌

ರಷ್ಯಾದಲ್ಲಿದ್ದಾರೆ ಬಿಹಾರ ಮೂಲದ ಶಾಸಕ!:  ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ದಿನೇ ದಿನೇ ಭೀಕರ ರೂಪ ತಾಳುತ್ತಿರುವಾಗ ರಷ್ಯಾದಲ್ಲಿನ ಭಾರತದ ಬಿಹಾರ ಮೂಲದ ಶಾಸಕ ಡಾ.ಅಭಯ್‌ ಕುಮಾರ್‌ ಸಿಂಗ್‌, ರಷ್ಯಾದ ಆಕ್ರಮಣವನ್ನು ಸಮರ್ಥಿಸಿಕೊಂಡಿದ್ದಾರೆ. ಅಭಯ್‌ ಕುಮಾರ್‌ ಸಿಂಗ್‌, ಬಿಹಾರದ ಪಟನಾದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದಾರೆ. 1991ರಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ರಷ್ಯಾಗೆ ತೆರಳಿದ ಇವರು ರಷ್ಯಾದಲ್ಲಿ ತಮ್ಮದೇ ಆದ ವೈದ್ಯಕೀಯ ವ್ಯವಹಾರವನ್ನು ಆರಂಭಿಸಿದರು. 

ನಂತರದ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಆರಂಭಿಸಿದ ಇವರು, 2015ರಲ್ಲಿ ಪುಟಿನ್‌ ಅವರ ಪಕ್ಷವನ್ನು ಸೇರಿದರು. 2018ರಲ್ಲಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶಾಸಕರಾದರು ಹಾಗೂ ಸಚಿವರಾದರು. ಪಶ್ಚಿಮ ರಷ್ಯಾದ ಕುಸ್ಕ್‌ರ್‍ ನಗರದ ಶಾಸಕರಾಗಿರುವ ಸಿಂಗ್‌, ರಷ್ಯಾ ನೆರೆಯ ದೇಶದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿತ್ತು. ಆದರೆ ಇದು ಮಾತಿನಲ್ಲಿ ಪರಿಹಾರವಾಗದ ಕಾರಣ ಯುದ್ಧ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Russia Ukraine War: ಸರ್ವಾಧಿಕಾರಿಗಳು ಬೆಲೆ ತೆರಲಿದ್ದಾರೆ: ಪುಟಿನ್‌ಗೆ ಬೈಡೆನ್‌ ಎಚ್ಚರಿಕೆ!

‘ಒಂದು ವೇಳೆ ಚೀನಾ ಬಾಂಗ್ಲಾದೇಶದಲ್ಲಿ ಮಿಲಿಟರಿ ಬೇಸ್‌ ಸ್ಥಾಪಿಸಿದರೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ. ಇದೇ ರೀತಿಯ ಘಟನೆ ಉಕ್ರೇನ್‌ನಲ್ಲಿ ನಡೆದಿರುವುದು. ಉಕ್ರೇನ್‌ನಲ್ಲಿ ನ್ಯಾಟೋ ತನ್ನ ಮಿಲಿಟರಿ ಬೇಸ್‌ ಸ್ಥಾಪಿಸಲು ಪ್ರಯತ್ನಿಸಿದೆ. ಇದನ್ನು ರಷ್ಯಾ ವಿರೋಧಿಸಿದರೂ ಉಕ್ರೇನ್‌ ಸಹಕಾರ ನೀಡಿದೆ ಹಾಗಾಗಿ ಯುದ್ಧ ಅನಿವಾರ್ಯವಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಅಣ್ವಸ್ತ್ರ ಬಳಕೆಯ ಕುರಿತಾಗಿ ಯಾವುದೇ ಭಯ ಬೇಡ. ಇತರ ದೇಶಗಳು ರಷ್ಯಾ ಮೇಲೆ ಆಕ್ರಮಣ ಮಾಡಿದರೆ ಮಾತ್ರ ಅಣ್ವಸ್ತ್ರ ಬಳಸುವುದಾಗಿ ಹೇಳಿದ್ದಾರೆ. ಬೇರೆ ದೇಶ ನಮ್ಮ ಮೇಲೆ ಆಕ್ರಮಣ ಮಾಡಿದರೆ. ನಾವು ಎಲ್ಲಾ ರೀತಿಯಲ್ಲೂ ಅದಕ್ಕೆ ಉತ್ತರಿಸಲು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.

498 ಯೋಧರ ಸಾವು: ರಷ್ಯಾ ಮೊದಲ ಅಧಿಕೃತ ಹೇಳಿಕೆ:  ಕಳೆದ 7 ದಿನಗಳಿಂದ ಉಕ್ರೇನ್‌ ಮೇಲೆ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಮ್ಮ ದೇಶದ 498 ಯೋಧರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಯುದ್ಧ ಆರಂಭವಾದ ಬಳಿಕ ರಷ್ಯಾದ 6000ಕ್ಕೂ ಹೆಚ್ಚು ಯೋಧರನ್ನು ಹತ್ಯೆ ಮಾಡಿದ್ದಾಗಿ ಉಕ್ರೇನ್‌ ಹೇಳಿಕೊಂಡಿತ್ತಾದರೂ, ರಷ್ಯಾ ಕಡೆಯಿಂದ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಆದರೆ ಬುಧವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾದ ರಕ್ಷಣಾ ಸಚಿವಾಲಯ ನಮ್ಮ 498 ಯೋಧರು ಸಾವನ್ನಪ್ಪಿದ್ದು, 1597 ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ಸಾವು:  ಯುದ್ಧಪೀಡಿತ ಉಕ್ರೇನ್‌ನ ವಿನ್ನಿಸ್ತಿಯಾ ನ್ಯಾಷನಲ್‌ ಪೈರೊಗೋವ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಪಂಜಾಬ್‌ ಮೂಲದ ವಿದ್ಯಾರ್ಥಿ ಚಂದನ್‌ ಜಿಂದಾಲ್‌ (22) ಅನಾರೋಗ್ಯದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Russia Ukraine War: ಭಾರತೀಯರ ರಕ್ಷಣೆಗೆ ರಷ್ಯಾದಿಂದಲೇ ಸಾಥ್‌: ನಾಯಿಯೊಂದಿಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿ!

ಬರ್ನಾಲಾ ಮೂಲದ ಚಂದನ್‌ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದು ವಿನ್ನೆಸ್ತಿಯಾ ತುರ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿ ನಿಧನರಾಗಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯ ಕೂಡ ಇದನ್ನು ಖಚಿತಪಡಿಸಿದೆ. ಈ ನಡುವೆ, ಚಂದನ್‌ನ ಶವವನ್ನು ಭಾರತಕ್ಕೆ ತರಲು ಸಹಾಯ ಮಾಡಬೇಕು ಎಂದು ಆತನ ತಂದೆಯು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳವಾರ ಖಾರ್ಕಿವ್‌ನ ಕಟ್ಟಡವೊಂದನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಸಾವಿಗೀ​ಡಾ​ಗಿ​ದ್ದರು.

ವಿದೇಶಕ್ಕೆ ಹೋಗುವ ಶೇ.90 ವಿದ್ಯಾರ್ಥಿಗಳು ನೀಟ್‌ನಲ್ಲಿ ಅನುತ್ತೀರ್ಣ: ಪ್ರಹ್ಲಾದ ಜೋಶಿ: ಅನುತ್ತೀರ್ಣರಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಭಾರಿ ವಿವಾದ ಸೃಷ್ಟಿಸಿದ್ದು, ಸಚಿವರು ಕ್ಷಮೆ ಕೇಳಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ.

‘ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ 20 ಸಾವಿರ ಮಕ್ಕಳನ್ನು ರಕ್ಷಿಸುವುದು ಮೋದಿ ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಉಕ್ರೇನ್‌ ಹೋಗಿರುವ ವಿದ್ಯಾರ್ಥಿಗಳ ತಪ್ಪನ್ನು ಹುಡುಕುತ್ತಿದ್ದಾರೆ. ಇದು ಅಧಿಕಾರದ ದರ್ಪದ ಪರಾಕಾಷ್ಠೆಯನ್ನು ತೋರಿಸುತ್ತಿದೆ. ಸರ್ಕಾರ ಈ ಕೂಡಲೇ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಕ್ಷಮೆ ಕೇಳಬೇಕು’ ಎಂದು ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಇನ್ನೊಬ್ಬ ಕಾಂಗ್ರೆಸ್‌ ನಾಯಕ ನವಜೋತ್‌ ಪಟ್ನಾಯಕ್‌, ‘ಈ ವಿದ್ಯಾರ್ಥಿಗಳು ಭಾರತದ ಗುಣಮಟ್ಟದ ಪರೀಕ್ಷೆ ಪಾಸ್‌ ಮಾಡದ ಕಾರಣ ಅವರಿಗೆ ಸ್ವದೇಶಕ್ಕೆ ಮರಳುವ ಹಕ್ಕಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ