
ಯುಎಇ ಗಲ್ಫ್ ಟಿಕೆಟ್ ಕ್ರೇಜ್ ಭಾರತದಲ್ಲಿ ತುಸು ಹೆಚ್ಚಿದೆ. ವಿಶೇಷ ಅಂದರೆ ಗಲ್ಫ್ ಟಿಕೆಟ್ ವಿಜೇತರ ಪೈಕಿ ಭಾರತೀಯರೇ ಬಹುಪಾಲು ಬಹುಮಾನ ಮೊತ್ತ ಪಡೆದಿದ್ದಾರೆ. ಪ್ರಖುವಾಗಿ ಗಲ್ಫ್ ಟಿಕೆಟ್ ಕಡಿಮೆ ಹಣದಲ್ಲಿ ದೊಡ್ಡ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸುತ್ತದೆ. ಟಿಕೆಟ್ ಡ್ರಾ ಮಾರುಕಟ್ಟೆಗೆ ಹೊಸ ಸಂಸ್ಥೆಗಳು, ಹೊಸ ಟಿಕೆಟ್ ಪ್ರವೇಶಿಸಿದಾಗ ಭಾರತೀಯರು ಅದನ್ನು ಪರೀಕ್ಷಿಸಿ ಒಪ್ಪಿಕೊಂಡಿದ್ದಾರೆ. ಈ ಬಾರಿ ಮೂವರು ಭಾರತೀಯರು ತಲಾ 22.5 ಲಕ್ಷ ರೂಪಾಯಿ ಗಲ್ಫ್ ಟಿಕೆಟ್ ಬಹುಮಾನ ಗೆದ್ದುಕೊಂಡಿದ್ದಾರೆ. ಇಷ್ಟೇ ಅಲ್ಲ, ಇದರ ಜೊತೆಗೆ ಹವರು ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ಇತ್ತೀಚೆಗೆ ನಡೆದ ಗಲ್ಫ್ ಟಿಕೆಟ್ ಡ್ರಾದಲ್ಲಿ ಭಾರತದ ಹಲವು ಭಾಗದ ಅದೃಷ್ಠವಂತರು ವಿಜೇತರಾಗಿದ್ದಾರೆ. ಫಾರ್ಚೂನ್ 5 ಮತ್ತು ಸೂಪರ್ 6 ಟಿಕೆಟ್ ಡ್ರಾಗಳಲ್ಲಿ ಗಣನೀಯ ಬಹುಮಾನಗಳನ್ನು ಭಾರತೀಯರು ಗೆದ್ದುಕೊಂಡಿದ್ದಾರೆ. ಈ ಬಾರಿಯ ಫಾರ್ಚುನ್ 5 ಟಿಕೆಟ್ ಡ್ರಾದಲ್ಲಿ ಕರ್ನಾಟಕದ ಶಿವಮೊಗ್ಗ ಮೂಲದ ಅಬ್ದುಲ್ ರಹೀಮ್ ಹಾಗೂ ಆಂಧ್ರಪ್ರದೇಶದ ಶ್ಕೀರರ್ ಸುಂದರ್ ಗಜಗಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಇಬ್ಬರು 22.5 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ.ಡ್ರಾ ಬಹುಮಾನ ಪಡೆದ ಇಬ್ಬರೂ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಅದೃಷ್ಠ ಬದಲಾಯಿಸಿದ ಗಲ್ಫ್ ಟಿಕೆಟ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಸೂಪರ್ 6 ಡ್ರಾದಲ್ಲಿ ನಾಲ್ಕು ವಿಜೇತರನ್ನು ಘೋಷಿಸಲಾಗಿದೆ. ಸೈನಿ ಕೃಷ್ಣ, ಎ ಅರುಣ್ ಕುಮಾರ್, ಶರತ್ ಚಂದ್ರನ್ ಹಾಗೂ ಸೈಯದ್ ಇಬ್ರಾಹಿಂ 11.25 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಹಂಚಿಕೊಂಡಿದ್ದಾರೆ. ವಿವಿಧ ಪ್ರದೇಶದ ವ್ಯಕ್ತಿಗಳು ರಾಷ್ಟ್ರವ್ಯಾಪಿಯ ಗಲ್ಫ್ ಟಿಕೆಟ್ ಆಟದೊಂದಿಗೆ ಬಹುಮಾನ ವಿಜೇತರಾಗಿದ್ದಾರೆ. ಇವರ ಜೊತೆಗೆ ಹಲವರು ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ.
ಯುಎಇ ಮೂಲದ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಗಲ್ಫ್ ಟಿಕೆಟ್ ನಿರಂತರವಾಗಿ ಡ್ರಾಗಳನ್ನು ನಡೆಸುತ್ತಿದೆ. ಈ ಗೇಮಿಂಗ್‌ನಲ್ಲಿ ಭಾಗವಹಿಸುವ ಬಹುತೇಕರು ಬಹುಮಾನ ಗೆಲ್ಲುವ ಅವಕಾಶ ಹೊಂದಿದ್ದಾರೆ. ಇದು ಆಟಗಾರರಿಗೆ ಒಂದು ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಬಹುಮಾನ ಗೆಲ್ಲುವ ಅವಕಾಶವನ್ನು ಸೃಷ್ಟಿಸಲಿದೆ.
ಗಲ್ಫ್ ಟಿಕೆಟ್ ಗೇಮಿಂಗ್ ಅನುಭವ ಹಾಗೂ ಬಹುಮಾನದ ಕುರಿತು ಮಾತನಾಡಿರುವ ಗಲ್ಫ್ ಟಿಕೆಟ್ ಮುಖ್ಯಸ್ಥ ಜೋರಾನ್ ಪೊಪೊವಿಚ್, ಗೇಮಿಂಗ್‌ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಪ್ರಮುಖವಾಗಿ ಭಾಗವಹಿಸುವವರಿಗೆ ಅತ್ಯುತ್ತಮ ಅನುಭವ, ಪಾರದರ್ಶಕತೆ ಜೊತೆಗೆ ಅದೃಷ್ಠ ಬದಲಾಯಿಸುವ ಬಹುಮಾನ ನೀಡುವ ಬದ್ಧತೆಯಲ್ಲೇ ಗಲ್ಫ್ ಟಿಕೆಟ್ ಮುಂದುವರಿಯಲಿದೆ ಎಂದು ಪೊಪೊವಿಚ್ ಹೇಳಿದ್ದಾರೆ.
ಗಲ್ಫ್ ಟಿಕೆಟ್ ಮೊದಲೇ ಹೇಳಿದಂತೆ ಭಾರತದಲ್ಲಿನ ಜಪ್ರಿಯತೆ ಹೆಚ್ಚುತ್ತಿದೆ. ಜೊತೆಗೆ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಕಾರಣ ಇತ್ತೀಚನ ಗಲ್ಫ್ ಟಿಕೆಟ್ ಡ್ರಾ ಫಲಿತಾಂಶ ನೋಡಿದರೆ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ಹೆಚ್ಚಾಗುತ್ತಿರುವ ಜನಪ್ರಿಯತೆಯನ್ನು ಎತ್ತಿ ತೋರಿಸತ್ತದೆ. ಇಂತಹ ಡ್ರಾ ಗೇಮಿಂಗ್‌ನಲ್ಲಿ ಭಾಗವಹಿಸಲು, ಬಹುಮಾನ ಗೆಲ್ಲಲು ಗಲ್ಫ್ ಟಿಕೆಟ್ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಸಾಮರ್ಥ್ಯ ಒದಗಿಸುತ್ತದೆ, ಜೊತೆಗೆ ಅವಕಾಶವನ್ನೂ ಕಲ್ಪಿಸುತ್ತದೆ. ಗಲ್ಫ್ ಟಿಕೆಟ್ ಉದ್ಯಮ ವಿಸ್ತರಣೆಯಾಗುತ್ತಿದೆ. ಗಲ್ಫ್ ಟಿಕೆಟ್‌ನಂತಹ ಗೇಮಿಂಗ್‌ಗಳಿಂದ ದೇಶದಲ್ಲಿನ ಆನ್‌ಲೈನ್ ಗೇಮಿಂಗ್ ಭವಿಷ್ಯ ಗಟ್ಟಿಯಾಗುತ್ತಿದೆ ಎಂದು ಪೊಪೊವಿಚ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ www.gulfticket.com. ಭೇಟಿ ನೀಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ