
ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಬಿಡುಗಡೆ ಮಾಡಿರುವ 'ಮೋಸ್ಟ್ ವಾಂಟೆಡ್ 10 ಮಂದಿ ತಲೆಮರೆಸಿಕೊಂಡಿರುವವರ' (Ten Most Wanted Fugitives) ಪಟ್ಟಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಹೆಸರು ಸೇರ್ಪಡೆಯಾಗಿದೆ.
ನಿತೀಶ್ ಕೌಶಲ್(Nitish Kaushal) ಎಂಬ ಈತನನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಗಂಭೀರ ಆರೋಪಗಳ ಮೇಲೆ ಸರ್ಚ್ ಮಾಡುತ್ತಿದೆ. ಈ ಬೆಳವಣಿಗೆ ಸಹಜವಾಗಿಯೇ ತೀವ್ರ ಕುತೂಹಲ ಕೆರಳಿಸಿದೆ. ನಿತೀಶ್ ಕೌಶಲ್, ಇಂಟರ್‌ನ್ಯಾಷನಲ್ ಲೆವೆಲ್ ಕ್ರಿಮಿನಲ್ ಚಟುವಟಿಕೆ ನಡೆಸುವ ಗ್ಯಾಂಗ್‌ನ ಸದಸ್ಯನಾಗಿದ್ದಾನೆ ಎಂದು ಅಮೆರಿಕದ ತನಿಖಾ ಸಂಸ್ಥೆಗಳು ಆರೋಪಿಸಿವೆ. ಈತನ ಹೆಸರು ಎಫ್‌ಬಿಐನಂತಹ ಉನ್ನತ ಸಂಸ್ಥೆಯ ವಾಂಟೆಡ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿರುವುದು ಆತನ ಆರೋಪಗಳ ಗಂಭೀರತೆಗೆ ಸಾಕ್ಷಿಯಾಗಿದೆ.
ನಿತೀಶ್ ಕೌಶಲ್ ಮತ್ತು ಗ್ಯಾಂಗ್ ಮೇಲೆ ಹಲವು ಗಂಭೀರ ಸ್ವರೂಪದ ಆರೋಪಗಳಿವೆ. ಮುಖ್ಯವಾಗಿ ನಿತೀಶ್ ಗ್ಯಾಂಗ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಮಿನಲ್‌ಗಳ ನೆಟ್ವರ್ಕ್ ಆಗಿದೆ. ಈ ನೆಟ್ವರ್ಕ್ ಕೇವಲ ಒಂದು ದೇಶಕ್ಕೆ ಸೀಮಿತವಾಗಿಲ್ಲ, ಅಮೆರಿಕದಾಚೆಗೂ ತನ್ನ ಅಪರಾಧ ಚಟುವಟಿಕೆಗಳನ್ನು ವಿಸ್ತರಿಸಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಇದೊಂದು ವ್ಯವಸ್ಥಿತ ಅಪರಾಧ ಜಾಲವೆಂದು (syndicate) ವಿಶ್ಲೇಷಿಸಲಾಗಿದೆ. ವ್ಯವಸ್ಥಿತ ನೆಟ್ವರ್ಕ್ ಮೂಲಕ ಕ್ರಿಮಿನಲ್ ಗಳು ಎಲ್ಲೆಡೆ ಹಿಂಸಾಚಾರ ಕೃತ್ಯ ನಡೆಸಿವೆ ಎಂದು ಆರೋಪಿಸಿದೆ.
ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಪ್ರಕಾರ, ಈ ಗ್ಯಾಂಗ್ ಹಲವು ಘೋರ ಅಪರಾಧಗಳನ್ನು (violent felonies) ವ್ಯವಸ್ಥಿತವಾಗಿ ನಡೆಸಿದೆ. ಈ ಅಪರಾಧಗಳ ಸ್ವರೂಪ ಮತ್ತು ಅವು ನಡೆದ ಸ್ಥಳಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
FBI tweets, "Nitish Kaushal is wanted by the FBI for his alleged involvement in a transnational criminal organization engaged in, among other things, acts involving murder, kidnapping, drug trafficking, extortion, weapons trafficking, money laundering, and human smuggling. This… pic.twitter.com/H752ySe2i0
— ANI (@ANI) July 15, 2026
ನಿತೀಶ್ ಕೌಶಲ್ ಗ್ಯಾಂಗ್ ಮೇಲೆ ಎಫ್‌ಬಿಐ ನಿಗಾ
ಇದೀಗ ನಿತೀಶ್ ಕೌಶಲ್ ಸೇರಿ ಇಡೀ ನೆಟ್ವರ್ಕ್ ಮೇಲೆ ಎಫ್‌ಬಿಐ ಕಣ್ಣುಬಿದ್ದಿದೆ. ಈ ಪ್ರಕರಣವು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ, ಬದಲಾಗಿ ಗಡಿಯಾಚೆಗಿನ ಅಪರಾಧ ಚಟುವಟಿಕೆಗಳನ್ನ ವಿಸ್ತರಿಸಿದೆ. ಹೀಗಾಗಿ ನಿತೀಶ್ ಕೌಶಲ್‌ನನ್ನು ಪತ್ತೆ ಹಚ್ಚುವ ಮೂಲಕ, ಇಡೀ ನೆಟ್ವರ್ಕ್ ಅನ್ನೇ ಬೇರು ಸಮೇತ ಕಿತ್ತುಹಾಕುವ ಗುರಿಯೊಂದಿಗೆ ಎಫ್‌ಬಿಐ. ನಿತೀಶ್ ಕೌಶಲ್ ಬಂಧಿಸಿದರೆ ಇಡೀ ಕ್ರಿಮಿನಲ್‌ಗಳ ಗ್ಯಾಂಗ್ ಬಲೆ ಬಿಳಲಿದೆ. ಹೀಗಾಗಿ ಅಮೆರಿಕದ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಿತೀಶ್ ಕೌಶಲ್‌ನನ್ನು ಆದಷ್ಟು ಬೇಗ ಬಂಧಿಸಲು ಪತ್ತೆ ಕಾರ್ಯ ತೀವ್ರಗೊಳಿಸಿವೆ. ಎಫ್‌ಬಿಐನ 'ಮೋಸ್ಟ್ ವಾಂಟೆಡ್' ಪಟ್ಟಿಗೆ ಸೇರ್ಪಡೆಯಾದ ವ್ಯಕ್ತಿಗಳ ಪತ್ತೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ಹೀಗಾಗಿ, ನಿತೀಶ್ ಕೌಶಲ್ ಮೇಲಿನ ತನಿಖೆ ಮತ್ತಷ್ಟು ಚುರುಕುಗೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ