ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಡಾಲರ್ (8 ಕೋಟಿ ರೂ.) ಗೆದ್ದಿದ್ದಾರೆ. ಮೂರು ತಿಂಗಳ ಹಿಂದೆ ಪತ್ನಿಗಾಗಿ ಚಿನ್ನದ ಚೈನ್ ಖರೀದಿಸಿದ್ದ ಅವರು, ಅದೇ ಅಂಗಡಿಯ ಲಕ್ಕಿ ಡ್ರಾದಲ್ಲಿ ಈ ಬಹುಮಾನ ಗೆದ್ದಿದ್ದಾರೆ.
ಬೆಂಗಳೂರು (ನ.30): ಭಾರತೀಯ ಮೂಲದ ವ್ಯಕ್ತಿ ಸಿಂಗಾಪುರದಲ್ಲಿ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಲಕ್ಕಿ ಡ್ರಾದಲ್ಲಿ ಅವರು 1 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ, 8 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಜಯಿಸಿದ್ದಾರೆ. ಈ ಗೆಲುವು ಆತನಿಗೆ ಮಾತ್ರವಲ್ಲ ಆತನ ಪತ್ನಿಗೂ ಬಹಳ ವಿಶೇಷವಾಗಿದೆ. ಏಕೆಂದರೆ, ಮೂರು ತಿಂಗಳ ಹಿಂದೆ ಪತ್ನಿಗಾಗಿ ಚಿನ್ನದ ಚೈನ್‌ಅನ್ನು ಅವರು ಖರೀದಿ ಮಾಡಿದ್ದರು. ಅಲ್ಲಿನ ಲಕ್ಕಿ ಡ್ರಾದಲ್ಲಿಯೇ ಈತ ಈಗ ಕೋಟ್ಯಧಿಪತಿಯಾಗಿದ್ದಾನೆ. ಏಷ್ಯಾ ಒನ್ ವರದಿ ಮಾಡಿರುವ ಪ್ರಕಾರ, ಕಳೆದ ಭಾನುವಾರ (ನವೆಂಬರ್ 24) ಮುಸ್ತಫಾ ಜ್ಯುವೆಲ್ಲರಿ ನಡೆಸಿದ ಲಕ್ಕಿ ಡ್ರಾದಲ್ಲಿ 21 ವರ್ಷಗಳ ಕಾಲ ಸಿಂಗಾಪುರದಲ್ಲಿ ಕೆಲಸ ಮಾಡಿದ ಪ್ರಾಜೆಕ್ಟ್ ಎಂಜಿನಿಯರ್ ಬಾಲಸುಬ್ರಮಣಿಯನ್ ಚಿತ್ತಂಬರಂ ಅವರು 1 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಗೆದ್ದಿದ್ದಾರೆ.
ಸ್ಟೋರ್‌ನ ವಾರ್ಷಿಕ ಕಾರ್ಯಕ್ರಮದ ಭಾಗವಾಗಿರುವ ಡ್ರಾವನ್ನು ಸಿವಿಲ್ ಸರ್ವಿಸ್ ಕ್ಲಬ್ ಟೆಸೆನ್‌ಸೋನ್‌ನಲ್ಲಿ ನಡೆಸಲಾಯಿತು. ಆಭರಣ ಮಳಿಗೆಯಲ್ಲಿ ಕನಿಷ್ಠ 250 ಡಾಲರ್ ಖರ್ಚು ಮಾಡಿದ ಗ್ರಾಹಕರು ಡ್ರಾಗೆ ಅರ್ಹರಾಗಿದ್ದರು. ಚಿತ್ತಂಬರಂ ಅವರು ಲಿಟಲ್ ಇಂಡಿಯಾದಲ್ಲಿದ್ದ ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಪತ್ನಿಯ ಚಿನ್ನದ ಚೈನ್‌ಗಾಗಿ S$6,000 ಖರ್ಚು ಮಾಡಿದ್ದರು.
8 ಕೋಟಿಗೂ ಅಧಿಕ ಮೊತ್ತ ಗೆದ್ದ ಬಳಿಕ ಚಿತ್ತಂಬರಂ ಅವರಿಗೆ ವಿಡಿಯೋ ಕಾಲ್ ಮಾಡಿ ವಿಚಾರ ತಿಳಿಸಲಾಯಿತು. ಮೊದಲಿಗೆ ಈ ಸುದ್ದಿಯನ್ನು ನಂಬಲು ಅವರ ಹಿಂಜರಿದರೂ, ಸತ್ಯವೆಂದು ಗೊತ್ತಾದ ಬಳಿಕ ಆನಂದಭಾಷ್ಪ ಸುರಿಸಿದ್ದಾರೆ. “ಇಂದು ನನ್ನ ತಂದೆಯ ನಾಲ್ಕನೇ ಪುಣ್ಯತಿಥಿ. ಇದೊಂದು ಆಶೀರ್ವಾದ' ಎಂದು ಅವರು ಹೇಳಿದ್ದಾರೆ. ಈ ಸುದ್ದಿಯನ್ನು ನನ್ನ ಅಮ್ಮನೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅದರೊಂದಿಗೆ ಇಷ್ಟು ವರ್ಷಗಳ ಕಾಲ ನಾನು ಸಿಂಗಾಪುರದಲ್ಲಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ ತಮ್ಮ ಗೆಲುವಿನ ಒಂದು ಪಾಲನ್ನು ಇಲ್ಲಿನ ಸಮುದಾಯಕ್ಕೆ ದಾನ ಮಾಡುವ ಯೋಚನೆಯಲ್ಲಿದ್ದೇನೆ ಎಂದಿದ್ದಾರೆ. ಇನ್ನೂ ಹಲವು ಗ್ರಾಹಕರು 5 ಸಾವಿರ ಯುಎಸ್ ಡಾಲರ್‌ವರೆಗಿನ ಬಹುಮಾನಗಳನ್ನು ಲಕ್ಕಿ ಡ್ರಾದಲ್ಲಿ ಗೆದ್ದಿದ್ದಾರೆ.
ಹೆಂಡ್ತಿ ಮಾತನ್ನು ಕೇಳಿ ಅನ್ನೋದೇ ಇಲ್ಲಿನ ಪಾಠ: ಸಂಗಾತಿಯ ಮಾತನ್ನು ಕೇಳಿದರೆ, ಅದೃಷ್ಟ ಬರುತ್ತದೆ ಅನ್ನೋದಕ್ಕೆ ಚಿತ್ತಂಬರಂ ಅವರದು ಹೊಸ ಕಥೆಯಷ್ಟೇ. 2023ರ ಏಪ್ರಿಲ್‌ನಲ್ಲಿ ಮಲೇಷ್ಯಾದ ಕ್ಲಾಂಗ್‌ನ ವ್ಯಕ್ತಿಯೊಬ್ಬರು ಹೆಂಡತಿಯ ಮಾತನ್ನು ಕೇಳಿ $900,000 ಬಹುಮಾನ ಗೆದ್ದಿದ್ದರು. ಚೆಂಗ್ ಹೆಸರಿನ ವ್ಯಕ್ತಿ ಸಾಮಾನ್ಯ ಲಾಟರಿ ಆಟಗಾರನಾಗಿದ್ದ. ಆದರೆ, ಜನವರಿಯಲ್ಲಿ ಸಾಕಷ್ಟು ಸಂಖ್ಯೆಯ ಲಾಟರಿಗಳು ಮಾರಾಟವಾಗಿದ್ದವು. ಪತ್ನಿಯ ಸಲಹೆಯ ಮೇರೆಗೆ ಆಗ ಬಿಗ್ ಸ್ವೀಮ್ ಟಿಕೆಟ್‌ಅನ್ನು ಖರೀದಿ ಮಾಡಿದ್ದು ಆತನನ್ನು ಕೋಟ್ಯಧಿಪತಿಯನ್ನಾಗಿ ಮಾಡಿತ್ತು.
Weather Report: ರಾಜ್ಯದಲ್ಲಿ ಇಂದಿನಿಂದ 4 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ
'ನನ್ನ ಹೆಂಡತಿಯ ಮಾತನ್ನು ಕೇಳಿದ್ದೇ ಈ ಗೆಲುವಿಗೆ ಕಾರಣವಾಯಿತು' ಎಂದು ಚೆಂಗ್ ಆಗ ಹೇಳಿದ್ದರು. ಬಂದ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕೆ ಹೂಡಿಕೆ ಮಾಡುವುದಾಗಿ ತಿಳಿಸಿದ್ದರು.
ಹೈಕೋರ್ಟ್ ಎದುರೇ ನಟನಾ ಸಾಮರ್ಥ್ಯ ತೋರಿದ ಕಿಲ್ಲಿಂಗ್ ಸ್ಟಾರ್, ಸರ್ಜರಿ ಬೇಡವೆಂದ ನಟ ದರ್ಶನ್!