ಲಂಡನ್: ಪಕ್ಷದೊಳಗೆ ತೀವ್ರ ವಿರೋಧ ಎದುರಿಸುತ್ತಿರುವ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಬುಧವಾರ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಬಿದ್ದಿದ್ದಾರೆ. ಅವರ ಸಂಪುಟದಲ್ಲಿ ಗೃಹ ಸಚಿವೆಯಾಗಿದ್ದ ಭಾರತೀಯ ಮೂಲದ ಸುಯೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಧಿಕೃತ ಮಾಹಿತಿಯೊಂದನ್ನು ವೈಯಕ್ತಿಕ ಇ ಮೇಲ್ ಖಾತೆ (Personel E-mail Account)ಮೂಲಕ ಕಳುಹಿಸಿದ ತಪ್ಪಿಗಾಗಿ ರಾಜೀನಾಮೆ ನೀಡಿದ್ದಾಗಿ ಸುಯೆಲ್ಲಾ ಕಾರಣ ನೀಡಿದ್ದರೂ, ಅದು ವಾಸ್ತವವಾಗಿ ಲಿಜ್ ವಿರುದ್ಧ ಅಸಮಾಧಾನದ ಪರಿಣಾಮ ಎನ್ನಲಾಗುತ್ತಿದೆ. ಹೀಗಾಗಿ ಲಿಜ್ ಅವರನ್ನು ತೆಗೆದು ಹಾಕಿ, ಭಾರತೀಯ ಮೂಲದ ರಿಷಿ ಸುನಕ್ (Rishi sunak) ಅವರನ್ನು ಪ್ರಧಾನಿ ಹುದ್ದೆ ಸ್ಥಾನಕ್ಕೆ ಕೂರಿಸಲಾಗುವುದು ಎಂಬ ಸುದ್ದಿಗಳಿಗೆ ಮತ್ತಷ್ಟು ಬಲ ಬಂದಿದೆ. ಈ ಹಿಂದೆ ಪ್ರಧಾನಿ ಹುದ್ದೆಗಾಗಿ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಲಿಜ್ ವಿರುದ್ಧ ಸುಯೆಲ್ಲಾ ಸ್ಪರ್ಧಿಸಿದ್ದರು.
ಬ್ರಿಟನ್ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು
ಹಿರಿಯ ನಾಗರೀಕರನ್ನು ವಂಚಿಸಿದ ಪ್ರಕರಣ, ಭಾರತೀಯ ಮೂಲದ ಅಮೆರಿಕ ನಿವಾಸಿಗೆ ಜೈಲು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ