ಕೆನಡಾ ರಕ್ಷಣಾ ಸಚಿವೆಯಾಗಿ ಭಾರತ ಮೂಲದ ಅನಿತಾ ಆನಂದ ಆಯ್ಕೆ!‌

Suvarna News   | Asianet News
Published : Oct 27, 2021, 01:20 PM ISTUpdated : Oct 27, 2021, 01:23 PM IST
ಕೆನಡಾ ರಕ್ಷಣಾ ಸಚಿವೆಯಾಗಿ ಭಾರತ ಮೂಲದ ಅನಿತಾ ಆನಂದ ಆಯ್ಕೆ!‌

ಸಾರಾಂಶ

*ಕೆನಡಾ ರಕ್ಷಣಾ ಸಚಿವೆಯಾಗಿ  ಭಾರತ ಮೂಲದ ಅನಿತಾ ಆನಂದ ಆಯ್ಕೆ *ಕೊರೊನಾ ಲಸಿಕೆ ಪೂರೈಸುವಲ್ಲಿ ಅವಿರತ ಕೆಲಸ *ಕೆನಡಾ ರಕ್ಷಣಾ ಸಚಿವೆಯಾಗಿ  ನೇಮಕಗೊಂಡ ಎರಡನೇ ಮಹಿಳೆ

ಟೊರೊಂಟೊ (ಅ. 27) : ಭಾರತ ಮೂಲದ ಅನಿತಾ ಆನಂದ್ (Anita Anand) ಕೆನಡಾದ ರಕ್ಷಣಾ ಸಚಿವೆಯಾಗಿ  ಆಯ್ಕೆ ಆಗಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರು ಮಂಗಳವಾರ (ಅ. 26) ತಮ್ಮ ಹೊಸ ಸಂಪುಟವನ್ನು ಘೋಷಿಸಿದ್ದಾರೆ. 1990 ರ ದಶಕದಲ್ಲಿ ರಕ್ಷಣಾ ಸಚಿವೆಯಾಗಿ  ಸೇವೆ ಸಲ್ಲಿಸಿದ ಕಿಮ್ ಕ್ಯಾಂಪ್ಬೆಲ್ ನಂತರ ರಕ್ಷಣಾ ಸಚಿವೆಯಾಗಿ  ಆಯ್ಕೆ ಆಗಿರುವ ಮೊದಲ ಮಹಿಳೆ ಅನಿತಾ ಆನಂದ್.  

2019 ರಲ್ಲಿ ಸಾರ್ವಜನಿಕ ಸೇವೆಗಳು ಮತ್ತು ಸಂಗ್ರಹಣೆಯ ಸಚಿವರಾಗಿ ( minister of public services and procurement) ನೇಮಕಗೊಂಡಾಗ ಕೆನಡಾ ಸರ್ಕಾರದಲ್ಲಿ ಅನಿತಾ ಆನಂದ್  ಮೊದಲ ಹಿಂದೂ ಸಚಿವರಾಗಿದ್ದರು. ದೇಶದಲ್ಲಿ ಕೋವಿಡ್ -19 ಲಸಿಕೆ ಪೂರೈಕೆ ನಿಟ್ಟಿನಲ್ಲಿ ಮಾಡಿದ ಕೆಲಸದ ಯಶಸ್ಸಿಗಾಗಿ ಟ್ರುಡೊ ಅವರಿಂದ ಪ್ರಶಂಸೆಗೆ ಒಳಗಾಗಿ ಈಗ ರಕ್ಷಣಾ ಖಾತೆಗೆ ಬಡ್ತಿ ಪಡೆದಿದ್ದಾರೆ. 2015 ರಿಂದ ರಕ್ಷಣಾ ಖಾತೆಯನ್ನು ನಿಭಾಯಿಸುತ್ತಿದ್ದ ಸಜ್ಜನ್ ಅವರಿಗೆ ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ಪೆಸಿಫಿಕ್‌ನ ಆರ್ಥಿಕ ಅಭಿವೃದ್ಧಿ ಖಾತೆ ನೀಡಲಾಗಿದೆ. 

IMF ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ರಾಜೀನಾಮೆ!

ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆಯ ನಿರೀಕ್ಷೆ!

ರಕ್ಷಣಾ ಸಚಿವೆಯಾಗಿ ಅನಿತಾ ಆಯ್ಕೆಯಾಗಿದ್ದು ಸೇನೆಯ ವಿಚಾರದಲ್ಲಿ ಅನೇಕ ಬದಲಾವಣೆಗಳನ್ನು ತರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ಹಾಗೂ ರಾಜಕೀಯ ವ್ಯಕ್ತಿಗಳಿಂದ ಕೆನಡಾ ಸೇನೆಯು ಲೈಂಗಿಕ ದುಷ್ಕೃತ್ಯದ ಆರೋಪಗಳನ್ನು ಎದುರಿಸುತ್ತಿದೆ. ಹಾಗಾಗಿ ಈ ನಿಟ್ಟಿನಲ್ಲಿ ಸುಧಾರಣೆಯಾಗಬೇಕೆಂದು ಸರ್ಕಾರದ ಮೇಲೆ ಒತ್ತಡ ಇದೆ. ಈ ಬೆನ್ನಲ್ಲೆ ಅನಿತಾ ಆನಂದ್‌ ಆಯ್ಕೆಯಿಂದ ಸೇನಾ ವಿಭಾಗ ಸುಧಾರಿಸುವ ನಿರೀಕ್ಷೆಯಿದೆ.  

ತಮಿಳುನಾಡು-ಪಂಜಾಬ್‌ ಮೂಲದ ಅನಿತಾ ಆನಂದ್

ಅನಿತಾ ಆನಂದ್ ಅವರು ನೋವಾ ಸ್ಕಾಟಿಯಾದ ಕೆಂಟ್ವಿಲ್ಲೆಯಲ್ಲಿ (Kentville, Nova Scotia) ಜನಿಸಿದರು. ಆಕೆಯ ಪೋಷಕರು ಇಬ್ಬರೂ ವೈದ್ಯರು. ಆಕೆಯ ತಾಯಿ ಸರೋಜ್ ಡಿ. ರಾಮ್ ಅರಿವಳಿಕೆ ತಜ್ಞೆ, ಮತ್ತು ಆಕೆಯ ತಂದೆ ಎಸ್.ವಿ. ಆನಂದ್ ಸಾಮಾನ್ಯ ಶಸ್ತ್ರಚಿಕಿತ್ಸಕರಾಗಿದ್ದರು. ಆಕೆಯ ತಂದೆ ತಮಿಳುನಾಡು (Tamilnadu) ಮೂಲದವರಾಗಿದ್ದು ತಾಯಿ ಪಂಜಾಬ್ (Punjab)ಮೂಲದವರು. ಅನಿತಾರಿಗೆಗ ಇಬ್ಬರು ಸಹೋದರಿಯರಿದ್ದಾರೆ.

ಭಾರತ ಮೂಲದ ಶ್ರೀ ಸೈನಿ ಈಗ ಮಿಸ್ ವರ್ಲ್ಡ್ ಅಮೆರಿಕ

ಅನಿತಾ ಆನಂದ್‌ರಿಗೆ ಕಾರ್ಪೊರೇಟ್ ವಕೀಲರಾಗಿ (Carporate Lawyer) ಕಾರ್ಯ ನಿರ್ವಹಿಸಿದ  ಅನುಭವವಿದೆ  ಮತ್ತು ಕಾರ್ಪೊರೇಟ್ ಆಡಳಿತದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಓಕ್ವಿಲ್ಲೆಯಲ್ಲಿ (Oakville) ಸುಮಾರು 46 ಪ್ರತಿಶತ ಮತಗಳೊಂದಿಗೆ ಅನಿತಾ ವಿಜೇತರಾಗಿದ್ದರು. ಅವರು ಮೊದಲ ಬಾರಿಗೆ ಒಂಟಾರಿಯೊ ಪ್ರಾಂತ್ಯದ ಓಕ್ವಿಲ್ಲೆ ಪ್ರತಿನಿಧಿಸಿ 2019 ರಲ್ಲಿ ಸಂಸತ್ತಿನ ರೂಕಿ ಸದಸ್ಯರಾಗಿ ಆಯ್ಕೆಯಾಗಿದ್ದರು. ತದನಂತರ ಕೆನಡಾದಲ್ಲಿ COVID-19 ಲಸಿಕೆಗಳನ್ನು ಪೂರೈಸುವ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದರು. ಸಾರ್ವಜನಿಕ ಸೇವೆಗಳು ಮತ್ತು ಸಂಗ್ರಹಣೆಯ ಸಚಿವೆಯಾಗಿದ್ದಾಗ, ಆರೋಗ್ಯ ಬಿಕ್ಕಟ್ಟನ್ನು ನಿವಾರಿಸಯವ ನಿಟ್ಟಿನಲ್ಲಿ ಅನಿತಾ ಆನಂದ್ ಸಾಕಷ್ಟು ಕೆಲಸ ಮಾಡಿ ಜನರ ಮೆಚ್ಚುಗೆಗ ಪಾತ್ರರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?