5 ತಿಂಗಳ ಗರ್ಭಿಣಿ ಪತ್ನಿಯ ಕೊಂದು ಆತ್ಮಹತ್ಯೆಗೆ ಶರಣಾದ ಪತಿ| ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ವ್ಯಕ್ತಿ ಆತ್ಮಹತ್ಯೆ| ಕೊಲೆ, ಆತ್ಮಹತ್ಯೆಗೇನು ಕಾರಣ ಎಂಬುವುದು ನಿಗೂಢ
ನ್ಯೂಜೆರ್ಸಿ(ಮೇ.02): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 5 ತಿಂಗಳ ಗರ್ಭಿಣಿ ಕೊಲೆಯಾಗಿದ್ದು, ಆಕೆಯ ಪತಿ ಮೃತದೇಹ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
5 ತಿಂಗಳ ಗರ್ಭಣಿ, 35 ವರ್ಷದ ಗರಿಮಾ ಕೊಠಾರಿಯಾ ಶವ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದರೆ, ಆಕೆಯ ಪತಿ ಮೋಹನ್ ಮಾಲ್ ಶವ ಹಡ್ಸನ್ ನದಿಯ ದಡದಲ್ಲಿ ಪೊಲೀಸರಿಗೆ ಸಿಕ್ಕಿದೆ.
ನವ ವಿವಾಹಿತ ದಂಪತಿ ಆತ್ಮಹತ್ಯೆಗೆ ಶರಣು!
ಗರಿಮಾ ದೇಹದ ಮೇಲೆಲ್ಲಾ ಗಾಯದ ಗುರುತುಗಳಾಗಿವೆ ಎಂದು ಅಲ್ಲಿ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 26 ರಂದು ಇವರಿಬ್ಬರ ಶವಗಳು ಪತ್ತೆಯಾಗಿವೆ ಎಂದು ನ್ಯೂಜೆರ್ಸಿ ಪೊಲೀಸರು ತಿಳಿಸಿದ್ದಾರೆ.
ಗರಿಮಾ ಕೊಠಾರಿ ಮತ್ತು ಮೋಹನ್ ಮಾಲ್ ಇಬ್ಬರು ಅಮೆರಿಕಾದಲ್ಲಿ ಹೊಟೇಲ್ ನಡೆಸುತ್ತಿದ್ದರು. ಇನ್ನು ಇಬ್ಬರ ನಡುವೆ ಯಾವುದೇ ಮನಸ್ತಾಪಗಳು ಇದ್ದದ್ದು ಮೂರನೇಯವರ ಗಮನಕ್ಕೆ ಬಂದಿರಲಿಲ್ಲ. ಗಂಡ ಹೆಂಡತಿ ಇಬ್ಬರು ಅನ್ಯೋನ್ಯವಾಗಿದ್ದರು ಎಂದು ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ. ಹೀಗಿದ್ದರೂ ಈ ಸಾವಿನ ಹಿಂದೆ ಯಾರ ಕೈವಾಡವಿದೆ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುವುದು ತನಿಖೆಯಿಂದ ತಿಳಿದು ಬರಬೇಕಿದೆ.