ಆಫ್ರಿಕಾ ಶ್ರೀಮಂತ ವ್ಯಕ್ತಿಯನ್ನೇ ಉದ್ಯೋಗಿಯಾಗಿ ನೇಮಕ ಮಾಡಿದ ಭಾರತದ ಕಂಪನಿ, ಸ್ಯಾಲರಿ ₹4032 ಕೋಟಿ

Published : Sep 23, 2026, 01:11 PM IST
Aliko Dangote Africa richest person

ಸಾರಾಂಶ

ಆಫ್ರಿಕಾದ ಶ್ರೀಮಂತ ವ್ಯಕ್ತಿ ಆಲಿಕೋ ಡಾಂಗೋಟೆಯನ್ನು ಭಾರತದ ಕಂಪನಿಯೊಂದು ತನ್ನ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದೆ. ಸ್ಯಾಲರಿಯಾಗಿ ಬರೋಬ್ಬರಿ 4032 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿದೆ

ನವದೆಹಲಿ (ಸೆ.23) ಕಂಪನಿಗಳ ಸಿಇಒ, ಚೇರ್ಮೆನ್ ಸೇರಿದಂತೆ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಬೇರೆ ಪ್ರಾಜೆಕ್ಟ್, ಕಂಪನಿಗಳು ದುಬಾರಿ ವೇತನ ನೀಡಿ ನೇಮಕ ಮಾಡಿಕೊಳ್ಳುವುದು ಸಾಮಾನ್ಯ. ಇದೀಗ ಭಾರತದ ಪೆಟ್ರೋಲಿಯಂ ಕಂಪನಿ, ಆಫ್ರಿಕಾ ದೇಶದ ಶ್ರೀಮಂತ ವ್ಯಕ್ತಿ ಆಲಿಕೋ ಡಾಂಗೋಟೆಯನ್ನು ತನ್ನ ಕಂಪನಿಗೆ ನೇಮಕ ಮಾಡಿಕೊಂಡಿದೆ. ಮಾತುಕತೆಯಲ್ಲಿ ಸಂಭಾವನೆಯಾಗಿ ಬರೋಬ್ಬರಿ 4032 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿದೆ.

ಎಂಜಿನೀಯರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯಿಂದ ನೇಮಕ

ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನ ಅಂಗ ಸಂಸ್ಥೆಯಾದ ಎಂಜಿನೀಯರ್ಸ್ ಇಂಡಿಯಾ ಲಿಮಿಟೆಡ್ ಈ ಮಹತ್ವದ ನೇಮಕ ಮಾಡಿಕೊಂಡಿದೆ. ಎಂಜನಿಯರ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ಕೀನ್ಯಾದಲ್ಲಿ 16 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಕಚ್ಚಾ ತೈಲ ಸಂಸ್ಕರಣಾ ಘಟಕ ಹಾಗೂ ಪೆಟ್ರೋಕೆಮಿಕಲ್ ಸ್ಥಾವರ ಆರಂಭಿಸುತ್ತಿದೆ. ಇದರ ಮೇಲ್ವಿಚಾರಣೆ ಮಾಡಲು ಆಲಿಕೋ ಡಾಂಗೋಟೆಯನ್ನೇ ನೇಮಕ ಮಾಡಿದೆ.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಎಂಜಿನೀಯರ್ಸ್ ಇಂಡಿಯಾ ಲಿಮಿಟೆಡ್ ಕಂಪನಿ, ಕೀನ್ಯಾದ ಕರಾವಳಿ ಲಾಮುವಿನಲ್ಲಿ ಬೃಹತ್ ರಿಫೈನರ್ ಘಟಕ ಆರಂಭಿಸುತ್ತಿದೆ. ಡಾಂಗೋಟೆಯ ಕೀನ್ಯಾದಲ್ಲಿ ಖಾಸಗಿ ರಿಫೈನರಿ ಘಟಕ ಹೊಂದಿದ್ದಾರೆ. ಇದೀಗ ಭಾರತ ಹಾಗೂ ಕೀನ್ಯಾ ಜಂಟಿಯಾಗಿ ಬೃಹತ್ ಘಟಕವಾಗಿ ವಿಸ್ತರಿಸುತ್ತಿದೆ. ಈ ಮೂಲಕ ತೈಲ ಅವಲನಂಬನೆ ತಪ್ಪಿಸಲು ಬೃಹತ್ ಯೋಜನೆಗೆ ಮುಂದಾಗಿದೆ.

ಈ ಯೋಜನೆಯಡಿ ಆಫ್ರಿಕಾದ ತೈಲ ಅವಲಂಬನೆ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಲಿದೆ. ಇಥಿಯೋಪಿಯಾ ಸೇರಿದಂತೆ ಹಲವೆಡೆ ಪೈಪ್‌ಲೈನ್ ಯೋಜನೆಗಳು ನಡೆಯಲಿದೆ. ಈ ಪೈಪ್‌ಲೈನ್ ಜಾಲ ಇಥಿಯೋಪಿಯಾ, ದಕ್ಷಿಣ ಸೂಡಾನ್, ಯುಗಾಂಡ, ಯುವಾಂಡ , ಬುರುಂಡಿಗಳನ್ನು ಸಂಪರ್ಕಿಸಲಿದೆ. ಈ ಭಾಗದ ತೈಲ ಆಮದು ಸಮಸ್ಯೆಗಳಿಗೆ ಪರಿಹಾರವಾಗಲಿದೆ.

ಭಾರತ ಹಾಗೂ ಆಫ್ರಿಕಾ ನಡುವಿನ ಸಹಯೋಗದಡಿ ಈ ಯೋಜನೆ ಆರಂಭಗೊಂಡಿದೆ. ಭಾರತದ ಹಲವು ಕಂಪನಿಗಳು ಆಫ್ರಿಕಾದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಆಫ್ರಿಕಾ ಜೊತೆ ನಿಕಟ ಸಂಪರ್ಕ ಹಾಗೂ ಉತ್ತಮ ಬಾಂಧವ್ಯ ಹೊಂದಿರುವ ಭಾರತ ಇಂಧನ ಪರಿಹಾರಕ್ಕೆ ಹಲವು ಮಾರ್ಗ ಬಳಸುತ್ತಿದೆ. ಈ ಪೈಕಿ ಆಫ್ರಿಕಾ ಕೂಡ ಒಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

3000 ವರ್ಷಗಳ ರಹಸ್ಯ ಭೇದಿಸಿದ ಈಜಿಪ್ಟ್, ಮರುಭೂಮಿಯಲ್ಲಿ ಪತ್ತೆಯಾಯ್ತು ಕಳೆದುಹೋಗಿದ್ದ 'ಮೆಸೆನ್' ನಗರದ ಸುಳಿವು!
ಭಾರತ ಪಾಕಿಸ್ತಾನ ಸೇರಿ ವಿಶ್ವದ 8 ಯುದ್ಧ ನಿಲ್ಲಿಸಿದ್ದೇ ನಾನು: ಮತ್ತೊಮ್ಮೆ ಕೊಚ್ಚಿಕೊಂಡ ಟ್ರಂಪ್! ಇರಾನ್‌ಗೆ ಎಚ್ಚರಿಕೆ