ಇರಾನ್‌ ಅಣು ಘಟಕಕ್ಕೆ ಭಾಗಶಃ ಮಾತ್ರ ಹಾನಿ?

Published : Jun 26, 2025, 05:44 AM IST
Israel attack on iran

ಸಾರಾಂಶ

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದಂತೆ ಅಮೆರಿಕ ಹಾಗೂ ಇಸ್ರೇಲ್ ವಾಯುದಾಳಿಯಿಂದ ಇರಾನ್‌ನ 3 ಅಣ್ವಸ್ತ್ರ ಘಟಕಗಳು ಸಂಪೂರ್ಣ ನಾಶವಾಗಿಲ್ಲ. ಬದಲಾಗಿ ಭಾಗಶಃ ಮಾತ್ರ ಹಾನಿಗೊಳಗಾಗಿವೆ. ಹೀಗಾಗಿ ಇರಾನ್‌ಗೆ ಈಗ ಆಗಿದ್ದು ತಾತ್ಕಾಲಿಕ ಹಿನ್ನಡೆ ಮಾತ್ರ’ ಎಂದು ಅಮೆರಿಕ ಗುಪ್ತಚರ ವರದಿಯಲ್ಲಿ ಹೇಳಲಾಗಿದೆ

ವಾಷಿಂಗ್ಟನ್‌: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದಂತೆ ಅಮೆರಿಕ ಹಾಗೂ ಇಸ್ರೇಲ್ ವಾಯುದಾಳಿಯಿಂದ ಇರಾನ್‌ನ 3 ಅಣ್ವಸ್ತ್ರ ಘಟಕಗಳು ಸಂಪೂರ್ಣ ನಾಶವಾಗಿಲ್ಲ. ಬದಲಾಗಿ ಭಾಗಶಃ ಮಾತ್ರ ಹಾನಿಗೊಳಗಾಗಿವೆ. ಹೀಗಾಗಿ ಇರಾನ್‌ಗೆ ಈಗ ಆಗಿದ್ದು ತಾತ್ಕಾಲಿಕ ಹಿನ್ನಡೆ ಮಾತ್ರ’ ಎಂದು ಅಮೆರಿಕ ಗುಪ್ತಚರ ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ಹೇಳಿವೆ.

‘ಈ ವರದಿ ಅಧಿಕೃತವಾಗಿ ಬಿಡುಗಡೆ ಆಗಿಲ್ಲ. ಆದರೆ ಸೋರಿಕೆಯಾಗಿದೆ. ಅದರಲ್ಲಿ ಈ ಅಂಶಗಳಿವೆ’ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಇದರ ಬೆನ್ನಲ್ಲೇ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇರಾನ್‌ನ ಪರಮಾಣು ತಾಣಗಳು ಸಂಪೂರ್ಣವಾಗಿ ನಾಶವಾಗಿವೆ. ಅವು ಸಂಪೂರ್ಣ ನಾಶವಾಗಿಲ್ಲ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್‌ ಹಾಗೂ ನ್ಯೂಯಾರ್ಕ್‌ ಟೈಮ್ಸ್‌ ಮಾಡಿದ ವರದಿ ಸಂಪೂರ್ಣ ಸುಳ್ಳು. ಈ ಸುಳ್ಳು ವರದಿಗಳನ್ನು ನೋಡಿ ಮಾಧ್ಯಮಗಳಿಗೆ ಜನರೇ ಬೈಯಲು ಆರಂಭಿಸಿದ್ದಾರೆ’ ಎಂದು ತಮ್ಮ ಸಾಮಾಜಿಕ ಮಾಧ್ಯಮ ಟ್ರುತ್‌ ಸೋಷಿಯಲ್‌ನಲ್ಲಿ ಕಿಡಿಕಾರಿದ್ದಾರೆ.

ಇದಲ್ಲದೆ, ಬಳಿಕ ಹೇಗ್‌ನಲ್ಲಿ ನಡೆದ ನ್ಯಾಟೋ ಸಭೆಯಲ್ಲೂ ಮಾತನಾಡಿರುವ ಟ್ರಂಪ್‌, ‘ಇರಾನ್‌ಗೆ ಇನ್ನೆಂದೂ ಅಣು ಸಂಸ್ಕರಣೆ ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ಮಾಡಿದರೆ ಮತ್ತೆ ದಾಳಿ ಮಾಡುತ್ತೇವೆ. ಆದರೆ ಇರಾನ್‌ ಬಳಿ ಈಗ ಅಣ್ವಸ್ತ್ರಗಳೇ ಇಲ್ಲದ ಕಾರಣ ಮುಂದಿನ ವಾರ ಅಮೆರಿಕ-ಇರಾನ್‌ ಮಾತುಕತೆ ನಡೆಸಿ ಡೀಲ್‌ ಮಾಡಿಕೊಳ್ಳಲಿವೆ’ ಎಂದಿದ್ದಾರೆ.

ಇದಲ್ಲದೆ, ಶ್ವೇತಭವನ ವಕ್ತಾರೆ ಕ್ಯಾರೋಲಿನ್‌ ಲೆವಿಟ್‌ ಕೂಡ, ‘ಇರಾನ್‌ ಅಣು ಘಟಕಕ್ಕೆ ಹಾನಿ ಆಗಿಲ್ಲ ಎಂಬ ವರದಿಗಳು ಸುಳ್ಳು. ಇದು ಟ್ರಂಪ್‌ಗೆ ಮಸಿ ಬಳಿವ ಯತ್ನ. ಬಿ-2 ಬಾಂಬರ್‌ ಮೂಲಕ ಬಂಕರ್ ಬಸ್ಟರ್‌ ಬಾಂಬ್‌ ಬಳಸಿ ಅಣು ಘಟಕ ನಾಶ ಮಾಡಲಾಗಿದೆ’ ಎಂದಿದ್ದಾರೆ.

ಗುಪ್ತಚರ ವರದಿಯಲ್ಲೇನಿದೆ?:

ಅಮೆರಿಕವು ಶನಿವಾರ ಇರಾನ್‌ನ 3 ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ಮಾಡಿತ್ತು. ಆ ಘಟಕಗಳನ್ನು ಸಂಪೂರ್ಣ ನಾಶ ಮಾಡಲಾಗಿದೆ ಎಂದು ಹೇಳಿತ್ತು. ‘ಆದರೆ ವಾಸ್ತವವಾಗಿ ಈ ಘಟಕಗಳ ಪ್ರವೇಶ ಭಾಗಗಳು ಮತ್ತು ಕೆಲವು ಮೂಲಸೌಕರ್ಯಗಳು ಮಾತ್ರ ಧ್ವಂಸವಾಗಿವೆ. ಭೂಗತ ಘಟಕವು ನಾಶವಾಗಿಲ್ಲ. ಹೀಗಾಗಿ ಇದು ಇರಾನ್‌ ಅಣ್ವಸ್ತ್ರ ಯೋಜನೆಗೆ ತಾತ್ಕಾಲಿಕ ಹಿನ್ನಡೆ ಮಾತ್ರ’ ಎಂದು ಗುಪ್ತಚರ ವರದಿಯಲ್ಲಿದೆ ಎಂದು ಮೂಲಗಳು ಹೇಳಿವೆ.

ಅಪಾರ ಹಾನಿ:ಇರಾನ್‌ ಒಪ್ಪಿಗೆದುಬೈ: ಅಮೆರಿಕದ ಬಾಂಬ್‌ ದಾಳಿಯಿಂದ ಇರಾನ್‌ ಅಣು ಘಟಕಗಳಿಗೆ ತೀವ್ರ ಹಾನಿ ಆಗಿದೆ ಎಂದು ಇರಾನ್‌ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಅಲ್‌ ಜಝೀರಾ ಸುದ್ದಿವಾಹಿನಿ ಜತೆಗೆ ಮಾತನಾಡಿದ ಇರಾನ್‌ನ ವಿದೇಶಾಂಗ ಇಲಾಖೆ ವಕ್ತಾರ ಇಸ್ಮಾಯಿಲ್‌ ಬಘೈ ಅವರು, ದಾಳಿಯಿಂದಾದ ಹಾನಿ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಆದರೆ, ನಮ್ಮ ಅಣು ಕೇಂದ್ರಗಳಿಗೆ ಸಾಕಷ್ಟು ಹಾನಿಯಾಗಿರುವುದು ಮಾತ್ರ ಖಚಿತ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!