
ವಾಷಿಂಗ್ಟನ್: 189 ದೇಶಗಳ ಸದಸ್ಯತ್ವ ಹೊಂದಿರುವ, 78 ವರ್ಷಗಳ ಇತಿಹಾಸ ಹೊಂದಿರುವ, ವಿಶ್ವದ ಅತ್ಯಂತ ಬೃಹತ್ ಹಣಕಾಸು ಸಂಸ್ಥೆಗಳ ಪೈಕಿ ಒಂದಾದ ವಿಶ್ವಬ್ಯಾಂಕ್‌ನ (World Bank) ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್‌ಪಾಲ್ ಸಿಂಗ್ ಬಂಗಾ (63) ಅವರನ್ನು ನೇಮಿಸಲಾಗಿದೆ. ಇದರೊಂದಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಇದೇ ಮೊದಲ ಬಾರಿಗೆ ವಿಶ್ವದ ಅತ್ಯುನ್ನತ ಬ್ಯಾಂಕ್‌ನ ಅತ್ಯುನ್ನತ ಹುದ್ದೆ ಒಲಿದಂತಾಗಿದೆ.
ಬುಧವಾರ ಇಲ್ಲಿ ಸಭೆ ಸೇರಿಸಿದ್ದ ಬ್ಯಾಂಕ್‌ನ ಆಡಳಿತ ಮಂಡಳಿ ಅಜಯ್ ಬಂಗಾ (Ajaypal Singh Banga) ಅವರನ್ನು 2023ರ ಜೂ.2ರಿಂದ ಜಾರಿಗೆ ಬರುವಂತೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ (president of the World Bank) ಆಯ್ಕೆ ಮಾಡಿ ಸರ್ವಾನುಮತದ ನಿರ್ಧಾರ ಕೈಗೊಂಡಿತು. ಹಾಲಿ ‘ಜನರಲ್ ಅಟ್ಲಾಂಟಿಕ್’ ಕಂಪನಿಯ ಉಪಾಧ್ಯಕ್ಷರಾಗಿರುವ ಬಂಗಾ ಅವರ ಹೆಸರನ್ನು ಕೆಲ ತಿಂಗಳ ಹಿಂದೆ ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರೇ ಅಮೆರಿಕದ ಪರವಾಗಿ ಶಿಫಾರಸು ಮಾಡಿದ್ದರು. ಈ ವೇಳೆ ‘ಇತಿಹಾಸದ ಇಂಥ ಕ್ಲಿಷ್ಟಕರ ಸಮಯದಲ್ಲಿ ಜಾಗತಿಕ ಸಂಸ್ಥೆಯನ್ನು ಮುನ್ನಡೆಸಲು ಅವರು ಎಲ್ಲಾ ರೀತಿಯೂ ಶಕ್ತರಾಗಿದ್ದಾರೆ’ ಎಂದು ಬಣ್ಣಿಸಿದ್ದರು.
ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ ಭಾರತೀಯ ಅಜಯ್ ಬಂಗಾ ಆಯ್ಕೆ ಪಕ್ಕಾ
ಯಾರು ಈ ಅಜಯ್ ಬಂಗಾ
ಸೇನೆಯಲ್ಲಿ ಲೆ.ಕ. ಆಗಿ ನಿವೃತ್ತಿ ಹೊಂದಿದ ಹರ್ಭಜನ್‌ಸಿಂಗ್ (Harbhajan Singh) ಮತ್ತು ಜಸ್ವಂತ್ ಬಂಗಾರ (Jaswant Bangara) ಪುತ್ರ. ಶಿಮ್ಲಾ, ಹೈದ್ರಾಬಾದ್, ದೆಹಲಿ, ಅಹಮದಾಬಾದ್‌ನಲ್ಲಿ ಶಿಕ್ಷಣ ಪೂರೈಸಿ ಭಾರತದಲ್ಲೇ ನೆಸ್ಟ್ಲೆ, ಪೆಪ್ಸಿ ಮೊದಲಾದ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ ಅಮೆರಿಕಕ್ಕೆ ತೆರಳಿದ ಬಂಗಾ, ಸಿಟಿಗ್ರೂಪ್, ಮಾಸ್ಟರ್‌ಕಾರ್ಡ್ ಮೊದಲಾದ ಕಂಪನಿ ಸೇರಿ ಅಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ (Barack Obama) ತಮ್ಮ ಉದ್ಯಮ ಸಲಹಾ ಸಮಿತಿ ಸದಸ್ಯರಾಗಿ ನೇಮಿಸಿಕೊಂಡಿದ್ದರು. ಇವರ ಸಾಧನೆ ಗೌರವಿಸಿ ಭಾರತ ಸರ್ಕಾರ 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ವಿಶ್ವ ಬ್ಯಾಂಕ್ ಅಧ್ಯಕ್ಷೀಯ ಅಭ್ಯರ್ಥಿ Ajay Banga ಕೋವಿಡ್ ಪಾಸಿಟಿವ್, ಭಾರತದ ಸಭೆಗಳು ರದ್ದು!
ಬಂಗಾ ಮುಂದಿನ ಸವಾಲು
ಕೊರೋನೋತ್ತರ ಹೊಡೆತದಿಂದಾಗಿ ಜಾಗತಿಕ ಆರ್ಥಿಕಗೆ ಬಿದ್ದ ಪೆಟ್ಟಿನಿಂದ ಇನ್ನೂ ಹಲವಾರು ದೇಶಗಳು ಚೇತರಿಸಿಕೊಳ್ಳದೇ ಇರುವಾಗ, ಹಲವು ದೇಶಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಮಸ್ಯೆ ಎದುರಿಸುತ್ತಿರುವ ಹಂತದಲ್ಲಿ ಜಾಗತಿಕವಾಗಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಬ್ಯಾಂಕ್ ಅನ್ನು ಮುನ್ನಡೆಸುವ ಹೊಣೆಗಾಗಿ ಬಂಗಾ ಹೆಗಲಿಗೇರಿದೆ.
ಪ್ರಮುಖ ಕಂಪನಿ ಮುಖ್ಯಸ್ಥರಾದ ಭಾರತೀಯರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ