
ನವದೆಹಲಿ(ಮೇ 29): ಸಿಕ್ಕಿಂ ಹಾಗೂ ಲಡಾಖ್ ಬಳಿಯ ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಉದ್ಭವವಾಗಿದ್ದ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸುವ ಕುರಿತಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಫರ್ ಅನ್ನು ಭಾರತ ತಿರಸ್ಕರಿಸಿದೆ.
ನಮ್ಮ ಮಧ್ಯೆ ಏರ್ಪಟ್ಟಿರುವ ಬಿಕ್ಕಟ್ಟನ್ನು ಚೀನಾದೊಂದಿಗೆ ಶಾಂತಿ ಮಾತುಕತೆ ಮೂಲಕ ಶಮನ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಬುಧವಾರವಷ್ಟೇ ಭಾರತ ಹಾಗೂ ಚೀನಾ ನಡುವಣ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.
ಸಾಮಾಜಿಕ ಜಾಲತಾಣಗಳ ವಿರುದ್ಧ ಟ್ರಂಪ್ ಸಮರ
ತಾವು ಮಾಡಿದ್ದ ಎರಡು ಟ್ವೀಟ್‌ಗಳ ಸತ್ಯಾಸತ್ಯತೆಯ ಬಗ್ಗೆಯೇ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್ ಅನುಮಾನ ವ್ಯಕ್ತಪಡಿಸಿದ್ದರಿಂದ ಕೋಪೋದ್ರಿಕ್ತಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಷಿಯಲ್ ಮೀಡಿಯಾಗಳ ವಿರುದ್ಧ ಸಮರ ಸಾರಿದ್ದಾರೆ. ಅಮೆರಿಕದಲ್ಲಿ ಈ ಜಾಲತಾಣಗಳಿಗೆ ಕಾನೂನಿನ ಹೊಣೆಗಾರಿಕೆಯಿಂದ ಇರುವ ರಕ್ಷಣೆಯನ್ನೇ ವಾಪಸ್ ಪಡೆಯುವ ಅಧ್ಯಾದೇಶ ಹೊರಡಿಸಲು ಸಜ್ಜಾಗಿದ್ದಾರೆ.
ಈ ಆದೇಶ ಹೊರಬಿದ್ದರೆ, ಆಕ್ಷೇಪಾರ್ಹ ಬರಹದ ಕಾರಣಕ್ಕೆ ಸಾಮಾಜಿಕ ಜಾಲತಾಣಗಳು ತಮ್ಮ ಬಳಕೆದಾರರ ಖಾತೆಯನ್ನು ನಿಷ್ಕಿ್ರಯಗೊಳಿಸುವುದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಲಿದೆ. ಅಲ್ಲದೆ ಜಾಲತಾಣಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಕಾನೂನಿನ ನಿಷ್ಕರ್ಷೆಗೆ ಒಳಪಟ್ಟಾಗ ಜಾಲತಾಣಗಳನ್ನೂ ಪ್ರಕಾಶನ ಸಂಸ್ಥೆಗಳ ರೀತಿ ಕಾಣಲಾಗುತ್ತದೆ. ಇದರಿಂದ ಜಾಲತಾಣಗಳಿಗೆ ತೀವ್ರ ಸಂಕಷ್ಟಎದುರಾಗಲಿದೆ ಎಂದು ಹೇಳಲಾಗುತ್ತಿದೆ.
ಜೂನ್ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ
ಇಂಟರ್ನೆಟ್ ಬೆಳವಣಿಗೆಗೆ ಒತ್ತು ನೀಡುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಆ ಕ್ಷೇತ್ರದ ಕಂಪನಿಗಳಿಗೆ ಒಂದಷ್ಟುರಕ್ಷಣೆಯನ್ನು ನೀಡಲಾಗಿದೆ. ಅವನ್ನು ಪ್ಲಾಟ್‌ಫಾಮ್‌ರ್ ಎಂದು ಪರಿಗಣಿಸಲಾಗಿದೆ.
ಸಾಮಾಜಿಕ ಜಾಲತಾಣಗಳನ್ನು ಹೊಸ ನಿಯಮದ ವ್ಯಾಪ್ತಿಗೆ ತರಬಹುದೇ ಎಂಬುದನ್ನು ಪರಿಶೀಲಿಸಲು ಟ್ರಂಪ್ ಅವರು ತಮ್ಮ ಅಧ್ಯಾದೇಶದ ಮೂಲಕ ಅಮೆರಿಕದ ಸಂಪರ್ಕ ಆಯೋಗ ಹಾಗೂ ವ್ಯಾಪಾರ ಆಯೋಗಗಳಿಗೆ ಸೂಚಿಸಲೂಬಹುದು. ಆದರೆ ಅಮೆರಿಕ ಸಂಸತ್ತಿನ ಕಾಯ್ದೆಯ ಬಲವಿಲ್ಲದೆ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವುದು ಎಷ್ಟುಫಲ ನೀಡಲಿದೆ ಎಂಬುದರ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಾಂಕಾಂಗ್ ಮೇಲೆ ಚೀನಾ ಕಪಿಮುಷ್ಠಿಗೆ ಸಂಸತ್ ಸಮ್ಮತಿ
ಈ ಹಿಂದೆ ಕೂಡ ಇಂತಹುದೇ ಅಧ್ಯಾದೇಶಗಳನ್ನು ಟ್ರಂಪ್ ಹೊರಡಿಸಲು ಮುಂದಾಗಿದ್ದರು. ಅದಕ್ಕೆ ಕಾನೂನಿನ ಬಲ ಇರಲಿಲ್ಲ. ಅಲ್ಲದೆ ಅದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಕೈಬಿಡಲಾಗಿತ್ತು.
ಅಂಚೆ ಮತಗಳ ಮೂಲಕ ಅಕ್ರಮ ನಡೆಯುತ್ತಿದೆ ಎಂದು ಟ್ರಂಪ್ ಅವರು ಟ್ವೀಟ್ ಮಾಡಿದ್ದರು. ಆದರೆ ಅವರ ಟ್ವೀಟ್ ಕೆಳಭಾಗದಲ್ಲಿ ಎಚ್ಚರಿಕೆ ಸಂದೇಶ ನಮೂದಿಸಿದ್ದ ಟ್ವೀಟರ್ ಸಂಸ್ಥೆ, ವಾಸ್ತವಾಂಶ ಪರಿಶೀಲಿಸಿಕೊಳ್ಳುವಂತೆ ಬಳಕೆದಾರರಿಗೆ ಸೂಚಿಸಿತ್ತು. ಇದು ಟ್ರಂಪ್ ಅವರನ್ನು ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ