ಹಾಂಕಾಂಗ್ ಮೇಲೆ ಚೀನಾದ ಹಿಡಿತ ಬಲಗೊಳಿಸಲು ಅವಕಾಶ ಕಲ್ಪಿಸುವ, ರಾಷ್ಟ್ರೀಯ ಭದ್ರತಾ ಕಾಯ್ದೆಗೆ ಚೀನಾ ಸಂಸತ್ ಗುರುವಾರ ಅನುಮೋದನೆ ನೀಡಿದೆ. ಅವಿರೋಧವಾಗಿ ಅಂಗೀಕಾರಗೊಂಡಿರುವ ಈ ಮಸೂದೆಯನ್ನು ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿದ್ದು, ಆಗಸ್ಟ್‌ನಲ್ಲಿ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.
ಬೀಜಿಂಗ್(ಮೇ 29): ಹಾಂಕಾಂಗ್ ಮೇಲೆ ಚೀನಾದ ಹಿಡಿತ ಬಲಗೊಳಿಸಲು ಅವಕಾಶ ಕಲ್ಪಿಸುವ, ರಾಷ್ಟ್ರೀಯ ಭದ್ರತಾ ಕಾಯ್ದೆಗೆ ಚೀನಾ ಸಂಸತ್ ಗುರುವಾರ ಅನುಮೋದನೆ ನೀಡಿದೆ. ಅವಿರೋಧವಾಗಿ ಅಂಗೀಕಾರಗೊಂಡಿರುವ ಈ ಮಸೂದೆಯನ್ನು ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿದ್ದು, ಆಗಸ್ಟ್‌ನಲ್ಲಿ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.
ಹಿಂದೊಮ್ಮೆ ಬ್ರಿಟಿಷ್ ವಸಾಹತು ಎನಿಸಿದ್ದ ಹಾಂಕಾಂಗ್ ಬಳಿಕ ಚೀನಾ ತೆಕ್ಕೆಗೆ ಬಂದಿತ್ತು. ಅಲ್ಲಿ ಒಂದು ದೇಶ ಎರಡು ವ್ಯವಸ್ಥೆ (ಚೀನಾದ ನಿಯಂತ್ರಿತ ಪ್ರದೇಶ) ಜಾರಿಯಲ್ಲಿದೆ. ಕಾನೂನು ಸುವ್ಯವಸ್ಥೆ, ಆಡಳಿತ, ಭದ್ರತೆಯನ್ನು ಹಾಂಕಾಂಗ್ ವಶದಲ್ಲೇ ಇದೆ. ಆದರೆ ನೂತನ ಕಾನೂನಿಂದಾಗಿ ಹಾಂಕಾಂಗ್‌ನ ಕಾನೂನು ವ್ಯವಸ್ಥೆ ನಿಯಂತ್ರಿಸುವ ಅಧಿಕಾರ ಚೀನಾಕ್ಕೆ ದೊರೆಯಲಿದೆ. ಯಾರಾದರೂ ಚೀನಾದ ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಅದು ಅಪರಾಧ ಎನಿಸಿಕೊಳ್ಳಲಿದೆ. ಅಲ್ಲದೇ ಚೀನಾದ ಭದ್ರತಾ ಸಂಸ್ಥೆಗಳು ಹಾಂಕಾಂಗ್‌ನಿಂದಲೇ ಕಾರ್ಯನಿರ್ವಹಿಸಬಹುದಾಗಿದೆ.
ಪೋಲೆಂಡ್ ಬಾವಿಯಲ್ಲಿ ಹಿಟ್ಲರ್‌ನ 28 ಟನ್ ಚಿನ್ನ!
ಈ ವಿವಾದಿತ ಕಾನೂನಿಗೆ ಹಾಂಕಾಂಗ್ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ವ್ಯಾಪಕ ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿದೆ. ಇದೇ ವೇಳೆ ನೂತನ ಭದ್ರತಾ ಕಾಯ್ದೆಯ ಅಡಿಯಲ್ಲಿ ಅಪರಾಧಿಗಳನ್ನು ತನ್ನ ದೇಶಕ್ಕೆ ಕರೆಸಿಕೊಂಡು ವಿಚಾರಣೆ ನಡೆಸುವುದಿಲ್ಲ. ಹಾಂಕಾಂಗ್ ಕಾನೂನು ವ್ಯವಸ್ಥೆಗೆ ಪೂರಕವಾದ ಕಾನೂನು ಇದಾಗಿದೆ ಎಂದು ಚೀನಾ ಸ್ಪಷ್ಟನೆ ನೀಡಿದೆ. ಆದರೆ, ಚೀನಾ ಸರ್ಕಾರದ ಕ್ರಮವನ್ನು ಹಾಂಕಾಂಗ್‌ನ ಬಾರ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ.
ಹಾಂಕಾಂಗ್ ಸಂಸತ್ತಿನಲ್ಲಿ ಕೋಲಾಹ:
ಹಾಂಕಾಂಗ್ ಮೇಲೆ ಹಿಡಿತ ಸಾಧಿಸುವ ನಿಟ್ಟಿನಿಂದ ಚೀನಾ ಸಂಸತ್ತು ಅಂಗೀಕರಿಸಿದ ನೂತನ ಭದ್ರತಾ ಮಸೂದೆ ಹಾಂಕಾಂಗ್ ಸಂಸತ್ತಿನಲ್ಲಿ ಗುರುವಾರ ಕೋಲಾಹಲಕ್ಕೆ ಕಾರಣವಾಗಿದೆ. ಮಸೂದೆಯನ್ನು ವಿರೋಧಿಸಿದ ಪ್ರಜಾಪ್ರಭುತ್ವವಾದಿ ಮೂವರು ಸಂಸದರನ್ನು ಸದನದಿಂದ ಹೊರಗಟ್ಟಲಾಗಿದೆ.
ಅಮೆರಿಕ- ಚೀನಾ ಜಟಾಪಟಿ
ಇದೇ ವೇಳೆ ಹಾಂಕಾಂಗ್ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ ಹಾಗೂ ಅಮೆರಿಕದ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ವಿವಾದಿತ ಹಾಂಕಾಂಗ್ ಭದ್ರತಾ ಮೂಸೂದೆಯ ಬಗ್ಗೆ ಚರ್ಚಿಸಲು ಸಭೆಯೊಂದನ್ನು ಆಯೋಜಿಸಿದ್ದ ಅಮೆರಿಕ, ಚೀನಾದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಇದರಿಂದ ಹಾಂಕಾಂಗ್‌ನ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಲಿದೆ ಎಂದು ಹೇಳಿದೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ವಿಶ್ವಸಂಸ್ಥೆಯಲ್ಲಿನ ಚೀನಾದ ರಾಯಭಾರಿ, ಹಾಂಗಾಂಗ್ ಭದ್ರತೆಗೆ ಸಂಬಂಧಿಸಿದ ಭದ್ರತಾ ಮಸೂದೆ ಚೀನಾದ ಆಂತರಿಕ ವಿಷಯ. ಇದಕ್ಕೂ ಭದ್ರತಾ ಮಂಡಳಿಯ ಆಶಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.