
ಗುರುಗ್ರಾಮ(ಜ.18): ಭಾರತದ ಪವರ್ ಗ್ರಿಡ್ ಕಾರ್ಪೊರೇಶನ್ ಹಾಗೂ ಆಫ್ರಿಕನ್ ಮೂಲಸೌಕರ್ಯ ಅಭಿವೃದ್ಧಿ ವೇದಿಕೆಯಾದ ‘ಆಫ್ರಿಕಾ50’, ಕೀನ್ಯಾದಲ್ಲಿ ವಿದ್ಯುತ್ ಪ್ರಸರಣ ಮಾರ್ಗ ಅಭಿವೃದ್ಧಿಗಾಗಿ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಯೋಜನೆಯು ವಿದ್ಯುತ್ ಪ್ರಸರಣ ಮಾರ್ಗಗಳನ್ನು ಲೆಸ್ಸೊಸ್-ಲುಸುಕ್ (400 ಕಿಲೋ ವ್ಯಾಟ್) ಹಾಗೂ ಕಿಸುಮು-ಮುಸುಗಾ (220 ಕಿಲೋವ್ಯಾಟ್)ನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿಯಲ್ಲಿ ನಿರ್ಮಾಣ ಮಾಡಲಿದ್ದು, ಅದರ ಹಣಕಾಸು, ಅಭಿವೃದ್ಧಿ, ನಿರ್ವಹಣೆಯ ಕಾರ್ಯವನ್ನು ಒಳಗೊಂಡಿದೆ. ಈ ಅಭಿವೃದ್ಧಿ ಪಾಲುಗಾರಿಕೆಯಲ್ಲಿ ವಿಶ್ವದ ಪ್ರಮುಖ ವಿದ್ಯುತ್ ಪ್ರಸರಣ ಕಂಪನಿಯಾದ ಪವರ್ ಗ್ರಿಡ್ ತಂತ್ರಜ್ಞಾನ ಹಾಗೂ ಕಾರ್ಯಚರಣೆಯಲ್ಲಿ ನೆರವು ನೀಡಲಿದೆ ಅದೇ ಆಫ್ರಿಕಾ 50 ಕೀನ್ಯಾ ಸರ್ಕಾರ ಹಾಗೂ ಖಾಸಗಿ ಹೂಡಿಕೆದಾರರೊಂದಿಗೆ ಸಮನ್ವಯ ಸಾಧಿಸಿ ಯೋಜನೆಯ ಅಭಿವೃದ್ಧಿ ಹಾಗೂ ಹಣಕಾಸಿನ ಜವಾಬ್ದಾರಿ ವಹಿಸಿಕೊಳ್ಳಲಿದೆ.
ಈ ಯೋಜನೆಯಿಂದ ಕೀನ್ಯಾ ತನ್ನ ಮೊದಲ ಸ್ವತಂತ್ರ ವಿದ್ಯುತ್ ಪ್ರಸರಣ ಘಟಕವನ್ನು ಹೊಂದಲಿದೆ. ಇದರಿಂದ ಪಶ್ಚಿಮ ಕೀನ್ಯಾದಲ್ಲಿ ವಿದ್ಯುತ್ ಪ್ರಸರಣದ ಪೂರೈಕೆ ಹಾಗೂ ವಿಶ್ವಾಸಾರ್ಹತೆಯನ್ನು ಸುಧಾರಿಸಲಿದೆ. ಖಾಸಗಿ ವಲಯದ ಹೂಡಿಕೆಯ ಮುಖಾಂತರ ಆಫ್ರಿಕಾದ ವಿದ್ಯುತ್ ಪ್ರಸರಣ ಜಾಲವನ್ನು ವಿಸ್ತರಿಸಲು ನೆರವಾಗುವುಕ್ಕೆ ಈ ಯೋಜನೆ ಉತ್ತಮ ನಿದರ್ಶನವಾಗಲಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ