ವಿಶ್ವದ 35 ದೇಶಗಳಿಗೆ ಈಗ ಮೋದಿ ಜೀವದಾನಿ!

Published : Apr 13, 2020, 09:47 AM ISTUpdated : Apr 13, 2020, 09:54 AM IST
ವಿಶ್ವದ 35 ದೇಶಗಳಿಗೆ ಈಗ ಮೋದಿ ಜೀವದಾನಿ!

ಸಾರಾಂಶ

ವಿಶ್ವದ 35 ದೇಶಗಳಿಗೆ ಈಗ ಮೋದಿ ಜೀವದಾನಿ!| ಭಾರತವನ್ನು ಹಾಡಿ ಹೊಗಳಿದ ವಿಶ್ವ ನಾಯಕರು

ನವದೆಹ(ಏ.13):  ಕೊರೋನಾದಿಂದ ದೇಶದ 130 ಕೋಟಿ ಜನರ ಜೀವ ಕಾಪಾಡಲು ಮುಂಜಾಗ್ರತೆ ವಹಿಸಿ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಇದೀಗ ವಿಶ್ವದ 35ಕ್ಕೂ ಹೆಚ್ಚು ದೇಶಗಳ ಪಾಲಿಗೂ ಜೀವದಾನಿಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿಯೇ ಈ ದೇಶಗಳ ರಾಷ್ಟ್ರ ನಾಯಕರು ಇದೀಗ ಪ್ರಧಾನಿ ಮೋದಿ ಅವರನ್ನು ನಿಜವಾದ ಮಿತ್ರ ಎಂದು ಕೊಂಡಾಡಿದ್ದೂ ಅಲ್ಲದೆ ತುರ್ತು ನೆರವನ್ನು ಮನತುಂಬಿ ಶ್ಲಾಘಿಸುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೊರೋನಾಕ್ಕೆ ಇನ್ನೂ ಯಾವುದೇ ನಿರ್ದಿಷ್ಟಔಷಧ ಕಂಡುಹಿಡಿದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಮತ್ತು ಪ್ಯಾರಾಸಿಟಮಲ್‌ ಮಾತ್ರೆಯನ್ನೇ ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ರೋಗಿಗಳಿಗೆ ನೀಡಲಾಗುತ್ತಿದೆ. ಆದರೆ ವಿಶ್ವದ ಬಹುತೇಕ ದೇಶಗಳಲ್ಲಿ ಈ ಎರಡೂ ಔಷಧಗಳನ್ನು ಹೆಚ್ಚಿಗೆ ಉತ್ಪಾದಿಸುತ್ತಿಲ್ಲ. ಮತ್ತೊಂದೆಡೆ ವಿಶ್ವದ ಹೈಡ್ರೋಕ್ಸಿಕ್ಲೋರೋಕ್ವಿನ್‌ನ ಒಟ್ಟು ಉತ್ಪಾದನೆಯಲ್ಲಿ ಶೇ.70ರಷ್ಟುಪಾಲು ಭಾರತದ್ದಿದೆ. ಇನ್ನು ಪ್ಯಾರಾಸಿಟಮಾಲ್‌ ಅನ್ನು ಭಾರತ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದೆ.

ಕೊರೋನಾ ವಿರುದ್ಧ ಸದ್ದಿಲ್ಲದೆ ಯುದ್ಧ ಮಾಡುವ ಯೋಧರಿವರು!

ಹೀಗಾಗಿಯೇ ಅಮೆರಿಕ, ಇಸ್ರೇಲ್‌, ಪೋರ್ಚುಗಲ್‌, ಬ್ರೆಜಿಲ್‌, ಸಾರ್ಕ್ ದೇಶಗಳ ಪೈಕಿ ಪಾಕಿಸ್ತಾನ ಹೊರತುಪಡಿಸಿ ಉಳಿದೆಲ್ಲಾ ದೇಶಗಳು ಸೇರಿದಂತೆ 35ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ಈ ಔಷಧಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಿವೆ. ಭಾರತ ಕೂಡಾ ಇದಕ್ಕೆ ತಕ್ಷಣವೇ ಸ್ಪಂದಿಸಿ ಮೊದಲ ಹಂತದಲ್ಲಿ 15ಕ್ಕೂ ಹೆಚ್ಚು ದೇಶಗಳಿಗೆ ಔಷಧ ರವಾನಿಸಿದೆ.

ಇದರ ಬೆನ್ನಲ್ಲೇ ಅಮೆರಿಕ, ಬ್ರೆಜಿಲ್‌, ಪೋರ್ಚುಗಲ್‌, ಇಸ್ರೇಲ್‌, ಮಾಲ್ಡೀವ್‌್ಸ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಹಲವಾರು ದೇಶಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹದ ಹಸ್ತವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆ ಪೂರೈಸುವ ನಿರ್ಧಾರ ಕೈಗೊಂಡ ಭಾರತ ಹಾಗೂ ಭಾರತೀಯರಿಗೆ ಧನ್ಯವಾದ. ಭಾರತವಷ್ಟೇ ಅಲ್ಲದೆ ಮಾನವೀಯತೆಗೆ ನೆರವಾ ಮೋದಿ ಅವರ ಬಲಿಷ್ಠ ನಾಯಕತ್ವಕ್ಕೆ ಥ್ಯಾಂಕ್ಸ್‌.

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

ಶೇ.70: ವಿಶ್ವದ ಒಟ್ಟು ಹೈಡ್ರೋಕ್ಸಿಕ್ಲೋರೋಕ್ವಿನ್‌ ಉತ್ಪಾದನೆಯಲ್ಲಿ ಭಾರತದ ಪಾಲು

35 ದೇಶ: ಔಷಧ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿರುವ ವಿಶ್ವದ ದೇಶಗಳ ಸಂಖ್ಯೆ

15 ದೇಶ: ಮೊದಲ ಹಂತದಲ್ಲಿ ಭಾರತ ಔಷಧ ಪೂರೈಕೆ ಮಾಡಿರುವ ದೇಶಗಳ ಸಂಖ್ಯೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ