
ನವದೆಹಲಿ: ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್‌ನ ಚಾಬಹಾರ್ ಬಂದರಿನ ಒಂದು ಟರ್ಮಿನಲ್ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ. ವಿದೇಶದಲ್ಲಿರುವ ಬಂದರಿನ ನಿರ್ವಹಣೆಗೆ ಭಾರತ ಮುಂದಾದ ಮೊದಲ ಘಟನೆ ಇದಾಗಿದೆ.
ಈ ಒಪ್ಪಂದವು ಪ್ರಾಂತೀಯ ಸಂಪರ್ಕ ಮತ್ತು ವ್ಯಾಪಾರಕ್ಕೆ ಬಹುದೊಡ್ಡ ಕಾಣಿಕೆ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಪಾಕಿಸ್ತಾನವನ್ನು ಸಂಪರ್ಕಿಸದೆಯೇ ಭಾರತ-ಇರಾನ್- ಆಫ್ಘಾನಿಸ್ತಾನ ನಡುವಣ ವ್ಯಾಪಾರ ವಹಿವಾಟಿಗೆ ಹೊಸ ಮಾರ್ಗವನ್ನೂ ತೆರೆಯಲಿದೆ. ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸಮ್ಮುಖದಲ್ಲಿ ಶಹೀದ್- ಬೆಹೆಷ್ತಿ ಬಂದರು ನಿರ್ವಹಣೆಗಾಗಿ ಭಾರತದ ಇಂಡಿಯನ್ ಪೋರ್ಟ್ಸ್ ಗ್ಲೋಬಲ್ ಲಿ ಹಾಗೂ ಇರಾನ್‌ನ ಪೋರ್ಟ್ ಆ್ಯಂಡ್ ಮಾರಿಟೈಮ್ ಆರ್ಗನೈಸೇಷನ್ ಒಪ್ಪಂದಕ್ಕೆ ಸಹಿ ಹಾಕಿವೆ.
ಅರಬ್ಬಿ ಸಮುದ್ರದಲ್ಲಿ ಭರ್ಜರಿ ಕಾರ್ಯಾಚರಣೆ : ಏಕಕಾಲಕ್ಕೆ 2000 ಕೋಟಿ ಮೌಲ್ಯದ 3300 ಕೇಜಿ ಡ್ರಗ್ಸ್ ವಶ
ಸಿಗಲಿದೆ ಚಾಬಹರ್ ಬಂದರು: ಹೆದ್ರೋ ಮಾತೇ ಇಲ್ಲ ಪಾಕ್, ಚೀನಾ ಬಂದ್ರೂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ