ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ಪ್ರಕರಣ: ಭಾರತದ ಸ್ಪಷ್ಟನೆ ಇದು

Published : Jul 17, 2025, 06:14 PM IST
nimisha priya

ಸಾರಾಂಶ

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಭಾರತ ಸರ್ಕಾರ ಈ ವಿಷಯವನ್ನು ಗಮನದಿಂದ ಅನುಸರಿಸುತ್ತಿದ್ದು, ಅಗತ್ಯ ಸಹಾಯವನ್ನು ನೀಡುತ್ತಿದೆ. ನಿಮಿಷಾ ಅವರ ಕುಟುಂಬವು ಸಂಧಾನದ ಮಾರ್ಗವನ್ನೇ ಆರಿಸಲು ಪ್ರಯತ್ನಿಸುತ್ತಿದೆ.

ನವದೆಹಲಿ: ಯೆಮೆನ್‌ನಲ್ಲಿ ಮರಣದಂಡನೆಗೆ ಒಳಗಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಖಚಿತಪಡಿಸಿದೆ.  ಜುಲೈ 16ರಂದು ಶಿಕ್ಷೆ ಜಾರಿಗೆ ಬರುವ ಸಾಧ್ಯತೆ ಇತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತ ಸರ್ಕಾರ ಈ ವಿಷಯವನ್ನು ಅತ್ಯಂತ ಗಮನದಿಂದ ಅನುಸರಿಸುತ್ತಿದ್ದು, ನಾವು ಎಲ್ಲಾ ಅಗತ್ಯ ಸಹಾಯವನ್ನು ನೀಡುತ್ತಿದ್ದೇವೆ. ನ್ಯಾಯಾಂಗ ನೆರವಿಗೆ ವಕೀಲರನ್ನು ನೇಮಿಸಿದ್ದು, ನಿಯಮಿತ ಕಾನ್ಸುಲರ್ ಭೇಟಿ ವ್ಯವಸ್ಥೆಯನ್ನು ಕೂಡಾ ನಡೆಸುತ್ತಿದ್ದೇವೆ. ನಾವಿಲ್ಲದಿದ್ದು ಏನೂ ಇಲ್ಲ. ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಮತ್ತು ಕೆಲವು ಸ್ನೇಹಪರ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದಾರೆ.  ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಎಂದು ಸ್ಪಷ್ಟಪಡಿಸಿದರು.

ಜೈಸ್ವಾಲ್ ಅವರು ಮುಂದುವರೆದು, ನಿಮಿಷಾ ಅವರ ಕುಟುಂಬವು ಇತರರ ಜೊತೆಗೆ ಸಂಧಾನದ ಮಾರ್ಗವನ್ನೇ ಆರಿಸಲು ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಮಯವನ್ನು ಮನವಿ ಮಾಡುವ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16ರಂದು ನಿಗದಿಯಾಗಿದ್ದ ಶಿಕ್ಷೆಯ ಜಾರನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ” ಎಂದು ಹೇಳಿದರು.

ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವೆಂದು ಬಣ್ಣಿಸಿರುವ ಜೈಸ್ವಾಲ್, ಇದನ್ನು ನಾವು ನಿಕಟವಾಗಿ ಅನುಸರಿಸುತ್ತಿದ್ದು, ಈ ಕುರಿತು ಕೆಲವು ಸ್ನೇಹಪರ ರಾಷ್ಟ್ರಗಳ ಸಹಕಾರವನ್ನು ಪಡೆಯಲು ಪ್ರಾಯತ್ನಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ. ಶೇಖ್ ಅಬೂಬಕರ್ ಅಹ್ಮದ್ ಅವರು ಮಧ್ಯಸ್ಥಿಕೆ ನಡೆಸುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಸ್ವಾಲ್, ಈ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ,” ಎಂದು ಉತ್ತರಿಸಿದರು.

ನಿಮಿಷಾ ಪ್ರಿಯಾ ವಿರುದ್ಧದ ಪ್ರಕರಣವೇನು?

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ನರ್ಸ್, 2017 ರ ಜುಲೈನಲ್ಲಿ ಯೆಮೆನ್ ಪ್ರಜೆಯೊಬ್ಬರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ನಿಮಿಷಾ ಪ್ರಿಯಾ ವಿರುದ್ಧ ಯೆಮೆನ್ ಪ್ರಜೆಯೊಬ್ಬರ ಸಾವಿಗೆ ಕಾರಣಳೆಂದು ಅಪರಾಧವಿದ್ದು, ಸ್ಥಳೀಯ ಕಾನೂನಿನ ಅಡಿಯಲ್ಲಿ ಮರಣದಂಡನೆ ವಿಧಿಸಲಾಗಿದೆ. ಅವರ ಕುಟುಂಬ ‘ರಕ್ತದಾನ ಒಪ್ಪಂದ’ (blood money settlement) ಮೂಲಕ ಬಿಡುಗಡೆ ಸಾಧ್ಯವಾಗುವ ನಿರೀಕ್ಷೆಯಲ್ಲಿದೆ. ಈ ರೀತಿಯ ಒಪ್ಪಂದದಲ್ಲಿ ಮೃತರ ಕುಟುಂಬದೊಂದಿಗೆ ಹಣದ ಮುಖಾಂತರ ಪರಿಹಾರವನ್ನು ತಲುಪುವುದು ರೂಢಿ. ಭದ್ರತೆ, ಸಹಾನುಭೂತಿ ಮತ್ತು ನ್ಯಾಯದೊಂದಿಗೆ ಈ ಪ್ರಕರಣವನ್ನು ಮುಂದಿರಿಸಲು ಸರ್ಕಾರ ಹಾಗೂ ಅವರ ಕುಟುಂಬದಿಂದ ಸತತ ಪ್ರಯತ್ನಗಳು ನಡೆಯುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!