Islamic ಮೂಲಭೂತವಾದಿಗಳ ನೆಚ್ಚಿನ ಬಾಂಗ್ಲಾ ಸುಂದರಿ ಬೀದಿಪಾಲು: ಹಿಂದೂಗಳೇ ಕಾಪಾಡಿ ಅಂತಿರೋದ್ಯಾಕೆ?

Published : Dec 26, 2025, 04:27 PM IST
Prapti Taposhi

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಭಾರತದ ವಿರುದ್ಧ ವಿಷ ಕಾರುತ್ತಿದ್ದ ಹಿಂದೂ ಯುವತಿ ಪ್ರಾಪ್ತಿ ತಪೋಶಿ ಈಗ ಬೀದಿಗೆ ಬಂದಿದ್ದಾಳೆ. ಹಿಂದೂಗಳೇ ಕಾಪಾಡಿ ಎಂದು ಗೋಗರೆಯುವ ಸ್ಥಿತಿ ಅವಳಿಗೆ ಆಗಿದೆ. ಅಷ್ಟಕ್ಕೂ ಆಗಿದ್ದೇನು? ಯಾರೀ ಯುವತಿ? 

ಬಾಂಗ್ಲಾದೇಶದಲ್ಲಿ ಈಗ ಹಿಂದೂಗಳ ಹ*ತ್ಯೆ ನಡೆಯುತ್ತಿದೆ. ವಿನಾ ಕಾರಣ ಯಾವ್ಯಾವುದೋ ಆರೋಪಗಳನ್ನು ಹೊರಿಸಿ ನರಮೇಧ ಮಾಡಲಾಗುತ್ತಿದೆ. ಹಿಂದೂಗಳು ಅಕ್ಷರಶಃ ನಲುಗುವ ಸ್ಥಿತಿ ಉಂಟಾಗಿದೆ. ಯಾವಾಗ ಬೇಕಾದರೂ ಅತ್ಯಂತ ಕ್ರೂರವಾಗಿ ಸಾಯುವ ಭಯದಲ್ಲಿ ಇದ್ದಾರೆ ಬಾಂಗ್ಲಾದಲ್ಲಿನ ಹಿಂದೂಗಳು. ಇದನ್ನು ನೋಡಿದ ಹಿಂದೂಗಳ ರಕ್ತ ಕೊತಕೊತ ಕುದಿಯುವಂತಾಗಿದೆ. ಆದರೆ ಭಾರತದಲ್ಲಿಯೂ ಈ ಕೃತ್ಯವನ್ನು ಬೆಂಬಲಿಸುವ ಒಂದಷ್ಟು ಗುಂಪು ಕೂಡ ಇದೆ. ಇದರ ನಡುವೆಯೇ ಈಗ ಬಾಂಗ್ಲಾದೇಶದ ಇಸ್ಲಾಮಿಕ್ ಮೂಲಭೂತವಾದಿಗಳ ನೆಚ್ಚಿನ ಸುಂದರಿ ಪ್ರಾಪ್ತಿ ತಪೋಶಿ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾಳೆ.

ಏನೇನು ಅಂದಿದ್ದಳು ನೋಡಿ ಈಕೆ?

ಅದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ಖುದ್ದು ಹಿಂದೂ ಆಗಿರುವ ಪ್ರಾಪ್ತಿ, ಬಾಂಗ್ಲಾದೇಶದಲ್ಲಿ, ಹಿಂದೂಗಳನ್ನು ಕೊಲ್ಲುತ್ತಿದ್ದಾಗ, ಭಾರತ ಮತ್ತು ಆರ್​ಎಸ್​ಎಸ್​ ಶಪಿಸುತ್ತಿದ್ದಳು. ಹಿಂದೂಗಳ ನರಮೇಧವನ್ನು ಪ್ರತಿಭಟಿಸುತ್ತಿದ್ದರೆ, ಇದೇ ಯುವತಿ ಅದನ್ನು ಹಿಂದುತ್ವದ ಪ್ರಚಾರ ಎಂದು ಕರೆಯುತ್ತಿದ್ದವಳು. ಬಾಂಗ್ಲಾದೇಶದಲ್ಲಿ ಹಿಂದೂ ಪ್ರತಿಭಟನೆಗಳನ್ನು ಭಾರತೀಯ ಪ್ರಪೋಗೆಂಡಾ ಎಂದು ಬ್ಯಾನರ್​ ಹಿಡಿದು ಬಾಂಗ್ಲಾದೇಶದ ಇಸ್ಲಾಮಿಕ್ ಮೂಲಭೂತವಾದಿಗಳನ್ನು ಖುಷಿಪಡಿಸುತ್ತಿದ್ದಳು. ಶೇಖ್ ಹಸೀನಾ ವಿರುದ್ಧ ಇಸ್ಲಾಮಿಕ್ ಮೂಲಭೂತವಾದಿಗಳನ್ನು ಬೆಂಬಲಿಸಿದಳು.  

ರಾಜಕೀಯ ಲಾಭಕ್ಕಾಗಿ ಹಿಂದೂಗಳನ್ನು ದಾಳಗಳಾಗಿ ಬಳಸಿಕೊಳ್ಳಲಾಗುತ್ತಿದೆ ಮತ್ತು ಹಿಂದುತ್ವ ಕಾರ್ಯಸೂಚಿಗೆ ತಳ್ಳಲಾಗುತ್ತಿದೆ ಎಂದು ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದವಳು ಇವಳು. ಹಿಂದೂಗಳು ಮತ್ತು ಆರ್‌ಎಸ್‌ಎಸ್ ಅನ್ನು ನಿಂದಿಸುವುದಲ್ಲದೆ, ಬಿಎಸ್‌ಎಫ್ ವಿರುದ್ಧವೂ ಪ್ರತಿಭಟಿಸಿದ್ದಳು. ಭಾರತದ ಗಡಿ ಭದ್ರತಾ ಪಡೆ (BSF) ಬಾಂಗ್ಲಾದೇಶ-ಭಾರತ ಗಡಿಯಲ್ಲಿ ಬಾಂಗ್ಲಾದೇಶಿ ನಾಗರಿಕರನ್ನು ಕೊಂದಿದೆ ಎಂದು ಆರೋಪಿಸಿದ್ದಳು. ಈ ನಿಟ್ಟಿನಲ್ಲಿ ಅವರು ರ್ಯಾಲಿಯನ್ನು ಸಹ ಆಯೋಜಿಸಿದ್ದಳು. ಹಿಂದೂಗಳ ವಿರುದ್ಧ ಮಾತನಾಡಿದ್ದಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಅವಳು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಳು ಮತ್ತು ಇಸ್ಲಾಮಿಕ್ ಪ್ರಚಾರವನ್ನು ಹರಡುವ ಚಾನೆಲ್ ಅಲ್ ಜಜೀರಾದಲ್ಲಿಯೂ ಕಾಣಿಸಿಕೊಂಡಳು. ಆದರೆ ಇದೀಗ ಅಯ್ಯಯ್ಯೋ ಕಾಪಾಡಿ ಕಾಪಾಡಿ ಎಂದು ಗೋಳಿಡುತ್ತಿದ್ದಾಳೆ.

ಆಗಿದ್ದೇನು?

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ನಡುವೆಯೇ, ಹಿಂದೂವಾಗಿರುವ ಪ್ರಾಪ್ತಿಯ ಮನೆಯನ್ನೂ ಸುಟ್ಟು ಹಾಕಲಾಗಿದೆ. 100 ಕ್ಕೂ ಹೆಚ್ಚು ಹಿಂದೂ ಮನೆಗಳು ಮತ್ತು ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ತಾನು ನಿಮ್ಮದೇ ಪರವಾಗಿ ಇರುವವಳು ಎಂದು ಎಷ್ಟೇ ಬೊಬ್ಬಿಟ್ಟರೂ ಪ್ರತಿಭಟನಾಕಾರರು ಕೇಳಲಿಲ್ಲ. ಅವಳ ಸ್ವಂತ ಮನೆಯ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳು ದಾಳಿ ಮಾಡಿದ್ದಾರೆ. ಇದೀಗ ಅವರು ಅಯ್ಯಯ್ಯೋ ಕಾಪಾಡಿ ಎನ್ನುತ್ತಾ ಬಾಂಗ್ಲಾದೇಶದ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾಳೆ.

ಯಾರೀ ಪ್ರಾಪ್ತಿ?

ಪ್ರಾಪ್ತಿ ತಪೋಶಿ ಬಾಂಗ್ಲಾದೇಶದ ಜಹಾಂಗೀರ್‌ನಗರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಅವಳು ನಿಯಮಿತವಾಗಿ ಪ್ರತಿಭಟನೆಗಳು ಮತ್ತು ರ್ಯಾಲಿಗಳಲ್ಲಿ ಭಾಗವಹಿಸುತ್ತಾಳೆ. ನಿರಂತರವಾಗಿ ಹಿಂದೂಗಳ ವಿರುದ್ಧ ವಿಷವನ್ನು ಕಾರುವಲ್ಲಿ ಎತ್ತಿದ ಕೈ. ಆದರೆ ಇದೀಗ ತನ್ನದೇ ಬುಡಕ್ಕೆ ಬಂದಾಗ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರವನ್ನು ಖಂಡಿಸುತ್ತಿದ್ದಾಳೆ. ಪ್ರಾಪ್ತಿ ಇದೀಗ, ಇಸ್ಲಾಮಿಕ್ ಮೂಲಭೂತವಾದಿಗಳು ತನ್ನ ಮನೆಯನ್ನು ಲೂಟಿ ಮಾಡಿದ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. "ನಿನ್ನೆ ರಾತ್ರಿ, ನನ್ನ ಮನೆ ಮತ್ತು ಸುನಮ್‌ಗಂಜ್‌ನಲ್ಲಿರುವ ಹಿಂದೂಗಳ ಮನೆ ಮೇಲೆ ದಾಳಿ ಮಾಡಲಾಗಿದೆ, ಧ್ವಂಸ ಮಾಡಲಾಗಿದೆ ಮತ್ತು ಲೂಟಿ ಮಾಡಲಾಗಿದೆ... ಇಲ್ಲಿಯವರೆಗೆ, ಪೊಲೀಸರು ಹಲ್ಲೆ ಮತ್ತು ಲೂಟಿಗಾಗಿ ಯಾರನ್ನೂ ಬಂಧಿಸಿಲ್ಲ. ಎಷ್ಟು ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಇಲ್ಲಿ ಏನೂ ನಡೆದಿಲ್ಲ ಎಂದು ಆಡಳಿತ ಹೇಳುತ್ತಿದೆ. ಕಾಪಾಡಿ' ಎಂದಿದ್ದಾಳೆ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೊರೆಂಟೋ ವಿವಿ ಆವರಣದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಕ್ರಿಶ್ಚಿಯನ್ನರ ಮೇಲೆ ದಾಳಿ, ಕ್ರಿಸ್‌ಮಸ್ ದಿನವೇ ನೈಜೀರಿಯಾ ಮೇಲೆ ಬಾಂಬ್‌ ದಾಳಿ ಮಾಡಿದ ಅಮೆರಿಕ!