ವಿವಾಹಕ್ಕೆ ಅತಿಯಾದ ಖರ್ಚು ಉಳಿಸಲು ಒಂದೇ ಮಂಟಪದಲ್ಲಿ 6 ಸೋದರರೊಂದಿಗೆ 6 ಸೋದರಿಯರ ಮದುವೆ!

Published : Jan 07, 2025, 11:22 PM IST
ವಿವಾಹಕ್ಕೆ ಅತಿಯಾದ ಖರ್ಚು ಉಳಿಸಲು ಒಂದೇ ಮಂಟಪದಲ್ಲಿ 6 ಸೋದರರೊಂದಿಗೆ 6 ಸೋದರಿಯರ ಮದುವೆ!

ಸಾರಾಂಶ

ಆರ್ಥಿಕ ಹೊರೆ ತಗ್ಗಿಸಲು ಪಾಕಿಸ್ತಾನದಲ್ಲಿ ಆರು ಸಹೋದರರು ಒಂದೇ ಮಂಟಪದಲ್ಲಿ ವಿವಾಹವಾದರು. ಕಿರಿಯ ಸಹೋದರನಿಗೆ 18 ವರ್ಷ ತುಂಬುವವರೆಗೂ ಒಂದು ವರ್ಷ ಕಾಯ್ದರು. ಸರಳ ವಿವಾಹದ ಮೂಲಕ ಇಸ್ಲಾಂನ ಸರಳತೆಗೆ ಒತ್ತು ನೀಡುವುದಾಗಿ ಅವರು ಹೇಳಿದರು.

ಪಾಕಿಸ್ತಾನದಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲು ಅಲ್ಲಿನ ಜನರ ಬಳಿ ಹಣವಿಲ್ಲದಂತಾಗಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ 6 ಮಂದಿ ಸಹೋದರರು ಮದುವೆಯಾದ ಅತಿಯಾದ ಖರ್ಚನ್ನು ಉಳಿಸುವ ಸಲುವಾಗ ಒಂದೇ ಮಂಟಪದಲ್ಲಿ 6 ಮಂದಿ ಸಹೋದರಿಯನ್ನು ಮದುವೆಯಾಗಿರುವ ಘಟನೆ ನಡೆದಿದೆ. ಇದಕ್ಕಾಗಿ ಅವರು ಒಂದು ವರ್ಷಗಳ ಕಾಲ ಪ್ಲ್ಯಾನ್‌ ಕೂಡ ಮಾಡಿದ್ದರು ಎನ್ನುವುದು ಬಹಿರಂಗವಾಗಿದೆ. ಇನ್ನು ಇವರು ಒಂದು ವರ್ಷ ಕಾದಿದಕ್ಕೆ ಕಾರಣವೂ ಇದೆ. ಇವರ ಅತ್ಯಂತ ಕಿರಿಯ ಸಹೋದರನಿಗೆ 18 ವರ್ಷವಾಗಬೇಕು ಅನ್ನೋ ಕಾರಣಕ್ಕಾಗಿ ಒಂದು ವರ್ಷ ಬರೀ ವಿವಾಹದ ಪ್ಲ್ಯಾನ್‌ಅಷ್ಟೇ ಮಾಡಿದ್ದರು ಎಂದು ಪಾಕಿಸ್ತಾನದ ದ ಖಾಮಾ ಪ್ರೆಸ್‌ ವರದಿ ಮಾಡಿದೆ. ಈ ವಿವಾಹ ಸಮಾರಂಭ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದ್ದು, ಕೇವಲ 100 ಮಂದಿ ಅತಿಥಿಗಳು ಮಾತ್ರವೇ ಭಾಗವಹಿಸಿದ್ದರು.

ಮದುವೆಯಲ್ಲಿ ಇಸ್ಲಾಂ ಸರಳತೆಗೆ ಒತ್ತು ನೀಡುತ್ತದೆ ಮತ್ತು ಸಂಪತ್ತಿನ ಅದ್ದೂರಿ ಪ್ರದರ್ಶನ ಅಗತ್ಯವಿಲ್ಲ ಅನ್ನೋದನ್ನು ತೋರಿಸುವ ಮೂಲಕ ತಾವು ಉದಾಹರಣೆಯನ್ನು ನೀಡಲು ಬಯಸಿದ್ದೆವು ಎಂದು 6 ಮಂದಿ ಸೋದರರು ತಿಳಿಸಿದ್ದಾರೆ. ಕೆಲವರು ಮದುವೆ ಖರ್ಚಿಗಾಗಿ ತಾವು ಖರೀದಿ ಮಾಡಿದ್ದ ಜಾಗವನ್ನು ಮಾರೋದನ್ನು ನಾವು ನೋಡಿದ್ದೇವೆ. ಇಂಥವೆಲ್ಲ ಹೊರೆಗಳು ಇರದೆ ಅತ್ಯಂತ ಸರಳವಾಗಿ ಮದುವೆಯಾಗಬೇಕು ಎಂದು ನಾವು ಬಯಸಿದ್ದೆವು ಎಂದು 6 ಮಂದಿ ಸಹೋದರರಲ್ಲೇ ಅತ್ಯಂತ ಹಿರಿಯ ವ್ಯಕ್ತಿ ತಿಳಿಸಿದ್ದಾರೆ. ಈ ಆರೂ ವಿವಾಹಗಳು ವರದಕ್ಷಿಣೆ ರಹಿತವಾಗಿ ನಡೆದಿದೆ.

ಇನ್ನು ಮದುವೆಯ ಕುರಿತಾದ ಅತ್ಯಂತ ವಿಲಕ್ಷಣ ಸುದ್ದಿಯಲ್ಲಿ, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮದುವೆಯಾದ 40 ದಿನಕ್ಕೆ ವಿಚ್ಚೇದನ ಕೇಳಿದ್ದಾಳೆ. ಅದಕ್ಕೆ ಕಾರಣ ಮದುವೆಯಾಗಿರುವ ವರನಲ್ಲಿ ಶುಚಿತ್ವವಿಲ್ಲ ಎಂದು ಹೇಳಿದ್ದಾಳೆ. ಆಕೆ ಹೇಳುವ ಪ್ರಕಾರ, ಆಕೆಯ ಪತಿ ಒಂದು ತಿಂಗಳಲ್ಲಿ ಪತಿ ಒಂದು ಅಥವಾ 2 ಬಾರಿ ಮಾತ್ರವೇ ಸ್ನಾನ ಮಾಡುತ್ತಾನೆ. ಆತನ ದೇಹದಲ್ಲಿ ಎಷ್ಟು ದುರ್ಗಂಧ ಬರುತ್ತದೆಯೆಂದರೆ, ಲೈಂಗಿಕತೆ ಮಾಡಲು ಕೂಡ ಸಾಧ್ಯವಾಗೋದಿಲ್ಲ. ಅದಕ್ಕೆ ಮನಸ್ಸು ಕೂಡ ಬರೋದಿಲ್ಲ ಎಂದಿದ್ದಾಳೆ.

ಮೆಕ್ಕಾ, ಮದೀನಾ, ಜೆದ್ದಾದಲ್ಲಿ ಭಾರೀ ಪ್ರವಾಹ, ನೀರಿನಲ್ಲಿ ಕೊಚ್ಚಿ ಹೋದ ಕಾರ್‌ಗಳು!

ಇದರಿಂದ ನೊಂದು ಹೋಗಿದ್ದ ಮಹಿಳೆ ಆಗ್ರಾದಲ್ಲಿದ್ದ ಫ್ಯಾಮಿಲಿ ಕೌನ್ಸೆಲಿಂಗ್‌ ಸೆಂಟರ್‌ಗೆ ತೆರಳಿದ್ದಳು. ಇಷ್ಟು ಕೆಟ್ಟದಾಗಿ ಜೀವನ ನಡೆಸುವ ವ್ಯಕ್ತಿಯೊಂದಿಗೆ ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಪ್ರತಿ ದಿನ ಸ್ನಾನ ಮಾಡುವಂತೆ ಹೇಳಿದರೂ ಕೂಡ ಪತಿ ನಿರಾಕರಿಸುತ್ತಿದ್ದ. ಇದೇ ತಮ್ಮಿಬ್ಬರ ನಡುವೆ ಪ್ರತಿದಿನ ಜಗಳಕ್ಕೆ ಕಾರಣವಾಗುತ್ತಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಳು.

ಚಿನ್ನ ಮಾತ್ರವಲ್ಲ, ಇನ್ನುಮುಂದೆ ಬೆಳ್ಳಿಗೂ ಹಾಲ್‌ಮಾರ್ಕ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್