ಹೆಚ್ಚು ಸಕ್ಕರೆ ಇರುವ ತಂಪು ಪಾನೀಯ ಜಾಹೀರಾತಿಗೆ ನಿಷೇಧ!

By Web DeskFirst Published Oct 11, 2019, 8:21 AM IST
Highlights

ಹೆಚ್ಚು ಸಕ್ಕರೆ ಇರುವ ತಂಪು ಪಾನೀಯ ಜಾಹೀರಾತಿಗೆ ನಿಷೇಧ| ಮಧುಮೇಹ ಹರಡುವಿಕೆಯ ತಡೆಗಾಗಿ ಈ ಕ್ರಮವೆಂದ ಸರ್ಕಾರ

ಸಿಂಗಾಪುರ[ಅ.11]: ವಿಶ್ವಾದ್ಯಂತ ಮಧುಮೇಹಿ ಕಾಯಿಲೆಗೆ ತುತ್ತಾಗಿರುವವರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿರುವ ನಡುವೆಯೇ, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಂಗಾಪುರ ಸರ್ಕಾರ ಹೆಚ್ಚಿನ ಸಕ್ಕರೆ ಅಂಶವನ್ನೊಳಗೊಂಡ ತಂಪು ಪಾನೀಯಗಳ ಜಾಹೀರಾತು ಪ್ರದರ್ಶನಕ್ಕೆ ಗುರುವಾರ ನಿಷೇಧ ಹೇರಿದೆ. ಈ ಮೂಲಕ ಸಿಂಗಾಪುರ ಆರೋಗ್ಯಕರವಲ್ಲದ ತಂಪು ಪಾನೀಯಗಳ ಜಾಹೀರಾತುಗಳ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರವಾಗಿದೆ.

ಎಲ್ಲ ತಂಪು ಪಾನೀಯ ಕಂಪನಿಗಳು ತಮ್ಮ ಉತ್ಪನ್ನಗಳ ಬಾಟಲ್‌ಗಳ ಮೇಲೆ ತಂಪು ಪಾನೀಯದಲ್ಲಿರುವ ಪ್ರೋಟಿನ್‌ ಹಾಗೂ ಸಕ್ಕರೆ ಅಂಶಗಳನ್ನು ನಮೂದಿಸಬೇಕು. ಪು ಪಾನೀಯಗಳ ಜಾಹೀರಾತುಗಳನ್ನು ಆನ್‌ಲೈನ್‌, ಮುದ್ರಣ, ವಿದ್ಯುನ್ಮಾನ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ತಂಪು ಪಾನೀಯಗಳ ಜಾಹೀರಾತು ಫಲಕಗಳನ್ನೂ ಪ್ರದರ್ಶಿಸುವಂತಿಲ್ಲ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಹೇಳಿದೆ.

ತಂಪು ಪಾನೀಯ ಗ್ರಾಹಕರ ಮೇಲಿನ ಜಾಹೀರಾತಿನ ಪ್ರಭಾವವನ್ನು ಕಡಿಮೆ ಮಾಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಇದು ಆರಂಭವಷ್ಟೇ ಮುಂದಿನ ದಿನಗಳಲ್ಲಿ ಸಕ್ಕರೆ ತೆರಿಗೆ ಅಥವಾ ಅದರ ಸಂಪೂರ್ಣ ನಿಷೇಧ ಸೇರಿದಂತೆ ಇನ್ನಿತರ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

click me!