ಬಹ್ರೇನ್‌ನಲ್ಲಿ 64 ಮುಸ್ಲಿಂ ಧರ್ಮಗುರುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದೇಕೆ? ಏನಿದು ಪ್ರಕರಣ?

Published : Nov 19, 2026, 08:01 AM IST
Bahrain

ಸಾರಾಂಶ

ಬಹ್ರೇನ್‌ನಲ್ಲಿ 64 ಶಿಯಾ ಮುಸ್ಲಿಮರಿಗೆ, ಅದರಲ್ಲಿ ಹೆಚ್ಚಿನವರು ಧರ್ಮಗುರುಗಳಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. BIRD ಸಂಸ್ಥೆ ಈ ತೀರ್ಪನ್ನು ಬಲವಾಗಿ ವಿರೋಧಿಸಿದೆ. ಶಿಕ್ಷೆ ಗುರಿಯಾದವರ ವಿರುದ್ಧ ಕೇಳಿ ಬಂದ ಆರೋಪಗಳೇನು? ಏನಿದು ಪ್ರಕರಣ?

ದುಬೈ: ಬಹ್ರೇನ್‌ನಲ್ಲಿ 64 ಶಿಯಾ ಮುಸ್ಲಿಮರಿಗೆ ಜೀವಾವಧಿ ಶಿಕ್ಷೆಯ ಆದೇಶ ನೀಡಲಾಗಿದೆ ಎಂದು ಬ್ರಿಟನ್‌ನ ಮಾನವ ಹಕ್ಕುಗಳ ಸಂಘಟನೆಯೊಂದು ವರದಿ ಮಾಡಿದೆ. ಜೀವಾವಧಿ ಶಿಕ್ಷೆಗೊಳಗಾದ ಬಹುತೇಕರು ಧರ್ಮಗುರುಗಳು ಎಂದು ಹೇಳಲಾಗುತ್ತಿದೆ. ಬಹ್ರೇನ್ ಇನ್‌ಸ್ಟಿಟ್ಯೂಟ್ ಫಾರ್ ರೈಟ್ಸ್ ಆಂಡ್ ಡೆಮಾಕ್ರಸಿ (BIRD), ಮನಾಮದ ಕ್ರಿಮಿನಲ್ ಕೋರ್ಟ್, ಇದರಲ್ಲಿ ಐವರಿಗೆ 15 ವರ್ಷದ ಜೈಲು ಶಿಕ್ಷೆಯ ತೀರ್ಪು ನೀಡಿದೆ ಎಂದು ಹೇಳಿದೆ. ಬಹ್ರೇನ್‌ ಅಡ್ವೋಕೇಟ್ ಜನರಲ್ ಸಹ ಈ ತೀರ್ಪನ್ನು ಅಧಿಕೃತಪಡಿಸಿದ್ದು, ಆದ್ರೆ ಶಿಕ್ಷೆಗೊಳಗಾದವರು ಗುರುತು ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಯನ್ನು ಸಾರ್ವಜನಿಕಗೊಳಿಸಿಲ್ಲ. ಶಿಕ್ಷೆಗೊಳಗಾದವರು ಇರಾನ್‌ನ ರೆವ್ಯುಲೆಶನರಿ ಗೈಡ್ಸ್ ಗೆ ಸಂಬಂಧಿಸಿದ ಭಯೋತ್ಪಾದಕ ಸಂಘಟನೆ ಸ್ಥಾಪಿಸಿದ ಆರೋಪವಿದೆ ಎಂದು ವರದಿಯಾಗಿದೆ.

ಈ ಶಿಕ್ಷೆಯನ್ನು ಬಲವಾಗಿ ವಿರೋಧಿಸಿರುವ BIRD, ಈ ತೀರ್ಪಿನ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಿದೆ. ಒತ್ತಾಯ ಅಥವಾ ಒತ್ತಡ ಹಾಕುವ ಮೂಲಕ ತಪ್ಪೊಪ್ಪಿಗೆ ಮತ್ತು ರಕ್ಷಣಾಪಡೆಗಳ ಮೇಲೆ ತೀವ್ರ ನಿರ್ಬಂಧ ವಿಧಿಸಲಾಗಿದೆ ಎಂಬ ಆರೋಪಗಳನ್ನು ಮಾಡಲಾಗಿದೆ. ಹಾಗೆಯೇ ತೀರ್ಪಿನ ವಿಶ್ವಾಸರ್ಹತೆ ಮೇಲೆ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ.

ಬಂಧಿತರಲ್ಲಿ ಬಹುತೇಕರು ಧರ್ಮಗುರುಗಳು

ಈ ವರ್ಷದ ಆರಂಭದಲ್ಲಿ ಅಂದ್ರೆ ಫೆಬ್ರವರಿ ವೇಳೆ ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ಜೊತೆಯಾಗಿ ಯುದ್ಧ ಆರಂಭಿಸಿದ್ದವು. ಸುನ್ನಿ ಮುಸ್ಲಿಂ ಆಳ್ವಿಕೆಯ ಬಹ್ರೇನ್ ಅಧಿಕಾರಿಗಳು, ಅಧಿಕಾರಿಗಳು ಮತ್ತು ಭಯೋತ್ಪಾದನೆ ಆರೋಪದ ಮೇಲೆ ನೂರಾರು ಜನರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದ ಬಹುತೇಕರು ಶಿಯಾ ಸಮುದಾಯವರು ಎಂದು ವರದಿಯಾಗಿತ್ತು. ಇರಾನ್‌ನಲ್ಲಿ ಶಿಯಾ ಸಮುದಾಯ ಬಹುಸಂಖ್ಯಾತ ವರ್ಗವಾಗಿದೆ. ಇರಾನ್ ಬೆಂಬಲಿಸುವ ಮೂಲಕ ಅಪರಾಧ ಕೃತ್ಯಕ್ಕೆ ಪರೋಕ್ಷ ಅಥವಾ ಅಪರೋಕ್ಷವಾಗಿ ಬೆಂಬಲದ ಆರೋಪದಲ್ಲಿ ಶಿಯಾ ಸಮುದಾಯವರನ್ನು ಬಂಧಿಸಿದ್ದ ಅಧಿಕಾರಿಗಳು, ಹಲವರ ಬಹ್ರೇನ್ ಪೌರತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.

ಇರಾನ್ ವಿರುದ್ಧ ಇಸ್ರೇಲ್-ಅಮೆರಿಕಾ ಯುದ್ಧ

ಯುದ್ದದ ಸಂದರ್ಭದಲ್ಲಿ ಅಮೆರಿಕಾದ ದಾಳಿಗೆ ಪ್ರತಿಯಾಗಿ ಬಹ್ರೇನ್‌ನಲ್ಲಿರುವ ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ಡ್ರೋನ್, ಕ್ಷಿಪಣಿಗಳ ದಾಳಿ ನಡೆಸಿತ್ತು. ಬಹ್ರೇನ್ ಸೇರಿದಂತೆ ಗಲ್ಫ್ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕಾ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿತ್ತು. ಸೋಮವಾರ ಶಿಕ್ಷೆಗೊಳಗಾದವರು 56 ಜನರನ್ನು ಮೇ ಮತ್ತು ಜೂನ್ ತಿಂಗಳಲ್ಲಿ ಬಂಧಿಸಲಾಗಿತ್ತು.

BIRD ವರದಿ ಪ್ರಕಾರ, ಬಂಧಿತರಲ್ಲಿ 47 ಜನರು ಶಿಯಾ ಧರ್ಮಗುರುಗಳಾಗಿದ್ದು, ಇವರಲ್ಲಿ ಶೇಖ್ ಮೊಹಮ್ಮದ್ ಸಂಕೌರ್ ಮತ್ತು ಶೇಖ್ ಅಲಿ ಅಲ್-ಸದಾದಿ ಸೇರಿದ್ದಾರೆ. ಬಂಧಿತ ಧರ್ಮಗುರುಗಳು, ದುರಾಜ್‌ನಲ್ಲಿರೋ ಇಮಾಮ್ ಅಲ್-ಸಾದಿಕ್ ಗ್ರ್ಯಾಂಡ್ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆಯ ನೇತೃತ್ವವನ್ನು ವಹಿಸುತ್ತಿದ್ದರು. ರಾಸ್ ರುಮ್ಮನ್ ಗ್ರ್ಯಾಂಡ್ ಮಸೀದಿಯ ಇಮಾಮ್ ಸಯ್ಯದ್ ಮೂಸಾ ಅಲ್-ಅಲ್ವದೈ ಸಹ ಬಂಧನಕ್ಕೊಳಗಾಗಿದ್ದರು.

ಬಂಧಿತರ ಮೇಲಿರುವ ಆರೋಪಗಳೇನು?

ಸರ್ಕಾರಿ ಪ್ರಾಸಿಕ್ಯೂಷನ್‌ನಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನೊಂದಿಗೆ ಸಂಪರ್ಕ, ಭಯೋತ್ಪಾದಕ ಸಂಘಟನೆಯೊಂದನ್ನು ಸ್ಥಾಪನೆ, ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆ. ಆಡಳಿತ ಬದಲಾವಣೆಗೆ ಕರೆ ಸೇರಿದಂತೆ ಬಂಧಿತ 64 ಜನರ ವಿರುದ್ಧ ಹಲವು ಆರೋಪಗಳನ್ನು ಹೊರಿಸಲಾಗಿತ್ತು. ಇಷ್ಟು ಮಾತ್ರವಲ್ಲ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಾರ್ವಜನಿಕರನ್ನು ಪ್ರಚೋದಿಸಿದ ಅರೋಪ ಸಹ ಇವರ ಮೇಲಿದೆ. ರಾನ್‌ನ ದೇವಪ್ರಭುತ್ವ ವ್ಯವಸ್ಥೆಯ ಆಧಾರವಾಗಿರುವ "ವಿಲಾಯತ್-ಎ-ಫಕಿಹ್" (ಸರ್ವೋಚ್ಚ ಧರ್ಮಗುರುವಿನ ಆಳ್ವಿಕೆ) ಸಿದ್ಧಾಂತವನ್ನು ಉತ್ತೇಜಿಸಿದ್ದರು ಎಂದು ಪ್ರಾಸಿಕ್ಯೂಷನ್ ತನ್ನ ವಾದದಲ್ಲಿ ವಿವರಿಸಿತ್ತು.

15 ವರ್ಷದಿಂದ ಜೀವಾವಧಿಯವರೆಗೆ ಜೈಲು ಶಿಕ್ಷೆ

ಅಡ್ವೊಕೇಟ್ ಜನರಲ್ ಮತ್ತು ಪ್ರಾಸಿಕ್ಯೂಷನ್ ವಿಭಾಗದ ಮುಖ್ಯಸ್ಥರು, ಹೈ ಕ್ರಿಮಿನಲ್ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಣಯಿಸಿ 15 ವರ್ಷದಿಂದ ಜೀವಾವಧಿಯವರೆಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ನ್ಯಾಯಾಲಯ ಕೆಲವು ಆರೋಪಿಗಳಿಗೆ $265,000 (ಸುಮಾರು 200,000 ಪೌಂಡ್‌ಗಳು) ದಂಡ ವಿಧಿಸಿದೆ. ದತ್ತಿ ಉದ್ದೇಶಗಳಿಗಾಗಿ ಬಳಸಲಾಗುವ $21.2 ಮಿಲಿಯನ್ (ಸುಮಾರು 16 ಮಿಲಿಯನ್ ಪೌಂಡ್‌ಗಳು) ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

37 ವರ್ಷದ ಮಗನಿದ್ದರೂ 59ನೇ ವಯಸ್ಸಿನಲ್ಲಿ 3ನೇ ಮಗುವಿನ ನಿರೀಕ್ಷೆಯಲ್ಲಿ ಆಂಕರ್, ಲೈವ್ ಟಿವಿ ಹೇಳಿಕೆ ಬೆನ್ನಲ್ಲೇ ಆಗಿದ್ದೇನು?
ಅಬ್ಬಬ್ಬಾ...! ಈ ಪೆನ್ನಿನ ಬೆಲೆ ಬರೋಬ್ಬರಿ ₹67 ಕೋಟಿ; ಜಗತ್ತಿನಲ್ಲಿರುವುದು ಒಂದೇ ಒಂದು ಪೆನ್‌! ಇದರಲ್ಲಿರುವ ವಿಶೇಷತೆ ಏನು ಗೊತ್ತಾ?