4 ತಿಂಗಳಿನಿಂದ ಮಿಸ್ಸಿಂಗ್, ಕಾಡಿನಲ್ಲಿ 2 ತಿಂಗಳ ಕಂದಮ್ಮನೊಂದಿಗೆ ಸಿಕ್ಕ 15ರ ಬಾಲಕಿ!

Published : Nov 18, 2026, 05:00 PM IST
girl missing case AI Image

ಸಾರಾಂಶ

ಶ್ರೀಲಂಕಾದಲ್ಲಿ 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ದಟ್ಟ ಕಾಡಿನಲ್ಲಿ 2 ತಿಂಗಳ ಹಸುಗೂಸಿನೊಂದಿಗೆ ಪತ್ತೆಯಾಗಿದ್ದಾಳೆ. ಪೊಲೀಸರು ತಾಯಿ-ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ನಾಲ್ಕು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯೊಬ್ಬಳು, ದಟ್ಟಕಾಡಿನಲ್ಲಿ ಎರಡು ತಿಂಗಳ ಮಗುವಿನೊಂದಿಗೆ ಪತ್ತೆಯಾಗಿದ್ದಾಳೆ. ಪೊಲೀಸರು ಬಾಲಕಿಯ ಪತ್ತೆಯಗಾಗಿ ನಡೆಸಿದ ಕಾರ್ಯಾಚರಣೆ ಕೊನೆಗೂ ಫಲ ನೀಡಿದ್ದು, ಘಟನೆಯ ಸಂಬಂಧ ಇಬ್ಬರು ಪುರುಷರನ್ನು ಬಂಧನ ಮಾಡಿದ್ದಾರೆ.

ಶ್ರೀಲಂಕಾದ ನಕಿಲ್ಸ್ ಪರ್ವತಶ್ರೇಣಿಯ ದಟ್ಟ ಕಾಡಿನ ಪ್ರದೇಶದಲ್ಲಿ, ದೊಡ್ಡ ದೊಡ್ಡ ಬಂಡೆಗಳ ನಡುವೆ ಪ್ಲಾಸ್ಟಿಕ್ ಟರ್ಪಲ್ ನಿಂದ ನಿರ್ಮಾಣ ಮಾಡಿದ್ದ ಸಣ್ಣ ಗುಡಿಸಲಿನಿಂತಹ ಸ್ಥಳದಲ್ಲಿ ಬಾಲಕಿ ಪತ್ತೆಯಾಗಿದ್ದು, ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಸದ್ಯ ಬಾಲಕಿಯನ್ನು ರಕ್ಷಣೆ ಮಾಡಿರುವ ಪೊಲೀಸರು, ಮಗು ಮತ್ತು ಆಕೆಯನ್ನು ಸಂತ್ವಾನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಘಟನೆಯಲ್ಲಿ 23 ವರ್ಷದ ಯುವಕ ಹಾಗೂ ಆತನಿಗೆ ಸಹಾಯ ಮಾಡಿದ ಆರೋಪ ಮೇರೆ 36 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

ಶ್ರೀಲಂಕಾದ ನಕಿಲ್ಸ್ ಶ್ರೇಣಿಯ ಪಶ್ಚಿಮ ಭಾಗದ ಸಮೀಪ ಇರುವ ಮಿಮುರೆ, ಕಂದಕಟ್ಟಿಯ ಪ್ರದೇಶದಲ್ಲಿ ವಾಸಿಸುತ್ತಿದ್ದ 15 ವರ್ಷದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು. ಇದರೊಂದಿಗೆ ಆಕೆಯ ಕುಟುಂಬ ಸದಸ್ಯರು ಜುಲೈ 13 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಶ್ರೀಲಂಕಾದ ಸುದ್ದಿ ವಾಹಿನಿ ನ್ಯೂಸ್‌ವೈರ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಬಾಲಕಿ ಪತ್ತೆಗಾಗಿ ಪೊಲೀಸರು ಬರೋಬ್ಬರಿ ನಾಲ್ಕು ತಿಂಗಳ ಕಾಲ ಹುಡುಕಾಟ ನಡೆಸಿದ್ದರು. ಇದಕ್ಕಾಗಿ ಪ್ರತ್ಯೇಕ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು. ವಿಚಾರಣೆಯಲ್ಲಿ ಬಾಲಕಿ ಓಡಾಡುವ ಪ್ರದೇಶಗಳು, ಸ್ನೇಹಿತರು, ಆಕೆಯ ಕುಟುಂಬ ಸದಸ್ಯರು, ಸಂಬಂಧಿಗಳನ್ನು ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದ್ದರು. ಆದರೆ ನಾಲ್ಕು ತಿಂಗಳ ಕಾಲ ಆಕೆಯ ಸಣ್ಣ ಸುಳಿವು ಸಿಕ್ಕಿರಲಿಲ್ಲ.

ಪೊಲೀಸರಿಗೆ ಬಾಲಕಿಯ ಸುಳಿವು ಸಿಕ್ಕಿದ್ದು ಹೇಗೆ?

ಘಟನೆ ನಡೆದ ಬಳಿಕ ಪೊಲೀಸರು ಆ ಪ್ರದೇಶದಲ್ಲಿ ನಿರಂತರ ತನಿಖೆ ನಡೆಸಿದ್ದರು. ಸಾರ್ವಜನಿಕರಲ್ಲಿ ಯಾವುದೇ ಸಣ್ಣ ಸಂದೇಹ ಬಂದರೂ ಮಾಹಿತಿ ನೀಡಿಲು ಮನವಿ ಮಾಡಿದ್ದರು. ಇದರಂತೆ 23 ವರ್ಷದ ಯುವಕ ತನಗೆ ಅಗತ್ಯವಿರುವ ಹೆಚ್ಚಾಗಿ ದಿನಸಿ ವಸ್ತುಗಳನ್ನು ಸ್ಥಳೀಯ ಅಂಗಡಿಯೊಂದರಲ್ಲಿ ಖರೀದಿ ಮಾಡುತ್ತಿದ್ದನಂತೆ. ಇದರಿಂದ ಅನುಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಸುಳಿವು ನೀಡಿದ್ದಾನೆ. ಇದರಂತೆ ಯುವಕನನ್ನು ಫಾಲೋ ಮಾಡಿದ ಪೊಲೀಸರಿಗೆ ಆತ, ದಿನಸಿ ವಸ್ತುಗಳನ್ನು ತೆಗೆದುಕೊಂಡು ದಡ್ಡ ಕಾಡಿನ ಕಡೆ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ. ಈ ಹಂತದಲ್ಲಿ ಆತನನ್ನು ಹಿಂಬಾಲಿಸಿ, ಪೊಲೀಸರು ಬಾಲಕಿ ಇರುವ ಸ್ಥಳ ಪತ್ತೆ ಮಾಡಿದ್ದರು. ಆದರೆ ಸ್ಥಳಕ್ಕೆ ಹೋಗಿ ನೋಡಿದಾಗ ಪೊಲೀಸರಿಗೆ ಬಿಗ್ ಶಾಕ್ ಕಾಡಿತ್ತು. ಏಕೆಂದರೆ ಬಾಲಕಿ ಎರಡು ತಿಂಗಳ ಮಗುವಿನೊಂದಿಗೆ ಆ ಸಣ್ಣ ಸ್ಥಳದಲ್ಲಿ ವಾಸಿಸುತ್ತಿದ್ದಳು.

ಇನ್ನು, ಪೊಲೀಸರ ತನಿಖೆಯಲ್ಲಿ 15 ವರ್ಷದ ಬಾಲಕಿ ಯಾವುದೇ ವೈದ್ಯಕೀಯ ಸಹಾಯ ಇಲ್ಲದೆ, ಮಗುವಿಗೆ ಕಾರಿನಲ್ಲಿ ಜನ್ಮ ನೀಡಿರುವುದು ತಿಳಿದು ಬಂದಿದೆ. ಅಲ್ಲದೆ, 23 ವರ್ಷದ ಯುವಕನೇ ಆಕೆಯ ಎಲ್ಲಾ ಸಮಯದಲ್ಲಿ ಸಹಾಯ ಮಾಡಿದ್ದಾನೆ. ತನ್ನ ಬಳಿ ಇದ್ದ ಚೂಪದ ಕತ್ತಿಯಿಂದ ಮಗುವಿನ ಕರಳುಬಳ್ಳಿ ಕತ್ತರಿಸಿ ಗಂಟ್ಟು ಹಾಕಿರುವುದು ತಿಳಿದು ಬಂದಿದೆ.

ಸದ್ಯ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ ಬಳಿಕ ಇಬ್ಬರ ಆರೋಗ್ಯ ಪರೀಕ್ಷೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾಂಡಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾವುದೇ ವೈದ್ಯಕೀಯ ನೆರವು ಇಲ್ಲದೆ 15ರ ಬಾಲಕಿ ಮಗುವಿಗೆ ಜನ್ಮ ನೀಡಿರುವ ಹಾಗೂ ಕಾಡಿನಲ್ಲೇ ಉಳಿದುಕೊಂಡಿದ್ದ ಬಗ್ಗೆ ವಿಮರ್ಶೆಗಳು ಕೇಳಿ ಬರುತ್ತಿದೆ. ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಹಲವರು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇಷ್ಟು ದಿನ ಕಾಡಿನಲ್ಲಿ ಆಕೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಮಗುವಿನ ಪಾಲನೆ ಮಾಡಿದ್ದು ಸ್ವಲ್ಪ ನೆಮ್ಮದಿ ನೀಡುವ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಮೂಹಿಕ ವಿಮಾನ ಸ್ಥಗಿತ ಬಳಿಕ ಅಮೆರಿಕದಲ್ಲಿ ಸಾಮೂಹಿಕವಾಗಿ ಬ್ಯಾಂಕ್‌ಗಳ ಸ್ಥಗಿತ, ಜನರ ಪರದಾಟ!
ಮೋದಿ ಕಠಿಣ ವ್ಯಕ್ತಿ, ಅವರೊಬ್ಬ ಅದ್ಭುತ ನಾಯಕ, ನನ್ನ ಅತ್ಯುತ್ತಮ ಸ್ನೇಹಿತ - ಅಮೆರಿಕ ಅಧ್ಯಕ್ಷ ಹೊಗಳಿಕೆಯ ಸುರಿಮಳೆ!