'ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್‌ ಕೊಡ್ತೀನಿ..' 16 ವರ್ಷದ ವಿದ್ಯಾರ್ಥಿಗೆ ಪುಸಲಾಯಿಸಿ ರೇಪ್‌ ಮಾಡಿದ ಶಿಕ್ಷಕಿ!

By Santosh Naik  |  First Published Jan 28, 2023, 3:55 PM IST

ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್‌ ಕೊಡ್ತೀನಿ ಎಂದು ಪುಸಲಾಯಿಸಿ 26 ವರ್ಷದ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ನೀಡ್ತೀನಿ ಎಂದು ವಿದ್ಯಾರ್ಥಿಯನ್ನು ಬಲೆಗೆ ಬೀಳಿಸಿಕೊಂಡಿದ್ದಳು. ಇದೇ ವೇಳೆ ವಿದ್ಯಾರ್ಥಿ ವಿಚಾರಣೆ ವೇಳೆ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ.
 


ನ್ಯೂಯಾರ್ಕ್‌ (ಜ.28): 'ಗುರು-ಶಿಷ್ಯ' ಬಾಂಧವ್ಯಕ್ಕೆ ಮಸಿ ಬಳಿದಂಥ ಘಟನೆ ಅಮೆರಿಕದ ಮಿಸ್ಸೌರಿಯಲ್ಲಿ ನಡೆದಿದೆ. 26 ವರ್ಷದ ಶಿಕ್ಷಕಿಯೊಬ್ಬಳು 16 ವರ್ಷದ ತನನ್ನ ವಿದ್ಯಾರ್ಥಿಯನ್ನೇ ರೇಪ್‌ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಶಾಲಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ನೀಡುವುದಾಗಿ ಪುಸಲಾಯಿಸಿ 16 ವರ್ಷದ ವಿದ್ಯಾರ್ಥಿಯನ್ನು ಎರಡು ಬಾರಿ ರೇಪ್‌ ಮಾಡಿದ್ದಾಳೆ. ಈ ಶಿಕ್ಷಕಿಯನ್ನು ಮಿಸ್ಸೌರಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ಸ್ನೇಹಿತೆಯ ಮನೆಯಲ್ಲಿ ಆಕೆ ಬಾಲಕನ ಮೇಲೆ ರೇಪ್‌ ಮಾಡಿದ್ದಳು ಎಂದು ಹೇಳಲಾಗಿದೆ. ಅಮೆರಿಕದ ಮಿಸ್ಸೌರಿಯಲ್ಲಿ ಈ ಘಟನೆ ನಡೆದಿದೆ.  26 ವರ್ಷದ ಶಿಕ್ಷಕಿ ಲೀನಾ ಸ್ಟೀವರ್ಟ್ ವಿರುದ್ಧ ಲೈಂಗಿಕ ಸಂಪರ್ಕ ಮತ್ತು ಲೈಂಗಿಕ ದುರ್ನಡತೆಯ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. KY3 ಸುದ್ದಿ ವಾಹಿನಿಯ ಪ್ರಕಾರ, ಅಕ್ಟೋಬರ್ 2022 ರಲ್ಲಿ ಲೆನಾ ಸ್ಟೀವರ್ಟ್ 16 ವರ್ಷದ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿದ್ದಾಳೆ. ತನ್ನ ಲೈಂಗಿಕ ಆಸೆಯನ್ನು ಪೂರೈಸಿದರೆ, ಶಾಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ನೀಡುವುದಾಗಿ ಶಿಕ್ಷಕಿ ಲೀನಾ ಸ್ಟೀವರ್ಟ್‌ ತನ್ನ  ವಿದ್ಯಾರ್ಥಿಗೆ ಹೇಳಿದ್ದಳು ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೇ ಕಾರಣದಿಂದಾಗಿ ಶಾಲೆಯಲ್ಲಿ ನನ್ನ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮಗಳು ಇರುತ್ತಿರಲಿಲ್ಲ. ಹೆಚ್ಚಿನ ಹೋಮ್‌ವರ್ಕ್‌ಗಳನ್ನೂ ಅವರು ನೀಡುತ್ತಿರಲಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾನೆ.

2022 ರ ಅಕ್ಟೋಬರ್‌ನಲ್ಲಿ ಶಿಕ್ಷಕಿ ಲೀನಾ ಸ್ಟೀವರ್ಟ್ ತನ್ನ ಸ್ನೇಹಿತನ ಮನೆಯಲ್ಲಿ ವಿದ್ಯಾರ್ಥಿಯ ಮೇಲೆ ಎರಡು ಬಾರಿ ಅತ್ಯಾಚಾರವೆಸಗಿದ್ದಾಳೆ ಎಂದು 'ಡೈಲಿಸ್ಟಾರ್' ತನ್ನ ವರದಿಯಲ್ಲಿ ತಿಳಿಸಿದೆ. ಮೊದಲ ಬಾರಿ ರೇಪ್‌ ಮಾಡಿದ ಬಳಿಕ, ವಿದ್ಯಾರ್ಥಿಗೆ ಸಾಕಷ್ಟು ಕಷ್ಟ ಪಟ್ಟಿದ್ದ ಮತ್ತು ಮನೆಗೆ ಕಳುಹಿಸಿಕೊಡಿ ಎಂದು ಶಿಕ್ಷಕಿಯ ಎದುರು ಹಠ ಮಾಡಿದ್ದ. ಎರಡನೇ ಬಾರಿಗೆ ಇಬ್ಬರೂ ಸ್ನೇಹಿತರ ಮನೆಯಲ್ಲಿ ಭೇಟಿಯಾದಾಗ, ಶಿಕ್ಷಕಿ ಮತ್ತೊಮ್ಮೆ ವಿದ್ಯಾರ್ಥಿಯ ಮೇಲೆ ರೇಪ್‌ ಮಾಡಿದ್ದಳು.

Tap to resize

Latest Videos

undefined

ಶಿಕ್ಷೆಯಿಂದ ಪಾರಾಗಲು ಚಟ್ಟದ ಮೇಲೆ ಮಲಗಿದ್ದ ಫೋಟೋ ಕೋರ್ಟ್‌ಗೆ ಕಳಿಸಿದ್ದ ವ್ಯಕ್ತಿಗೆ 14 ವರ್ಷ ಶಿಕ್ಷೆ!

ಇದಾದ ಬಳಿಕ ಲೀನಾ ಸ್ಟೀವರ್ಟ್‌ ವಿರುದ್ಧ ಕೇಸ್‌ ದಾಖಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಪ್ರಾಧಿಕಾರದ ವಕ್ತಾರ ಜಾಕ್‌ ರಾಂಟ್ಜ್ ಅವರ ಹೇಳಿಕೆಯೂ ಈ ವಿಷಯದ ಕುರಿತಾಗಿ ಬಂದಿದೆ. ಶಿಕ್ಷಕಿಯ ಮೇಲಿನ ಆರೋಪಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಹೇಳಿದರು, ಡಿಸೆಂಬರ್‌ನಲ್ಲಿ ಲೀನಾ ಸ್ಟೀವರ್ಟ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ.

ಮದುವೆ ಮನೆಗೆ ಬಂದು ಮದುಮಗನನ್ನೇ ಅರೆಸ್ಟ್‌ ಮಾಡಿದ ಪೊಲೀಸ್‌, ಆತ ಮಾಡಿದ್ದೇನು?

'ನಾವು ನಮಗೆ ಇರುವ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿದ್ದೇವೆ. ಈ ವಿಚಾರದಲ್ಲಿ ತನಿಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಲೀನಾ ಸ್ಟೀವರ್ಟ್‌ ಕುರಿತಾದ ವಿಚಾರಣೆಗೆ ಖಂಡಿತವಾಗಿಯೂ ನಾವು ಸಹಾಯ ಮಾಡುತ್ತೇವೆ' ಎಂದು ಜಾಕ್‌ ಹೇಳಿದ್ದಾರೆ.
 

click me!