ನಾನು ಜೀವಂತ : ನೆತನ್ಯಾಹು - ಹುಡುಕಿ ಕೊಲ್ತೀವಿ: ಇರಾನ್‌

Sujatha NR   | Kannada Prabha
Published : Mar 16, 2026, 06:51 AM IST
Israeli PM Benjamin Netanyahu showing his fingers to the camera in a cafe to debunk AI-generated video rumors

ಸಾರಾಂಶ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇರಾನ್‌ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂಬ ವದಂತಿ ಹರಡಿವೆ. ಇದರ ಬೆನ್ನಲ್ಲೇ ಭಾನುವಾರ ರಾತ್ರಿ ‘ಎಕ್ಸ್‌’ನಲ್ಲಿ ಪ್ರತ್ಯಕ್ಷವಾಗಿರುವ ನೆತನ್ಯಾಹು, ‘ನಾನು ಜೀವಂತವಾಗಿದ್ದೇನೆ’ ಎಂಬ ವಿಡಿಯೋ ಹಾಕುವ ಮೂಲಕ ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಟೆಹ್ರಾನ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇರಾನ್‌ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂಬ ವದಂತಿ ಹರಡಿವೆ. ಇದರ ಬೆನ್ನಲ್ಲೇ ಭಾನುವಾರ ರಾತ್ರಿ ‘ಎಕ್ಸ್‌’ನಲ್ಲಿ ಪ್ರತ್ಯಕ್ಷವಾಗಿರುವ ನೆತನ್ಯಾಹು, ‘ನಾನು ಜೀವಂತವಾಗಿದ್ದೇನೆ’ ಎಂಬ ವಿಡಿಯೋ ಹಾಕುವ ಮೂಲಕ ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಆದರೆ ಇರಾನ್‌ ಈ ಬಗ್ಗೆ ಹೇಳಿಕೆ ನೀಡಿ‘ಒಂದು ವೇಳೆ ನೆತನ್ಯಾಹು ಬದುಕಿದ್ದೇ ಆಗಿದ್ದಲ್ಲಿ ನಾವು ಅವರನ್ನು ಹುಡುಕಿ ಕೊಂದೇ ಕೊಲ್ತೀವಿ’ ಎಂದು ಗುಡುಗಿದೆ.

ಭಾರೀ ವದಂತಿ:

ಯುದ್ಧ ಆರಂಭವಾದ ಕೆಲ ದಿನಗಳಲ್ಲೇ ತನ್ನ ದಾಳಿಗೆ ನೆತನ್ಯಾಹು ಬಲಿಯಾಗಿರುವ ಕುರಿತು ಇರಾನ್‌ ಶಂಕೆ ವ್ಯಕ್ತಪಡಿಸಿತ್ತು. ಆದರೆ ಅದಾದ ಬಳಿಕ ಅವರು ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಜೀವಂತ ಇರುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಇರಾನ್‌ನ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ಮೃತಪಟ್ಟಿದ್ದಾರೆನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದಟ್ಟವಾಗಿ ಹರಿದಾಡಿತ್ತು. ಈ ವದಂತಿಗೆ ಇಂಬು ನೀಡುವಂತೆ ಇಸ್ರೇಲ್‌ ಪ್ರಧಾನಿ ಅಧ್ಯಕ್ಷತೆಯಲ್ಲೇ ನಡೆಯಬೇಕಿದ್ದ ಇಸ್ರೇಲ್‌ನ ಮಿಲಿಟರಿ ಕೌನ್ಸಿಲ್‌ ಸಭೆಗೆ ನೆತನ್ಯಾಹು ಗೈರಾಗಿದ್ದರು. ಆದರೆ ಅವರ ಕಚೇರಿ ಸ್ಪಷ್ಟನೆ ನೀಡಿ, ‘ನೆತನ್ಯಾಹು ಬದುಕಿದ್ದಾರೆ’ ಎಂದಿತ್ತು.

ಅದರ ಬೆನ್ನಲ್ಲೇ ಇರಾನ್‌ನ ಶಕ್ತಿಶಾಲಿ ಅರೆಸೇನಾಪಡೆಯಾದ ರೆವಲ್ಯೂನಷರಿ ಗಾರ್ಡ್ಸ್‌, ‘ಮಕ್ಕಳ ಕ್ರಿಮಿನಲ್‌ ಹಂತಕ ಈಗಾಗಲೇ ನಮ್ಮ ದಾಳಿಗೆ ಬಲಿಯಾಗಿದ್ದಾನೆ.. ನೆತನ್ಯಾಹು ಬದುಕಿದ್ದೇ ಆಗಿದ್ದಲ್ಲಿ ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದೆ.

ಎಕ್ಸ್‌ನಲ್ಲಿ ಪ್ರತ್ಯಕ್ಷ:

ತಮ್ಮ ಸಾವಿನ ಸುದ್ದಿ ಹರಿದಾಡುತ್ತಿರುವ ನಡುವೆ ಎಕ್ಸ್‌ನಲ್ಲಿ ತಮ್ಮ ವಿಡಿಯೋ ಪೋಸ್ಟ್‌ ಮಾಡಿರುವ ನೆತನ್ಯಾಹು, ‘ನಾನು ಜೀವಂತವಿದ್ದೇನೆ’ ಎಂದು ಪರೋಕ್ಷವಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಕೆಫೆಯೊಂದರಲ್ಲಿ ಕಾಣಿಸಿಕೊಳ್ಳುವ ಅವರು, ಕಾಫಿ ಕುಡಿಯುತ್ತಾ, ‘ನಾನಿಲ್ಲಿ ಜೀವಂತ ಹಾಗೂ ಸುರಕ್ಷಿತವಾಗಿ ಇದ್ದೇನೆ’ ಎಂದಿದ್ದಾರೆ.

6 ಬೆರಳು ಎಂಬುದು ಸುಳ್ಳು:

ಜತೆಗೆ ತಮ್ಮೆರಡೂ ಕೈಗಳನ್ನು ಕ್ಯಾಮೆರಾದ ಮುಂದೆ ತೋರಿಸಿದ್ದಾರೆ. ಈ ಮೂಲಕ, ತಮ್ಮ ಹಿಂದಿನ ವಿಡಿಯೋ ಎಐ ನಿರ್ಮಿತವಾಗಿದ್ದು, ಅದರಲ್ಲಿ 6 ಬೆರಳುಗಳಿದ್ದವು ಎಂದ ಸುದ್ದಿ ಹಬ್ಬಿಸಿದ್ದವರಿಗೆ ತಿರುಗೇಟು ನೀಡಿದ್ದಾರೆ.

ಆಗಿದ್ದೇನು?

- ನೆತನ್ಯಾಹು ಇರಾನ್‌ ದಾಳಿಯಲ್ಲಿ ಸಾವು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಗುಸುಗುಸು

- ಇದರ ಬೆನ್ನಲ್ಲೇ ನೆತನ್ಯಾಹು ಅವರ ಕಚೇರಿಯಿಂದ ‘ನೆತನ್ಯಾಹು ಬದುಕಿದ್ದಾರೆ’ ಎಂದು ಸ್ಪಷ್ಟನೆ

- ಇದರ ನಡುವೆ, ‘ನೆತನ್ಯಾಹು ಬದುಕಿದ್ದರೆ ಹುಡುಕಿ ಕೊಂದೇ ಕೊಲ್ತೀವಿ’ ಎಂದ ಇರಾನ್‌ ಸೇನಾಪಡೆ

- ಕೊನೆಗೆ ಟ್ವೀಟರಲ್ಲಿ ವಿಡಿಯೋ ಸಮೇತ ನೆತನ್ಯಾಹು ಪ್ರತ್ಯಕ್ಷ. ನಾನು ಜೀವಂತ ಎಂದು ಸ್ಪಷ್ಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು
ಯುಎಇಗೆ ಇಂದಿನ ಎಲ್ಲಾ ವಿಮಾನಗಳು ರದ್ದು! ಏರ್ ಇಂಡಿಯಾ, ಇಂಡಿಗೋ ದಿಢೀರ್ ಕ್ರಮ