
ಬೀಜಿಂಗ್[ಡಿ.07]: ಗಂಡ ಹೆಂಡತಿ ನಡುವಿನ ಪ್ರೀತಿ ವ್ಯಕ್ತಪಡಿಸುವ ಸುಂದರವಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತುಂಬು ಗರ್ಭಿಣಿಯಾಗಿದ್ದ ಪತ್ನಿಗೆ, ತಾನೇ 'ಕುರ್ಚಿ'ಯಾಗಿ ಆಸರೆಯಾದ ಗಂಡನ ವಿಡಿಯೋ ಇದು.
ಯಾದಗಿರಿ: ಚಲಿಸುತ್ತಿರುವ ಬಸ್‌ನಲ್ಲಿಯೇ ನಡೆಯಿತು ಹೆರಿಗೆ..!
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪತಿಯೊಬ್ಬ ತನ್ನ ಗರ್ಭಿಣಿ ಹೆಂಡತಿಯೊಂದಿಗೆ ಆಕೆಯ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದಾನೆ. ಇಬ್ಬರೂ ಬಹಳಷ್ಟು ಸಮಯ ತಮ್ಮ ಸರದಿಗೆ ಕಾದು ನಿಂತಿದ್ದಾರೆ. ಆದರೆ ಕೆಲ ಸಮಯದ ಬಳಿಕ ತುಂಬು ಗರ್ಭಿಣಿಯಾಗಿದ್ದ ಪತ್ನಿಗೆ ಕಾಲು ನೋವು ಶುರುವಾಗಿದೆ. ಈ ವೇಳೆ ಗಂಡ ಲ್ಲಿ ಕುಳಿತುಕೊಂಡಿದ್ದವರ ಬಳಿ ಸೀಟು ಬಿಟ್ಟುಕೊಡುವಂತೆ ಕೇಳಿಕೊಂಡಿದ್ದಾನೆ, ಆದರೆ ಅವರು ನಿರಾಕರಿಸಿದ್ದಾರೆ.
ಹೀಗಿರುವಾಗ ತನ್ನ ಪತ್ನಿಯ ನೋವು ನೋಡಲಾಗದ ಪತಿ ತಾನೇ 'ಕುರ್ಚಿ'ಯಂತೆ ಕುಳಿತು, ಪತ್ನಿಯನ್ನು ತನ್ನ ಬೆನ್ನ ಮೇಲೆ ಕುಳಿತುಕೊಳ್ಳುವಂತೆ ತಿಳಿಸಿದ್ದಾನೆ. ಪತ್ನಿಗೆ ಆಸರೆಯಾದ ಈ ಪತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ.
ಮಕ್ಕಳನ್ನು ಹಡೆದ ಹೆಣ್ಮಕ್ಕಳ ಮೆದುಳು ಶಾರ್ಪ್ ಆಗುತ್ತಂತೆ!
ವರದಿಗಳನ್ವಯ ಈ ಘಟನೆ ಈಶಾನ್ಯ ಚೀನಾದ ಹೇಯಿಲೋಂಗ್ಜಿಯಾಂಗ್ ನಲ್ಲಿ ನಡೆದಿದೆ ಎನ್ನಲಾಗಿದೆ. ಇಲ್ಲಿನ ಪೊಲೀಸರು ಶಾರ್ಟ್ ವಿಡಿಯೋ ಆ್ಯಪ್ Douyin ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ 70ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಈ ದೃಶ್ಯ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ