ಸಾವಿರಕ್ಕೂ ಹೆಚ್ಚು ಮಸೀದಿ ಕೆಡವಿದ ಚೀನಾ; ಭಯಾನಕ ವರದಿ ಬಹಿರಂಗ!

By Suvarna NewsFirst Published Sep 25, 2020, 7:44 PM IST
Highlights

ಭಾರತದ ಜೊತೆ ಸದಾ ಕಿರಿಕ್ ಮಾಡುತ್ತಾ ಗಡಿ ವಿಚಾರ ಕೆಣಕುತ್ತಿರುವ ಚೀನಾದ ಕುತಂತ್ರಿ ಬುದ್ದಿ ಈಗಾಗಲೇ ಜಗಜ್ಜಾಹೀರಾಗಿದೆ. ಇದರೊಂದಿಗೆ ಚೀನಾ ತನ್ನ ದೇಶದಲ್ಲಿ ನಡೆಸುತ್ತಿರುವ ದೌರ್ಜನ್ಯವೂ ಬಹಿರಂಗವಾಗಿದೆ. ಒಂದು ವರ್ಷದಲ್ಲಿ ಚೀನಾ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಮಸೀದಿಯನ್ನು ಕೆಡವಲಾಗಿದೆ.

ಬೀಜಿಂಗ್(ಸೆ.25): ಚೀನಾ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಇದೀಗ ಬಹಿರಂಗವಾಗಿದೆ. ಭಾರತ ಸೇರಿದಂತೆ ಇತರ ದೇಶದ ಗಡಿ ವಿಚಾರದಲ್ಲಿ ಸದಾ ಒಂದಲ್ಲೊಂದು ವಿವಾದ ಸೃಷ್ಟಿಸುವ ಚೀನಾ, ತನ್ನ ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ ನಡೆಸುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ವರದಿಯಲ್ಲಿ ಚೀನಾದ ಅಸಲಿ ಮುಖ ಬಯಲಾಗಿದೆ.

ಮಾತುಕತೆಗೂ ಮುನ್ನ ಭಾರತ ವಶಪಡಿಸಿಕೊಂಡ ಪ್ರದೇಶದಿಂದ ಹಿಂದೆ ಸರಿಯಲಿ: ಚೀನಾ!.

ಆಸ್ಟ್ರೇಲಿಯಾ ಸ್ಟ್ರಾಟಜಿಕ್ ಪಾಲಿಸಿ ಸಂಸ್ಥೆ(ASPI) ನಡೆಸಿದ ಅಧ್ಯಯನದಲ್ಲಿ ಚೀನಾದ ಕರಾಳ ಮುಖ ಬಹಿರಂಗವಾಗಿದೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಸೀದಿಗಳನ್ನು ಕೆಡವಲಾಗಿದೆ. ಕಳೆದ ಒಂದು ವರ್ಷದಲ್ಲಿ ಚೀನಾದಲ್ಲಿ 16,000 ಮಸೀದಿಗಳನ್ನು ಕಡೆವಲಾಗಿದೆ. ಇದರಲ್ಲಿ 8,500 ಮಸೀದಿಗಳನ್ನು ಸಂಪೂರ್ಣ ಕೆಡವಲಾಗಿದ್ದು, ಇನ್ನುಳಿದ ಮಸೀದಿಗಳನ್ನು ಭಾಗಶಃ ಕೆಡವಲಾಗಿದೆ ಎಂದು ವರದಿ ಹೇಳಿದೆ.

ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ಡೀಲ್‌: 5 ವರ್ಷದ ರಹಸ್ಯ ಬಟಾಬಯಲು!

ASPI ಇದಕ್ಕೆ ಸಂಬಂಧಿಸಿದ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕ್ಸಿನ್‌ಜಿಯಾಂಗ್ ವಲಯದಲ್ಲಿ ಬುದ್ದ ದೇವಾಲಯಗಳು ಹಾಗೂ ಕ್ರೈಸ್ತರ ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದಿದೆ. 

ಚೀನಾ ಈ ಅಧ್ಯಯನ ವರದಿಯನ್ನು ನಿರಾಕರಿಸಿದೆ. ಮುಸ್ಲಿಂ ರಾಷ್ಟ್ರದಲ್ಲಿರುವುದಕ್ಕಿಂತ ಹೆಚ್ಚಿನ ಮಸೀದಿಗಳು ಚೀನಾದಲ್ಲಿದೆ. ಇಲ್ಲಿ ಮುಸ್ಲಿಂಮರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಕೆಲ ಚೀನಾ ವಿರೋಧಿ ಹಾಗೂ ದೇಶದ ಸುರಕ್ಷತೆಗೆ ಧಕ್ಕೆ ತರುವ ಸಂಸ್ಥೆಗಳನ್ನು ಮುಚ್ಚಲಾಗಿದೆ. ಹಾಗೂ ಅಂತಹ ಕಟ್ಟಡಗಳನ್ನು ಕೆಡವಲಾಗಿದೆ. ಆದರೆ ಮಸೀದಿಯನ್ನು ಚೀನಾ ಯಾವತ್ತೂ ಟಾರ್ಗೆಟ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದೆ.

click me!