ಚೀನಾದಲ್ಲಿ HR ಮ್ಯಾನೇಜರ್ ಒಬ್ಬರು 22 ನಕಲಿ ಉದ್ಯೋಗಿಗಳನ್ನು ಸೃಷ್ಟಿಸಿ ₹18 ಕೋಟಿ ಕದ್ದಿದ್ದಾರೆ. ವೇತನ ಪರಿಶೀಲನಾ ಪ್ರಕ್ರಿಯೆ ಇಲ್ಲದ ಕಾರಣ ಈ ವಂಚನೆ ಬೆಳಕಿಗೆ ಬಂದಿದೆ. ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಮಾನವ ಸಂಪನ್ಮೂಲ ಮ್ಯಾನೇಜರ್( human resources manager) ಒಬ್ಬರ 22 ನಕಲಿ ಉದ್ಯೋಗಿಗಳನ್ನು ಸೃಷ್ಟಿಸಿ 16 ಮಿಲಿಯನ್ ಯುವಾನ್ ( ₹ 18 ಕೋಟಿ) ಸಂಬಳ ಕದಿಯುತ್ತಿದ್ದ ಘಟನೆ ಚೀನಾದಲ್ಲಿ ನಡೆದಿದೆ ಆರೋಪಿಯನ್ನು ಯಾಂಗ್ ಎಂದು ಗುರುತಿಸಲಾಗಿದ್ದು, ಶಾಂಘೈನಲ್ಲಿರುವ ಕಾರ್ಮಿಕ ಸೇವಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಟೆಕ್ ಸಂಸ್ಥೆಗೆ ನಿಯೋಜಿಸಲಾದ ಕಾರ್ಮಿಕರ ವೇತನವನ್ನು ನಿರ್ವಹಿಸುವ ಜವಾಬ್ದಾರಿ ಆತನಿಗೆ ನೀಡಲಾಗಿತ್ತು.
ಉದ್ಯೋಗಿ ನೇಮಕಾತಿ ಮೇಲೆ ತನಗೆ ಮಾತ್ರ ನಿಯಂತ್ರಣವಿದೆ, ವೇತನ ಪರಿಶೀಲನಾ ಪ್ರಕ್ರಿಯೆ ಇಲ್ಲ ಎಂದು ಯಾಂಗ್ ಯಾವಾಗ ಅರಿತುಕೊಂಡನೋ ಅಂದಿನಿಂದ ದುಡ್ಡು ಮಾಡುವ ಯೋಜನೆ ಮಾಡಿಕೊಂಡನು. ಮೊದಲು ಸನ್ ಎಂಬ ಕಾಲ್ಪನಿಕ ಉದ್ಯೋಗಿಯನ್ನು ಸೃಷ್ಟಿಸಿ ತನ್ನ ಹೆಸರಿನಲ್ಲಿ ಸಂಬಳ ಪಾವತಿಗೆ ಅರ್ಜಿ ಸಲ್ಲಿಸಿದನು. ಸಂಬಳವನ್ನು ಸನ್ ಖಾತೆಗೆ ನಿರ್ದೇಶಿಸುವ ಬದಲು, ಯಾಂಗ್ ಹಣವನ್ನು ತನ್ನ ಹೆಸರಿನಲ್ಲಿ ನೋಂದಾಯಿಸದಿದ್ದರೂ, ಅವನು ನಿಯಂತ್ರಿಸುವ ಬ್ಯಾಂಕ್ ಕಾರ್ಡ್‌ಗೆ ವರ್ಗಾಯಿಸಿದನು.
DRDO ನೇಮಕಾತಿ 2025: ಸೈಂಟಿಸ್ಟ್ ಹುದ್ದೆಗೆ 2.20 ಲಕ್ಷ ಸಂಬಳ, ಪರೀಕ್ಷೆ ಇಲ್ಲದೆ ನೇರ ಸಂದರ್ಶನ!
ಕಾರ್ಮಿಕ ಸೇವಾ ಕಂಪನಿಯು ಸನ್ ಅವರ ಸಂಬಳವನ್ನು ಸ್ವೀಕರಿಸದಿರುವುದನ್ನು ಗಮನಿಸಿದಾಗ, ಯಾಂಗ್ ಟೆಕ್ ಸಂಸ್ಥೆಯು ಪಾವತಿಯನ್ನು ವಿಳಂಬ ಮಾಡಿದೆ ಎಂದು ಸುಳ್ಳು ಹೇಳಿಕೊಂಡ. ಮುಂದಿನ ಎಂಟು ವರ್ಷಗಳಲ್ಲಿ ಅಂದರೆ 2014ರಿಂದ ಪ್ರಾರಂಭಿಸಿ ಬರೋಬ್ಬರಿ 22 ನಕಲಿ ಉದ್ಯೋಗಿಗಳ ದಾಖಲೆಗಳನ್ನು ಸೃಷ್ಟಿಸಿ . ಅನುಮಾನ ಬರದಂತೆ ಸಂಬಳ ಮತ್ತು ಬೇರ್ಪಡಿಕೆ ವೇತನವನ್ನು ಜೇಬಿಗೆ ಹಾಕಿಕೊಂಡಿದ್ದಾನೆ. ಈ ನಕಲಿ ಉದ್ಯೋಗಿಗಳ ನಿಖರವಾದ ಸಂಬಳವನ್ನು ಬಹಿರಂಗಪಡಿಸಲಾಗಿಲ್ಲ.
2022ರಲ್ಲಿ ಟೆಕ್ ಸಂಸ್ಥೆಯ ಹಣಕಾಸು ವಿಭಾಗವು ಸನ್ ಪರಿಪೂರ್ಣ ಹಾಜರಾತಿ ಮತ್ತು ಸಮಯಕ್ಕೆ ಸರಿಯಾಗಿ ಸಂಬಳ ಪಡೆಯುತ್ತಿರುವುದನ್ನು ಗಮನಿಸಿದಾಗ ಈ ಹಗರಣ ಬೆಳಕಿಗೆ ಬಂತು. ಆದರೆ ಯಾರೂ ಅವನನ್ನು ಕೆಲಸದಲ್ಲಿ ನೋಡಿರಲಿಲ್ಲ. ಕಂಪನಿಯು ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿತು. ಆಗ ವೇತನ ದಾಖಲೆಗಳು ಮತ್ತು ಬ್ಯಾಂಕ್ ವಹಿವಾಟುಗಳ ತನಿಖೆ ನಡೆಯಿತು. ತನಿಖೆಯಿಂದ ಯಾಂಗ್‌ನ ವಂಚನೆ ಬೆಳಕಿಗೆ ಬಂತು. ಸುಮಾರು 10 ವರ್ಷಗಳಿಂದ ಈ ಹಗರಣ ನಡೆದಿತ್ತು.
ಯಾಂಗ್ ಕಂಪೆನಿಯಲ್ಲಿ ನಡೆಸಿದ ಹಗರಣಕ್ಕೆ 10 ವರ್ಷ 2 ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆತನ ಮತದಾನದ ಹಕ್ಕುಗಳನ್ನು ಒಂದು ವರ್ಷದ ಅವಧಿಗೆ ಕಸಿದುಕೊಳ್ಳಲಾಗಿದೆ ಮತ್ತು ದಂಡ ವಿಧಿಸಲಾಯಿತು. ಹೆಚ್ಚುವರಿಯಾಗಿ, ಕದ್ದ ಹಣದಲ್ಲಿ 1.1 ಮಿಲಿಯನ್ ಯುವಾನ್ ( ₹ 1.2 ಕೋಟಿ) ಹಿಂದಿರುಗಿಸಲು ಮತ್ತು ಅವರ ಕುಟುಂಬವು ಇನ್ನೂ 1.2 ಮಿಲಿಯನ್ ಯುವಾನ್ ( ₹ 1.3 ಕೋಟಿ) ಮರುಪಾವತಿಸಲು ಆದೇಶಿಸಲಾಗಿದೆ.
ಚೀನಾದಲ್ಲಿ ಕಾರ್ಮಿಕ ಸೇವಾ ಕಂಪನಿಯ ವೇತನದಾರರ ವ್ಯವಸ್ಥೆಯು ದೊಡ್ಡ ನ್ಯೂನತೆಗಳನ್ನು ಹೊಂದಿದ್ದು, ಯಾಂಗ್‌ನಂತಹ ವ್ಯಕ್ತಿಗಳು ಅವುಗಳ ಲಾಭ ಪಡೆಯುತ್ತಿದ್ದಾರೆ ಎಂದು ಆನ್‌ಲೈನ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಗೂಗಲ್ ನಿಂದ ಭರ್ಜರಿ ಉದ್ಯೋಗ: BA, B.Com ಪದವೀಧರರಿಗೂ ಅವಕಾಶ, 50 ಲಕ್ಷ ಸಂಬಳ!
ಚೀನಾದಲ್ಲಿ ಉದ್ಯೋಗಿಗಳು ಆರ್ಥಿಕ ಲಾಭಕ್ಕಾಗಿ ತಮ್ಮ ಉದ್ಯೋಗ ಸ್ಥಾನಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಸಾಮಾನ್ಯ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಶಾಂಘೈನ ಮಹಿಳೆಯೊಬ್ಬರು ವಿಚ್ಛೇದನದ ನಂತರ ಬಾರ್‌ನಲ್ಲಿ ಪುರುಷ ಮಾಡೆಲ್‌ಗಳನ್ನು ನೇಮಿಸಿಕೊಳ್ಳಲು ಸಾರ್ವಜನಿಕ ನಿಧಿಯಿಂದ 4.5 ಮಿಲಿಯನ್ ಯುವಾನ್ ( ₹ 5 ಕೋಟಿ) ಬಳಸಿದರು. ಮತ್ತೊಂದು ಪ್ರಕರಣದಲ್ಲಿ, ಶಾಂಘೈನಲ್ಲಿರುವ ಒಬ್ಬ ಅಕೌಂಟೆಂಟ್ ತನ್ನ ಒಂಬತ್ತು ವರ್ಷದ ಮಗನನ್ನು ನಿರ್ಮಾಣ ಗುತ್ತಿಗೆದಾರನಾಗಿ ಪಟ್ಟಿ ಮಾಡಿ ಮಗುವಿನ ಹೆಸರಿನಲ್ಲಿ 22 ಮಿಲಿಯನ್ ಯುವಾನ್ ( ₹ 25 ಕೋಟಿ) ವೇತನವನ್ನು ದುರುಪಯೋಗಪಡಿಸಿಕೊಂಡನು.