ಮುಸ್ಲಿಂ ದೇಶದಲ್ಲಿ 2600 ವರ್ಷಗಳ ಹಳೆಯದಾದ ದೇಗುಲ, ಮೂರು ವಿಗ್ರಹ, ದೊಡ್ಡ ಖಜಾನೆ ಪತ್ತೆ

ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ  2600 ವರ್ಷಗಳಷ್ಟು ಹಳೆಯದಾದ ದೇವಸ್ಥಾನ ಪತ್ತೆಯಾಗಿದೆ. ದೇಗುಲದಲ್ಲಿ ವಿಗ್ರಹಗಳು, ಚಿನ್ನದ ಆಭರಣಗಳು ಮತ್ತು ನಿಧಿಗಳು ದೊರೆತಿವೆ. 

2600-year-old temple three idols huge treasure discovered in Muslim country mrq

ನವದೆಹಲಿ: ಮುಸ್ಲಿಂ ಪ್ರಾಬಲ್ಯವುಳ್ಳ ದೇಶದಲ್ಲಿ ಸುಮಾರು 2,600 ವರ್ಷಗಳಷ್ಟು ಹಳೆಯದಾದ ದೇವಸ್ಥಾನವೊಂದು ಪತ್ತೆಯಾಗಿದೆ. ದೇವಸ್ಥಾನದಲ್ಲಿ ಕೆಲವು ವಿಗ್ರಹಗಳು ಮತ್ತು ಪಾತ್ರೆಯಲ್ಲಿ ಮುಚ್ಚಿಟ್ಟ ಚಿನ್ನ ದೊರೆತಿದೆ ಎಂದು ವರದಿಯಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಉತ್ಖನನ ನಡೆಸುತ್ತಿದ್ದ ಸಂದರ್ಭದಲ್ಲಿ ಚಿನ್ನದ ಆಭರಣಗಳು, ದೇವರ ಮೂರ್ತಿಗಳು ಜೊತೆಯಲ್ಲಿ ಭವ್ಯವಾದ ನಿಧಿ ದೊರೆತಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಈ ನಿಧಿ ಪತ್ತೆಯಾಗಿದ್ದು ಎಲ್ಲಿ ಎಂಬುದರ ಮಾಹಿತಿ ಇಲ್ಲಿದೆ. 

ಪ್ರಾಚೀನ ಪರಂಪರೆಗೆ ವಿಶ್ವಪ್ರಸಿದ್ಧವಾಗಿರುವ ಈಜಿಪ್ಟ್ ದೇಶದ ಕಾರ್ನಾಕ್ ದೇವಾಲಯ ಸಂಕೀರ್ಣದಲ್ಲಿ ಭವ್ಯವಾದ ನಿಧಿ ಪತ್ತೆಯಾಗಿದೆ. ಈಜಿಪ್ಟ್ ಸಾವಿರಾರು ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿರುವ ಪ್ರದೇಶವಾಗಿದೆ. ಈಜಿಪ್ಟ್‌ನಲ್ಲಿಯ ಪಿರಮಿಡ್‌ಗಳ ರಹಸ್ಯಗಳು ಇಡೀ ಜಗತ್ತನ್ನು ಪ್ರತಿದಿನವೂ ಅಚ್ಚರಿಗೊಳಿಸುತ್ತವೆ. ಈಜಿಪ್ಟ್ ಪಿರಮಿಡ್ ಮತ್ತು ಮಮ್ಮಿಗಳ ವಿಷಯಗಳನ್ನಾಧರಿಸಿ ಹಲವು ಸಿನಿಮಾಗಳು ಬಿಡುಗಡೆಯಾಗಿ ಯಶಸ್ಸು ಕಂಡಿವೆ. 

Latest Videos

ಇತ್ತೀಚೆಗೆ ಕಾರ್ನಾಕ್ ದೇವಾಲಯ ಸಂಕೀರ್ಣದಲ್ಲಿ 2600 ವರ್ಷಗಳಷ್ಟು ಹಳೆಯದಾದ ನಿಧಿ ಪತ್ತೆಯಾಗಿದೆ ಎಂದು ವರದಿಯಾಗುತ್ತಿದೆ. ಆದ್ರೆ ಎಷ್ಟು ಪ್ರಮಾಣದ ನಿಧಿ ಪತ್ತೆಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಹೊಸ ಉತ್ಖನನ  ಈಜಿಪ್ಟಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ಕುರಿತಾದ ವಿಶೇಷವಾದ ಮಾಹಿತಿಯನ್ನು ನೀಡುತ್ತಿದೆ. ಸುಮಾರು 2,600 ವರ್ಷಗಳ ಹಿಂದೆ ಮೂರ್ತಿ ಪೂಜೆ ನಡೆಯುತ್ತಿತ್ತು. ಅಂದಿನ ಜನರು ದೇವರ ಚಿತ್ರದ ಕೆತ್ತನೆಯುಳ್ಳ ತಾಯತಗಳನ್ನು ಧರಿಸುತ್ತಿದ್ದರು ಎಂಬ ವಿಷಯವೂ ಸಹ ಬೆಳಕಿಗೆ ಬಂದಿದೆ. 

ಕಾರ್ನಾಕ್ ದೇವಾಲಯ ಸಂಕೀರ್ಣದ ವೇಳೆ ನಡೆದ ಉತ್ಖನನ ಸಮಯದಲ್ಲಿ ಚಿನ್ನದ ನಾಣ್ಯಗಳು, ಚಿನ್ನದ ತಾಯತಗಳು ಮತ್ತು ಮೂರು ವಿಗ್ರಹಗಳನ್ನು ಕಂಡುಕೊಂಡಿದ್ದಾರೆ. ಚಿನ್ನದ ನಾಣ್ಯಗಳು ಮತ್ತು ತಾಯತಗಳು ಪಾತ್ರೆಯೊಂದರಲ್ಲಿ ಕಂಡು ಬಂದಿವೆ ಈ ಮೂರು ವಿಗ್ರಹಗಳು ಈಜಿಪ್ಟ್‌ನ ಮೂರು ದೇವರುಗಳಿಗೆ ಸೇರಿದೆ ಎಂದ ಹೇಳಲಾಗಿದೆ. ಆ ಮೂರು ವಿಗ್ರಹಗಳು ಹೀಗಿವೆ 
1.ಅಮುನ್: ಥೀಬ್ಸ್‌ನ ಆಡಳಿತ ದೇವರು
2.ಮಟ್: ತಾಯಿ ದೇವತೆ ಮತ್ತು ಅಮುನ್‌ನ ಪತ್ನಿ,
3.ಖೋನ್ಸು:  ಚಂದ್ರ ದೇವರು ಮತ್ತು ಅಮುನ್-ಮಟ್‌ನ ಮಗ

ಇದನ್ನೂ ಓದಿ: ಭೂಮಿ ಆಗೆಯುವಾಗ ಪವಾಡ, ತ್ರಿಶೂಲ, ಉಂಗುರ ಸೇರಿ ಚಿನ್ನದ ನಿಧಿಗೆ ಕಾವಲಿತ್ತು ನಾಗರ ಹಾವು!

ಉತ್ಖನನದಲ್ಲಿ ಕೆಲ ತಾಯತದ ಜೊತೆಯಲ್ಲಿ ಕೆಲವು ಉಂಗುರುಗಳು ಸಹ ದೊರೆತಿವೆ. ಈ ತಾಯತ ಮತ್ತು ಉಂಗುರಗಳ ಮೇಳೆ ದೇವರ ಪ್ರತಿಮೆಯ ಚಿತ್ರಗಳನ್ನು ಹೊಂದಿದೆ. ಈ ತಾಯತ ಮತ್ತು ಉಂಗುರ ಧರಿಸುವ ವ್ಯಕ್ತಿಯನ್ನು ದೇವರು ರಕ್ಷಿಸಲಾಗುತ್ತದೆ ಎಂದು ನಂಬಲಾಗಿತ್ತು.

ಕಾರ್ನಾಕ್ ದೇವಾಲಯವು ಈಜಿಪ್ಟಿನ ಅತ್ಯಂತ ಪ್ರಮುಖ ಮತ್ತು ದೀರ್ಘಕಾಲದಿಂದ ಉಳಿದಿರುವ ಧಾರ್ಮಿಕ ಸಂಕೀರ್ಣವಾಗಿದೆ.ಕಾರ್ನಾಕ್ ದೇವಾಲಯ ಸುಮಾರು 4000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಹಲವು ಬಾರಿ ಕಾರ್ನಾಕ್ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಗಿದೆ. ಹಾಗೆಯ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸದಾ ಉತ್ಖನನ ಕ್ರಿಯೆ ನಡೆಯುತ್ತಿರುತ್ತದೆ. ಕಾರ್ನಾಕ್ ದೇವಾಲಯ ಸಂಕೀರ್ಣವು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಪ್ರಮುಖ ತಾಣವಾಗಿದೆ, ಅಲ್ಲಿ ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯ ತಾಣಗಳು ಪತ್ತೆಯಾಗಿವೆ.

ಇದನ್ನೂ ಓದಿ: 'ಛಾವಾ' ಎಫೆಕ್ಟ್​: ಕೋಟೆಯನ್ನು ಅಗೆದು ಚಿನ್ನದ ನಿಧಿ ಹುಡುಕಿದ ಗ್ರಾಮಸ್ಥರು! ವಿಡಿಯೋ ವೈರಲ್​

click me!