ಪಾಕಿಸ್ತಾನ ಸೇನೆಯಲ್ಲಿ ಹಿಂದೂ ಸೈನಿಕರ ಸಂಖ್ಯೆ ಎಷ್ಟು?

Published : Dec 11, 2024, 08:57 AM IST
ಪಾಕಿಸ್ತಾನ ಸೇನೆಯಲ್ಲಿ ಹಿಂದೂ ಸೈನಿಕರ ಸಂಖ್ಯೆ ಎಷ್ಟು?

ಸಾರಾಂಶ

ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, 2000ದವರೆಗೂ ಸೇನೆಯಲ್ಲಿ ಕೆಲಸ ಮಾಡಲು ಅವಕಾಶವಿರಲಿಲ್ಲ. 2000ರ ನಂತರ ಹಿಂದೂಗಳು ಸೇನೆ ಸೇರಲು ಆರಂಭಿಸಿದರು.

ಇಸ್ಲಾಮಾಬಾದ್:  ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ 5ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ.90ರಷ್ಟು ಜನರು ಇಸ್ಲಾಂ ಧರ್ಮದ ಪಾಲನೆ ಮಾಡುತ್ತಾರೆ. ಪಾಕಿಸ್ತಾನದಲ್ಲಿ ಹಿಂದೂ, ಕ್ರಿಶ್ಚಿಯನ್ , ಸಿಖ್ ಸೇರಿದಂತೆ ಹಲವು ಧರ್ಮದ  ಜನರು ವಾಸವಾಗಿದ್ದಾರೆ. ಆದ್ರೆ ಈ ಜನಸಂಖ್ಯೆ ತುಂಬಾ ಕಡಿಮೆಯಾಗಿದೆ. ಹಾಗಾಗಿ ಈ ಸಮುದಾಯವದರು ಪಾಕಿಸ್ತಾನದ ಅಲ್ಪಸಂಖ್ಯಾತರಾಗಿದ್ದಾರೆ.  ಸೆಂಟರ್ ಫಾರ್ ಫೀಸ್ ಆಂಡ್ ಜಸ್ಟೀಸ್ 2022ರ ವರದಿ ಪ್ರಕಾರ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಸಂಖ್ಯೆ ಶೇ.1.18ರಷ್ಟಿದೆ. 

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಸೇನೆ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ದೇಶದ ರಕ್ಷಣೆ ಸಂಬಂಧಿಸಿದ ಇಲಾಖೆಗಳಿಂದ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ದೂರವಿರಿಸಿತ್ತು.  ಆದ್ರೆ ಈ ನಿಯಮವನ್ನು 2000ರಲ್ಲಿ ಬದಲಿಸಲಾಗಿತ್ತು.  ನಿಯಮದಲ್ಲಿ ಬದಲಾವಣೆ ಬಳಿ ಸೇನೆಯಲ್ಲಿ ಹಿಂದೂಗಳ ಭರ್ತಿ ಆರಂಭವಾಯ್ತು. 2006ರಲ್ಲಿ ಕ್ಯಾಪ್ಟನ್ ದಾನಿಶ್ ಪಾಕಿಸ್ತಾನ ಸೇನೆಯ ಮೊದಲ ಮುಸ್ಲಿಮೇತರ ಅಧಿಕಾರಿಯಾದರು. 

ಇದನ್ನೂ ಓದಿ: ಹಣದುಬ್ಬರದಿಂದ ದಿವಾಳಿಯಾದ ಪಾಕ್‌ನಲ್ಲಿ 50 ರೂ ಮಾಲ್ ಓಪನ್; ಕ್ಷಣಾರ್ಧದಲ್ಲಿಯೇ ಹಣ ಕೊಡದೇ ಲೂಟಿಗೈದ ಪಾಕಿಸ್ತಾನಿಗಳು

ಕೆಲವು ವರದಿಗಳ ಪ್ರಕಾರ, ಪಾಕಿಸ್ತಾನ ಸೇನೆಯಲ್ಲಿ6,54,000 ಸಕ್ರಿಯ ಸೈನಿಕರು ಮತ್ತು ಸುಮಾರು 5  ಲಕ್ಷ ರಿಸರ್ವಡ್ ಸೈನಿಕರಿದ್ದಾರೆ. 200ರಲ್ಲಿನ ನಿಯಮಗಳಲ್ಲಿನ ಬದಲಾವಣೆಯ ನಂತರ ಸಣ್ಣ ಪ್ರಮಾಣದಲ್ಲಿ ಹಿಂದೂಗಳು ಸಹ ಸೇನೆಗೆ ಸೇರ್ಪಡೆಯಾಗುತ್ತಿದ್ದಾರೆ.  ವರದಿಗಳ ಪ್ರಕಾರ ಪಾಕಿಸ್ತಾನ ಸೇನೆಯಲ್ಲಿ 200 ಹಿಂದೂ ಸೈನಿಕರಿದ್ದಾರೆ.  2022ರವರೆಗೆ ಇಬ್ಬರು ಹಿಂದೂ ಅಧಿಕಾರಿಗಳನ್ನು ಮೇಜರ್ ಸ್ಥಾನಕ್ಕೆ ಪದನ್ನೋತಿ ನೀಡಲಾಗಿತ್ತು.  ಮೇಜರ್ ಡಾ.ಕೈಲಾಶ್ ಕುಮಾರ್ ಮತ್ತು ಮೇಜರ್ ಡಾ.ಅನಿಲ್ ಕುಮಾರ್ ಇಬ್ಬರು ಲೆಫ್ಟಿನಂಟ್ ಕರ್ನಲ್ ಆಗಿ ಪಾಕಿಸ್ತಾನದ ಸೇನೆಯಲ್ಲಿದ್ದರು.

ಸಂಬಳ ಎಷ್ಟು?
ಪಾಕಿಸ್ತಾನದ ಅತ್ಯಂತ ಜೂನಿಯರ್ ಸೈನಿಕರ ಸಂಬಳ ಕನಿಷ್ಠ 11,720 ಪಾಕಿಸ್ತಾನಿ ರೂಪಾಯಿ ನೀಡಲಾಗುತ್ತದೆ. ಈ ಶ್ರೇಣಿಯಲ್ಲಿರುವ ಸೈನಿಕರ ಅತ್ಯಧಿಕ ಸಂಬಳ 23,120 ಪಾಕಿಸ್ತಾನಿ ರೂಪಾಯಿ ಆಗಿದೆ. 22ನೇ ಶ್ರೇಯಾಂಕದಲ್ಲಿ ಸೇವೆ ಸಲ್ಲಿಸುವ ಸೈನಿಕರು ಅತ್ಯಧಿಕ ಸಂಬಳ ಪಡೆಯುತ್ತಾರೆ. 22 ಬಿಪಿಎಸ್‌ ಸೈನಿಕರು 82,320 ರಿಂದ 1,64,560 ಪಾಕಿಸ್ತಾನಿ ರೂಪಾಯಿ ಪಡೆಯುತ್ತಾರೆ. 

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಧರ್ಮ ಬದಲಿಸುತ್ತಿರೋ ಜನರು; ಹೆಚ್ಚಾಗ್ತಿದೆ ಹಿಂದೂಗಳ ಸಂಖ್ಯೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!