ಗೃಹ ಸಚಿವರಿಂದ ಐಜಿಪಿ ಕಿಡ್ನಾಪ್‌ ?

By Kannadaprabha NewsFirst Published Oct 23, 2020, 8:24 AM IST
Highlights

ಐಜಿಪಿ ಕಿಡ್ನಾಪ್ ಆಗಿದ್ದು ಈ ಕಿಡ್ನಾಪ್ ಹಿಂದೆ ಗೃಹ ಸಚಿವರ ಕೈವಾಡವಿದೆ ಎಂದು ಹೇಳಲಾಗಿದೆ. 

ಇಸ್ಲಾಮಾಬಾದ್‌ (ಅ.23): ಸಿಂಧ್‌ ಪ್ರಾಂತ್ಯದ ಐಜಿಪಿಯನ್ನು ಪಾಕಿಸ್ತಾನ ಸೇನೆ ಅಪಹರಿಸಿದ್ದು ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್‌ (ನವಾಜ್‌) ಮುಖಂಡ ಸಫ್ದರ್‌ ಅವಾನ್‌ ಅವರನ್ನು ಬಂಧಿಸಿದ್ದರ ಹಿಂದೆ ಪಾಕ್‌ ಆಂತರಿಕ ವ್ಯವಹಾರಗಳ ಸಚಿವ ಇಜಾಜ್‌ ಶಾ ಕೈವಾಡವಿದೆ ಎಂದು ಹೇಳಲಾಗಿದೆ. 

ಇಮ್ರಾನ್‌ ಖಾನ್‌ ಸರ್ಕಾರದ ವಿರುದ್ಧ ಪ್ರಜಾಸತ್ತಾತ್ಮಕ ಚಳವಳಿಯ ಹೆಸರಿನಲ್ಲಿ 11 ಪಕ್ಷಗಳು ಒಟ್ಟುಗೂಡಿದ್ದು, ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಹಾಗೂ ಪಿಎಂಎಲ್‌ (ನವಾಜ್‌) ಪಕ್ಷದ ಮಧ್ಯೆ ಬಿರುಕು ಮೂಡಿಸಿ ರಾರ‍ಯಲಿಯನ್ನು ವಿಫಲಗೊಳಿಸಲು ಇಜಾಜ್‌ ಶಾ ಅವರು ಸೇನೆಯನ್ನು ಬಳಕೆ ಮಾಡಿಕೊಂಡಿದ್ದಾರೆ. 

ಯುಎಸ್‌ ಸಕ್ರೆಟರಿ ಆಫ್ ಸ್ಟೇಟ್ ಭಾರತಕ್ಕೆ, ಯಾವ ಮಾತುಕತೆ? ...

ಸೇನೆಯ ಜೊತೆ ಉತ್ತಮ ಸಂಬಂಧ ಹೊಂದಿರುವ ಇಜಾಜ್‌, ರೇಂಜರ್‌ಗಳಿಂದ ಬಲವಂತವಾಗಿ ಸಫ್ದರ್‌ ಅವರನ್ನು ಬಂಧಿಸಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಸಿಂಧ್‌ ಪ್ರಾಂತ್ಯದ ಸಿಂಧ್‌ ಐಜಿಪಿಯನ್ನು ಅಪಹರಿಸಿ ಬಲವಂತವಾಗಿ ಸಹಿ ಪಡೆದುಕೊಂಡಿದ್ದಾರೆ. ಇಜಾಜ್‌ ಶಾ ತಮ್ಮ ಅಧಿಕಾರವನ್ನು ಬಳಸಿಕೊಂಡು ಕರಾಚಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

click me!