
ಢಾಕಾ: ನೆರೆ ರಾಷ್ಟ್ರ ಬಾಂಗ್ಲಾದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ ನಡೆಯುತ್ತಿರುವ ದೌರ್ಜನ್ಯಗಳ ಸರಣಿ ಮುಂದುವರೆದಿದೆ. ಒಂದೆಡೆ ಚುನಾವಣೆಗೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದ ಹಿಂದೂ ವ್ಯಕ್ತಿ ನಾಮಪತ್ರ ತಿರಸ್ಕೃತಗೊಳಿಸಲಾಗಿದ್ದರೆ, ಮತ್ತೊಂದು ಕಡೆ ಹಿಂದೂ ಮಹಿಳಾ ಜಿಲ್ಲಾಧಿಕಾರಿಗೆ ಮುಸ್ಲಿಂ ಸಂಘಟನೆಗಳು ಬೆದರಿಕೆ ಹಾಕಿವೆ.
ಫೆ.12ರಂದು ಬಾಂಗ್ಲಾದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಈ ಹಿಂದೆ ಶೇಖ್ ಹಸೀನಾ ಸ್ಪರ್ಧಿಸಿದ್ದ ಗೋಪಲ್‌ಗಂಜ್-2 ಕ್ಷೇತ್ರದಿಂದ ಸ್ಪರ್ಧಿಸಲು ಜತಿಯಾ ಹಿಂದೂ ಮಹಾಜೋತ್ ಎನ್ನುವ ಹಿಂದೂ ಸಂಘಟನೆ ಪ್ರಧಾನ ಕಾರ್ಯದರ್ಶಿ ಗೋವಿಂದ್ ಚಂದ್ರ ಪ್ರಾಮಾಣಿಕ್ ಎನ್ನುವವರು ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣಾ ಆಯೋಗ ಕೊನೆ ಕ್ಷಣದಲ್ಲಿ ಪ್ರಮಾಣಿಕ್ ಅವರು ನಾಮಪತ್ರದಲ್ಲಿ ಸಲ್ಲಿಸಿರುವ ಮತದಾರರ ಸಹಿ ಅಮಾನ್ಯವೆಂದು ಉಮೇದುವಾರಿಕೆ ರದ್ದುಗೊಳಿಸಿದೆ.
ಮತ್ತೊಂದು ಘಟನೆಯಲ್ಲಿ ಕುರಿಗ್ರಾಮ್ - ಇ ಕ್ಷೇತ್ರದಲ್ಲಿ ಜಮಾತೆ-ಇ-ಇಸ್ಲಾಮಿ ಅಭ್ಯರ್ಥಿಯ ನಾಮಪತ್ರವನ್ನು ದ್ವಿಪೌರತ್ವ ಕಾರಣದಿಂದ ತಿರಸ್ಕರಿಸಿದ್ದಕ್ಕೆ ಹಿಂದೂ ಮಹಿಳಾ ಜಿಲ್ಲಾಧಿಕಾರಿ ಅನ್ನಪೂರ್ಣಾ ದೇಬ್ನಾಥ್ ಅವರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಇಸ್ಲಾಮಿಕ್ ಪಕ್ಷದವರು ಡೀಸಿಗೆ ಕೋಮು ನಿಂದನೆ ಮಾಡಿ, ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಢಾಕಾ: ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಹತ್ಯೆಯಾದ ಜೆನ್ ಝೀ ನಾಯಕ ಉಸ್ಮಾನ್ ಹದಿ ಸಾವಿಗೆ ರಾಜಕೀಯ ದ್ವೇಷವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ನಲ್ಲಿ 17 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ಬುಧವಾರ ಪೊಲೀಸರು ನ್ಯಾಯಾಲಕ್ಕೆ ಅರೋಪ ಪಟ್ಟಿ ಸಲ್ಲಿಸಲಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ‘ಹದಿ ರ್‍ಯಾಲಿ, ಕಾರ್ಯಕ್ರಮಗಳಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಛಾತ್ರಾ ಲೀಗ್ ಅನ್ನು ಟೀಕಿಸುತ್ತಿದ್ದರು. ಅವರ ರಾಜಕೀಯ ನಿಲುವುಗಳು, ಹೇಳಿಕೆಗಳನ್ನು ಗಮನಿಸಿ ಸೇಡಿನ ಕಾರಣದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ’ ಎಂದಿದ್ದಾರೆ. ಛಾತ್ರಾ ಲೀಗ್‌ನ ಫೈಸಲ್ ಕರೀಮ್ ಮಸೂದ್ ಶಂಕಿತ ಶೂಟರ್ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿ ಬಂಧನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ