
ಮಾಸ್ಕೋ (ಫೆ.14) ಪುತ್ರ ಶೋಕ ನಿರಂತರ ಅನ್ನೋ ಮಾತಿದೆ. ಪೋಷಕರು ತಮ್ಮ ಎಲ್ಲಾ ಶ್ರಮವಹಿಸಿ ಮಕ್ಕಳಿಗಾಗಿ ಎಲ್ಲವನ್ನು ಮಾಡುತ್ತಾರೆ. ಕೊನೆಗೆ ಮಕ್ಕಳೇ ಕಣ್ಣೆದೆರು ದುರಂತ ಅಂತ್ಯಕಂಡರೆ ಪೋಷಕರ ಕರಳು ಹೇಗಾಗಬೇಡ. ಮಗನಿಗಾಗಿ ತಂದೆ ಪ್ರೀತಿಯಿಂದ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ BMW ಕಾರು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈ ಕಾರು ಖರೀದಿಸಿದ ಕೆಲ ದಿನದಲ್ಲೇ ಮಗ ದುರಂತ ಅಂತ್ಯಕಂಡಿದ್ದ. ಮಗನ ಸಾವಿನ ಸೋವಿನಲ್ಲಿ ತಂದೆಗೆ ಕಾರನ್ನು ಕಣ್ಣೆತ್ತಿ ನೋಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಮಗ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ ಹೃದವಿದ್ರಾವಕ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಂದೆ ತಾಯಿ ಪ್ರೀತಿಯಿಂದಲೇ ಮಗನ ಬೆಳೆಸಿದ್ದಾರೆ. ಇತ್ತ ಮಗ ಕೂಡ ಪೋಷಕರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದ. ಹೀಗಾಗಿ ಮಗ ಏನು ಕೇಳಿದರೂ ಪೋಷರು ಇಲ್ಲ ಎಂದಿಲ್ಲ. ಹಾಗಂತ ದುಬಾರಿ ವಸ್ತುಗಳನ್ನು ಆತ ಕೇಳಿರಲಿಲ್ಲ. ತನಗೊಂದು ಕಾರು ಬೇಕು ಅನ್ನೋದು ಮಗನ ಬಯಕೆಯಾಗಿತ್ತು. ಅದು ತನ್ನ ಅಗತ್ಯಕ್ಕೆ ತಕ್ಕ ಕಾರಾಗಿದ್ದರೆ ಸಾಕು ಅನ್ನೋದು ಮಾತ್ರ ಮಗನ ಬಯಕೆಯಾಗಿತ್ತು. ದುಬಾರಿ, ಐಷಾರಾಮಿ ಕಾರಿನ ಬಗ್ಗೆ ಕನಸು ಕಂಡಿರಲಿಲ್ಲ. ಐಷಾರಾಮಿ ಕಾರು ಖರೀದಿ ಪೋಷಕರಿಗೆ ಕಷ್ಟದ ವಿಚಾರವೂ ಆಗಿರಲಿಲ್ಲ. ಆದೂ ಈತ ಇತಿ ಮಿತಿಯಲ್ಲೇ ಇದ್ದ.
ಮಗನ ಹುಟ್ಟು ಹಬ್ಬಕ್ಕೆ ತಂದೆ ಬರೋಬ್ಬರಿ 6 ಕೋಟಿ ಪೂಪಾಯಿ ಮೌಲ್ಯದ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ವಿಶೇಷ ಅಂದರೆ ಮಗನಿಗೆ ಗೊತ್ತಿಲ್ಲದೆ ಈ ಕಾರು ಬುಕ್ ಮಾಡಲಾಗಿತ್ತು. ಹುಟ್ಟು ಹಬ್ಬದ ದಿನ ಅಚ್ಚರಿಯಾಗಿ ಕಾರು ಉಡುಗೊರೆ ನೀಡಿದ್ದರು. ತಂದೆ ನೀಡಿದ ವಿಶೇಷ ಉಡುಗೊರೆ ನೋಡಿ ಮಗನ ಕೂಡ ಅತೀವ ಸಂಭ್ರಮಿಸಿದ್ದ. ಈ ಕಾರಿನಲ್ಲಿ ಪೋಷಕರನ್ನು ಕೂರಿಸಿ ಸುತ್ತಾಡಿದ್ದ.
ಕಾರು ಮನೆಗೆ ಬಂದ ಕೆಲವೇ ದಿನಗಳಲ್ಲಿ ಮಗ ದುರಂತ ಸಾವು ಕಂಡಿದ್ದಾನೆ. ಮಗನ ಕಳೆದುಕೊಂಡ ಪೋಷಕರು ಗೋಳಾಡಿದ್ದಾರೆ. ನೋವು, ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಗ ಇಲ್ಲದ ಮೇಲೆ ಪ್ರತಿ ದಿನ ಬೆಳಗ್ಗೆ ಆತನ ಕಾರು ನೋಡಿದಾಗ ತಂದೆ ದುಃಖ ಉಮ್ಮಳಿಸಿ ಬರುತ್ತಿತ್ತು. ಅದೆಷ್ಟೇ ನಿಯಂತ್ರಣ ಮಾಡಿದರೂ ಸಾಧ್ಯವಾಗಲಿಲ್ಲ. ಮಗನಿಲ್ಲದ ಮೇಲೆ ಆತನಿಗಾಗಿ ಕೊಡಿಸಿದ ಕಾರು ಯಾಕೆ ಎಂದು ತಂದೆ 6 ಕೋಟಿ ರೂಪಾಯಿ ಮೌಲ್ಯದ ಹೊಸ BMW ಕಾರನ್ನು ಸಮಾಧಿ ಮಾಡಲು ಮುಂದಾಗಿದ್ದಾರೆ.
ಹೊಸ BMW ಕಾರನ್ನು ಮಗನ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ. ಸಮಾಧಿ ಸ್ಥಳದಿಂದ ಮಗನ ಕಾರನ್ನು ಯಾರು ಕದಿಯಬಾರದು ಅಥವಾ ಹೊರತೆಗೆಯಬಾರದು ಎಂದು ತಂದೆ ಕಾರನ್ನುಹೂತು ಹಾಕಲು ಜೆಸಿಬಿ ಮೂಲಕ ಗುಂಡಿ ಅಗೆದಿದ್ದಾರೆ. ಬಳಿಕ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ತಂದು ಕಾರಿನ ಮೇಲೆ ಸುರಿದಿದ್ದಾರೆ. ಸಂಪೂರ್ಣ ಕಾಂಕ್ರಿಟ್‌ನಿಂದ ಗುಂಡಿಯಲ್ಲಿ ಕಾರನ್ನಿಟ್ಟು ಮುಚ್ಚಲಾಗಿದೆ. ಕೊನೆಯಲ್ಲಿ ಕಾರಿನ ಕೀಯನ್ನು ಇದೇ ಗುಂಡಿಗೆ ಎಸೆದು ಮತ್ತಷ್ಟು ಕಾಂಕ್ರೀಟ್‌ನಿಂದ ಮುಚ್ಚಿ ಮಣ್ಣು ಹಾಕಲಾಗಿದೆ.ಈ ವಿಡಿಯೋ ನೋಡಿ ಹಲವರು ಭಾವುಕರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ