
ಢಾಕ (ಫೆ.14) ಶೇಕ್ ಹಸೀನಾ ಪರಾರಿಯಾದ ಬಳಿಕ ಬಾಂಗ್ಲಾದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ಇದೀಗ ಚುನಾವಣೆ ಉತ್ತರ ನೀಡಲಿದೆ ಅನ್ನೋ ನಂಬಿಕೆ ಬಾಂಗ್ಲಾದೇಶಿಗಲ್ಲಿದೆ. ಮೊಹಮ್ಮದ್ ಯೂನಸ್ ಹಂಗಾಮಿ ಸರ್ಕಾರ ಇದ್ದರೂ ಅಮೆರಿಕದ ಕೈಗೊಂಬೆಯಾಗಿತ್ತು ಅನ್ನೋ ಆರೋಪ, ಹಿಂದೂ ವಿರೋಧಿ ನೀತಿಗಳಿಂದಲೇ ವಿವಾದ ಸೃಷ್ಟಿಸಿತ್ತು. ಇದರ ನಡುವೆ ಬಾಂಗ್ಲಾದೇಶದ ಚುನಾವಣೆ ನಡೆದು ತಾರಿಕ್ ರೆಹೆಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಭರ್ಜರಿ ಗೆಲುವು ದಾಖಲಿಸಿದೆ. ಸರಿಸುಮಾರು 2 ದಶಕಗಳ ಬಳಿಕ ಬಿಎನ್‌ಪಿ ಬಾಂಗ್ಲಾದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ವಿಶೇಷ ಅಂದರೆ ಈ ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಒಂದು ಸ್ಥಾನ ಗೆದ್ದು ಅಚ್ಚರಿ ಮೂಡಿಸಿದೆ.
ಬಾಂಗ್ಲಾದೇಶದ ಭೋಲಾ 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಆದರೆ ನೀವು ಅಂದುಕೊಂಡಿರುವ ಬಿಜೆಪಿ ಪಕ್ಷ ಇದಲ್ಲ. ಇದು ಬಾಂಗ್ಲಾದೇಶದ ಬಿಜೆಪಿ ಪಕ್ಷ. ಅಂದರೆ ಬಾಂಗ್ಲಾದೇಶ ಜಾತೀಯ ಪಾರ್ಟಿ. ನಜೀಉರ್ ರೆಹಮಾನ್ ಮನ್ಜೂರ್ ಸ್ಥಾಪಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಅಂದಲೀವೆ ರಹಮಾನ್ ಪಾರ್ಥೋ ಬಿಜೆಪಿ ಪಕ್ಷದಿಂದ ಆರಿಸಿ ಬಂದಿದ್ದಾರೆ.
ಬಾಂಗ್ಲಾದೇಶ ಜಾತೀಯ ಪಾರ್ಟಿ 2001ರಿಂದ 2006ರ ವರೆಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಜಾತಿಯಾ ಪಾರ್ಟಿ ಆಗಿ ಜನ್ಮ ತಾಳಿದ್ದ ಪಾರ್ಟಿ ಬಳಿಕ ಒಡೆದು ಭಾರತೀಯ ಜಾತೀಯ ಪಾರ್ಟಿಯಾಗಿ ಹೊರಹೊಮ್ಮಿತ್ತು. ಇದೀಗ ಬಾಂಗ್ಲಾದೇಶದಲ್ಲಿ ಬಿಜೆಪಿ ಮತ್ತೆ ಪಕ್ಷ ಸಂಘಟನೆ ಬಲಗೊಳಿಸುತ್ತಿದೆ. ಶೇಕ್ ಹಸೀನಾ ಸರ್ಕಾರ ಆಗಮಿಸಿದ ಬಳಿಕ ಅವಾಮಿ ಲೀಗ್ ಬಾಂಗ್ಲಾದೇಶದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತ್ತು. ಇತ್ತ ಬಿಎನ್‌ಪಿ, ಜಮಾಯತ್ ಇಸ್ಲಾಮ್ ಸೇರಿದಂತೆ ಕೆಲ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿತ್ತು. ಇದರ ನಡುವೆ ಬಿಜೆಪಿ ಸೊರಗಿತ್ತು. ಆದರೆ ಇದೀಗ ಮತ್ತೆ ಬಿಜೆಪಿ ಪುಟಿದೆದ್ದಿದಿ. ಒಂದು ಸ್ಥಾನ ಗೆಲ್ಲುವ ಮೂಲಕ ಬಾಂಗ್ಲಾದೇಶದಲ್ಲಿ ಮತ್ತೆ ಪ್ರಬಲ ಪಕ್ಷವಾಗಿ ಹಾಗೂ ಮೈತ್ರಿ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಅನ್ನೋ ಗುರಿಯೊಂದಿಗೆ ಬಿಜೆಪಿ ಹೋರಾಟ ಆರಂಭಿಸಿದೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 297 ಸ್ಥಾನಗಳ ಪೈಕಿ ಬಿಎನ್‌ಪಿ 209 ಸ್ಥಾನ ಗೆದ್ದು ಅಧಿಕಾರಕ್ಕೇರಿದೆ. ಪ್ರಬಲ ಪ್ರತಿಸ್ಪರ್ಧಿ ಪಕ್ಷ ಜಮಾಯತ್ ಇ ಇಸ್ಲಾಮ್ ಪಕ್ಷ 68 ಸ್ಥಾನ ಗೆದ್ದು ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಬಿಎನ್‌ಪಿ ಚೇರ್ಮೆನ್ ತಾರೀಕ್ ರಹೆಮಾನ್ ಬಾಂಗ್ಲಾದೇಶ ಮುಂದಿನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶೇಕ್ ಹಸೀನಾ ಕಾಲದಲ್ಲಿ ದೇಶ ತೊರೆದಿದ್ದ ತಾರೀಕ್ ರಹೆಮಾನ್ ಇದೀಗ ಬಾಂಗ್ಲಾದೇಶದಲ್ಲಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ