2022ರವರೆಗೂ ಸಾಮಾಜಿಕ ಅಂತರ ಅಗತ್ಯ: ಪಾಲಿಸದಿದ್ರೆ ಸೋಂಕು ತೀವ್ರ!

By Kannadaprabha NewsFirst Published Apr 16, 2020, 8:03 AM IST
Highlights

2022ರವರೆಗೂ ಸಾಮಾಜಿಕ ಅಂತರ ಅಗತ್ಯ!| ಅಮೆರಿಕದ ಹಾರ್ವರ್ಡ್‌ ವಿವಿ ತಜ್ಞರಿಂದ ಅಧ್ಯಯನ ವರದಿ| ಸಾಮಾಜಿಕ ಅಂತರ ನಿರ್ಬಂಧ ತೆಗೆದರೆ ಸೋಂಕು ಇನ್ನೂ ತೀವ್ರ

ಕೇಂಬ್ರಿಜ್(ಏ.16)‌: ಕೊರೋನಾ ವೈರಸ್‌ ದಾಳಿಯಿಂದ ಜಗತ್ತು ಪಾರಾಗಬೇಕೆಂದರೆ 2022ರವರೆಗೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅಂದರೆ, ಇನ್ನೂ ಎರಡು ವರ್ಷ ಜಗತ್ತಿನಾದ್ಯಂತ ಸಾಮಾಜಿಕ ನಿರ್ಬಂಧಗಳು ಮುಂದುವರೆಯಬೇಕು ಎಂದು ಅಮೆರಿಕ ಪ್ರಸಿದ್ಧ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳಿದೆ.

ಉಸೇನ್‌ ಬೋಲ್ಟ್‌ ‘ಸಾಮಾಜಿಕ ಅಂತರ’ದ ಜಾಗೃತಿ ಫೋಟೋ ವೈರಲ್‌!

ಸೋಂಕು ಕಡಿಮೆಯಾಗುತ್ತಾ ಹೋದ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿರ್ಬಂಧಗಳನ್ನು ಏಕಾಏಕಿ ತೆಗೆದುಹಾಕಿದರೆ ಎರಡನೇ ಬಾರಿ ಈಗಿನದಕ್ಕಿಂತ ತೀವ್ರವಾಗಿ ಸೋಂಕು ಮರುಕಳಿಸಬಹುದು. ಹೀಗಾಗಿ ಜನರು ಇದೇ ರೀತಿಯ ಎಚ್ಚರಿಕೆಯನ್ನು ಇನ್ನಷು ಕಾಲ ವಹಿಸುವುದು ಅಗತ್ಯ. ಈಗ ಒಮ್ಮೆ ಕೊರೋನಾ ಸೋಂಕು ಸಂಪೂರ್ಣ ನಾಮಾವಶೇಷವಾದರೂ 2024ರ ವೇಳೆಗೆ ಮತ್ತೆ ಈಗ ಉಂಟಾದಂತಹುದೇ ರೀತಿಯ ಸಮಸ್ಯೆಯಾಗಬಹುದು. ಹೀಗಾಗಿ ಈ ವೈರಸ್‌ ಬಗ್ಗೆ ನಿರಂತರ ವಿಚಕ್ಷಣೆ ನಡೆಸುವ ಅಗತ್ಯವಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಅಧ್ಯಯನದ ಕುರಿತ ಪ್ರಬಂಧವನ್ನು ಸೈನ್ಸ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಉಸೇನ್‌ ಬೋಲ್ಟ್‌ ‘ಸಾಮಾಜಿಕ ಅಂತರ’ದ ಜಾಗೃತಿ ಫೋಟೋ ವೈರಲ್‌!

ಸಾರ್ಸ್‌ ಸೋಂಕನ್ನು ವೈದ್ಯಕೀಯ ಪ್ರಯತ್ನಗಳ ಮೂಲಕ ಸಂಪೂರ್ಣವಾಗಿ ನಿರ್ನಾಮ ಮಾಡಿದಂತೆ ಕೊರೋನಾ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ವಾತಾವರಣ ಬದಲಾದಾಗ ಕಾಣಿಸಿಕೊಳ್ಳುವ ಫä್ಲ ರೀತಿಯಲ್ಲಿ ಇದೂ ಆಗಾಗ ಮರುಕಳಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

click me!