ತಮ್ಮ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದ ರುಟ್ಟೆ ಬಳಿಕ ಸಾಮಾನ್ಯ ಸೈಕಲ್ ಏರಿ ಒಬ್ಬರೇ ಮನೆಗೆ ತೆರಳಿದ್ದಾರೆ. ಈ ವೇಳೆ ನೂರಾರು ಹಿಂಬಾಲಕರಾಗಲೀ, ಯಾವುದೇ ವಾಹನ ಇರಲಿಲ್ಲ.

ಆ್ಯಮ್‌ಸ್ಟರ್‌ಡಾಂ: ದೇಶವೊಂದರ ಅಧ್ಯಕ್ಷ, ಪ್ರಧಾನಿ ಎಂದರೆ ಅವರ ಹಿಂದೆ ಹತ್ತಾರು ವಾಹನ, ನೂರಾರು ಬೆಂಬಲಿಗರು ಇರುವುದು ಸಹಜ. ಅದು ಅಧಿಕಾರ ಏರುವ ಸಮಯವೇ ಆಗಲಿ, ಅಧಿಕಾರದಿಂದ ಇಳಿದ ಸಮಯವೇ ಆದರೂ ಹೆಚ್ಚಿನ ವ್ಯತ್ಯಾಸವೇನೂ ಆಗದು. ಆದರೆ ದೂರದ ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ ನಡೆದುಕೊಂಡ ರೀತಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರುಟ್ಟೆ ಸೋಲನಪ್ಪಿ, ಡಿಕ್ ಸ್ಕೂಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ತಮ್ಮ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದ ರುಟ್ಟೆ ಬಳಿಕ ಸಾಮಾನ್ಯ ಸೈಕಲ್ ಏರಿ ಒಬ್ಬರೇ ಮನೆಗೆ ತೆರಳಿದ್ದಾರೆ. ಈ ವೇಳೆ ನೂರಾರು ಹಿಂಬಾಲಕರಾಗಲೀ, ಯಾವುದೇ ವಾಹನ ಇರಲಿಲ್ಲ.

14 ವರ್ಷಗಳ ಕಾಲ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದ ಮಾರ್ಕ್ ರುಟ್ಟೆ, ಸೈಕಲ್ ಮೂಲಕ ತಮ್ಮ ಕಚೇರಿಯಿಂದ ಹಿಂದಿರುಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಮಾರ್ಕ್ ರುಟ್ಟೆ ಅವರ ಸರಳತೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. 14 ವರ್ಷದ ಬಳಿಕ ಪ್ರಧಾನಿ ಮಂತ್ರಿ ಸ್ಥಾನದಿಂದ ಮಾರ್ಕ್ ರುಟ್ಟೆ ಕೆಳಗಿಳಿದಿದ್ದಾರೆ. 

ಜುಲೈ 2ರಂದು ಡಿಕ್ ಸ್ಕೂಫ್ ನೇತೃತ್ವದ ಹೊಸ ಸರ್ಕಾರ ನೆದರ್ಲೆಂಡ್ ನಲ್ಲಿ ರಚನೆಯಾಗಿದೆ. ಡಿಕ್ ಸ್ಕೂಫ್ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಿಕ್ ಸ್ಪೂಕ್ ಪದಗ್ರಹಣ ಮುಗಿದ ಬಳಿಕ ಅಧಿಕಾರವನ್ನು ಹಸ್ತಾಂತರಿಸಿದ ಮಾರ್ಕ್ ರುಟ್ಟೆ ಯಾವುದೇ ಹಿಂಬಾಲಿಕರ ಇಲ್ಲದೇ ಪ್ರಧಾನಿ ಕಚೇರಿಯಿಂದ ತೆರಳಿದ್ದಾರೆ. ಈ ವಿಡಿಯೋವನ್ನು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹಂಚಿಕೊಂಡಿದ್ದಾರೆ. 

ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಯುವತಿಗೆ ಸ್ಥಾನ; ಮಹತ್ವದ ಜವಾಬ್ದಾರಿ ನೀಡಿದ ಕೀರ್ ಸ್ಟಾರ್ಮರ್ 

ನ್ಯಾಟೋ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ

14 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿರುವ ಮಾರ್ಕ್ ರುಟ್ಟೆ, ಈ ವರ್ಷದ ಅಂತ್ಯದಲ್ಲಿ ನ್ಯಾಟೋದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ಕಳೆದ ತಿಂಗಳು ಮಾರ್ಕ್ ರುಟ್ಟೆಯವರನ್ನು ತನ್ನ ಮುಂದಿನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಕೆಲವೇ ದಿನಗಳಲ್ಲಿ ಮಾರ್ಕ್ ರುಟ್ಟೆ ಬ್ರಸೆಲ್ಸ್‌ಗೆ ಶಿಫ್ಟ್ ಆಗಲಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್‌ ಜೊತೆಗಿನ ಯುದ್ಧ ತೀವ್ರತೆ ಪಡೆದುಕೊಂಡರೆ ಯುರೋಪಿಯನ್ ಭದ್ರತೆಗೆ ಅತ್ಯಂತ ನಿರ್ಣಾಯಕ ಸಮಯದಲ್ಲಿ ಮಾರ್ಕ್ ರುಟ್ಟೆ ವಿಶ್ವದ ಅತಿದೊಡ್ಡ ಮಿಲಿಟರಿ ಭದ್ರತಾ ಸಂಸ್ಥೆಯ ಉಸ್ತುವಾರಿ ತೆಗೆದುಕೊಳ್ಳಲಿದ್ದಾರೆ.

ಬ್ರಸೆಲ್ಸ್‌ ಪ್ರಧಾನ ಕಚೇರಿಯಲ್ಲಿ ನಡೆದ 32 ಸದಸ್ಯರ ಸಭೆಯಲ್ಲಿ ಮಾರ್ಕ್ ರುಟ್ಟೆ ಹೆಸರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮಗೊಳಿಸಲಾಗಿತ್ತು. ಜುಲೈ 9 ರಿಂದ 11 ರವರೆಗೆ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಅವರ ಸಹವರ್ತಿ ನಾಯಕರು ಅವರನ್ನು ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ. ಹಾಲಿ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅಧಿಕಾರಾವಧಿ ಅಕ್ಟೋಬರ್ 1ರಂದು ಅಂತ್ಯವಾಗಲಿದೆ. ಒಂದು ದಶಕಕ್ಕೂ ಅಧಿಕ ಕಾಲ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 

ಪವಿತ್ರ ಗಂಗಾ ನದಿಯಲ್ಲಿ ಬಿಕಿನಿ ಧರಿಸಿ ಆಟವಾಡುತ್ತಿರೋ ವಿದೇಶಿಗರು; ವಿಡಿಯೋ ವೈರಲ್

Scroll to load tweet…
Scroll to load tweet…